CBSE BOARD X, asked by sapna789, 1 year ago

plz help me I want kannada vruksha shastra full lesson it's urgent

Answers

Answered by Anonymous
1
ಕಾಲ:- ಸು.ಕ್ರಿ.ಶ. ೧೦೩೧ 
ಸ್ಥಳ:- ಕಿಸುಕಾಡುನಾಡಿನ ಸೈಯಡಿ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ) 
ಆಶ್ರಯ:- ಕಲ್ಯಾಣದ ಚಾಲುಕ್ಯ ವಂಶದ ಒಂದನೇ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. 
ಕೃತಿ:- ‘ಕರ್ಣಾಟಕ ಪಂಚತಂತ್ರಂ’ಕೃತಿಯ ಮೂಲ:- ಗುಣಾಢ್ಯನು ಪೈಶಾಚಿಕ ಭಾಷೆಯಲ್ಲಿ ರಚಿಸಿರುವ ಬೃಹತ್ಕಥೆಯನ್ನು ಆಧಾರವಾಗಿಟ್ಟುಕೊಂಡು ವಸುಭಾಗಭಟ್ಟನು ಸಂಸ್ಕೃತದಲ್ಲಿ ‘ಪಂಚತಂತ್ರ’ ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಸಂಸ್ಕೃತ ಕೃತಿಯನ್ನಾಧರಿಸಿ ‘ಕರ್ಣಾಟಕ ಪಂಚತಂತ್ರಂ’ ಎಂಬ ಕೃತಿಯನ್ನು ರಚಿಸಿರುವುದಾಗಿ ತಾನೇ ಹೇಳಿಕೊಂಡಿದ್ದಾನೆ.

ಕವಿಯ ಬಗ್ಗೆ ಮತ್ತಷ್ಟು ವಿಚಾರ:- 

    ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ) ಎಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ.

         ದುರ್ಗಸಿಂಹನ ಪದ್ಯಗಳು ‘ಸೂಕ್ತಿ ಸುಧಾರ್ಣವ’ ದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿದ್ದಿರಬೇಕೆಂದೂ ಆದರಿಂದ ಇವನ ಕಾಲವು ಕ್ರಿ.ಶ.ಸು. ೧೧೪೫ ಆಗಿದ್ದಿರಬೇಕೆಂದೂ ಕವಿಚರಿತ್ರೆಯ ಪ್ರಥಮ ಸಂಪುಟದಲ್ಲಿ ಶ್ರೀ ಆರ್. ನರಸಿಂಹಾಚಾರ್ಯರು ನಿರ್ಣಯಿಸಿದ್ದರು. ಈ ಅಭಿಪ್ರಾಯವನ್ನೇ ಶ್ರೀ ಎಸ್. ಜಿ. ನರಸಿಂಹಾಚಾರ್ಯರ ಆವೃತ್ತಿಯ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಜಪುರೋಹಿತರು ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳ್ವಿಕೆಯ ಕಾಲದಲ್ಲಿ ಎಂದರೆ ಕ್ರಿ.ಶ. ೧೦೩೭-೧೦೪೨ರ ಅವಯಲ್ಲಿ ದುರ್ಗಸಿಂಹನು ತನ್ನ ಕೃತಿಯನ್ನು ರಚಿಸಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಂ. ಶ್ರೀ. ಮುಗಳಿಯವರು ಸು.ಕ್ರಿ.ಶ. ೧೦೩೦ ಎನ್ನುತ್ತಾರೆ. ಕರ್ಣಾಟಕ ಕವಿಚರಿತ್ರೆಯ ೧೯೬೧ರ ಪರಿಶೋತ ಮುದ್ರಣದಲ್ಲಿ ದುರ್ಗಸಿಂಹನ ಕಾಲವನ್ನು ಕ್ರಿ.ಶ. ಸು. ೧೦೨೫ ಎಂದು ಹೇಳಿದೆ.

       ಪಂಚತಂತ್ರದ ಆರಾ ಪ್ರತಿಯಲ್ಲಿ ದೊರಕಿದ ಒಂದು ಪದ್ಯ ದುರ್ಗಸಿಂಹನ ಕಾಲ ನಿರ್ಣಯ ಮಾಡಲು ಸಹಕಾರಿಯಾಯಿತು. 

ಪದ್ಯ ಹಿಗಿದೆ :
  ಅತಿ ಸಂಪನ್ನತೆವೆತ್ತ ಸದ್ಗೃಹನಿವಾಸಸ್ಥಾನಮಾದ ಪ್ರಜಾಪತಿ
  ಸಂವತ್ಸರ ಚೆತ್ರಮಾಸಸಿತಪಕ್ಷ ದ್ವಾದಶೀ ತಾರಕಾ ಪತಿವಾರಂ
  ಬರೆ ಪಂಚತಂತ್ರಮೆಸೆದತ್ತೀ ಧಾತ್ರಿಯೂಳ್ ದುರ್ಗನಿರ್ಮಿತಮುದ್ಯತ್
  ಕವಿಶೇಖರ ಪ್ರಮದ ಲೀಲಾಪುಷ್ಥಿತಾಮ್ರದ್ರುಮಂ ||
  ವಸುಭಾಗಭಟ್ಟ ಕೃತಿಯಂ
  ವಸುಧಾದಿಪ ಹಿತಮನಖಿಲ ವಿಬುಧಸ್ತುತಮಂ
  ಪೊಸತಾಗಿರೆ ವಿರಚಿಸುವೆಂ
  ವಸುವ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||

     ಈ ಪದ್ಯವನ್ನು ಆಧರಿಸಿ ರಾಷ್ಥ್ರಕವಿ ಗೋವಿಂದ ಪೈ ಅವರು ಜಯಸಿಂಹ ಜಗದೇಕಮಲ್ಲನ ಕಾಲ ಕ್ರಿ.ಶ. ೧೦೧೫-೧೦೪೨ ಎಂದು ಅವನಲ್ಲಿಯೇ ದುರ್ಗಸಿಂಹನು ಸಂವಿಗ್ರಹಿಯಾಗಿರಬೇಕೆಂದೂ, ಮೇಲಿನ ಪದ್ಯದಲ್ಲಿ ಹೇಳಿದ ಶಕ ಸಂವತ್ಸರ ೯೫೩ ನೆಯ ಪ್ರಜಾಪತಿ ಸಂವತ್ಸರ ಚೈತ್ರಶುದ್ದ ೧೨ ಸೋಮವಾರವು ಕ್ರಿ.ಶ. ೧೦೩೧ನೆಯ ಮಾರ್ಚ್ ಎಂಟನೆಯ ತಾರೀಕು ಆಗುತ್ತದೆ ಎಂದೂ ನಿರ್ಣಯಿಸಿದ್ದಾರೆ. ಇದನ್ನು ದುರ್ಗಸಿಂಹನ ಕೃತಿ ರಚನೆಯ ಕಾಲ ಎಂದು ಒಪ್ಪಬಹುದು.


ದುರ್ಗಸಿಂಹನು ತನ್ನ ಗ್ರಂಥದ ಆದಿಭಾಗದಲ್ಲಿ ಸುಮಾರು ೬೨ ಪದ್ಯಗಳಲ್ಲಿ ತನ್ನ ವಿಚಾರವನ್ನು ವಿವರವಾಗಿ ತಿಳಿಸಿದ್ದಾನೆ. ಅದು ಹೀಗಿದೆ.

   ಕರ್ಣಾಟಕದ ಕಿಸುಕಾಡಿನಲ್ಲಿ ಸಯ್ಯಡಿಯೆಂಬ ಅಗ್ರಹಾರದಲ್ಲಿ ‘ಸಕಲ ಧರ್ಮಕ್ಕೆಲ್ಲಂ ಕಯ್ಕಾಲ್ ಮೂಡಿದಂತೆ,’ದುರ್ಗಸಿಂಹನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ರೇವಕಬ್ಬೆ. ಇವರ ಮಗ ‘ಮನ್ವಾದಿ ಪುರಾಣ ಮುನಿಗಣ ಪ್ರಣುತ ಶ್ರುತಿವಿಹಿತ ವಿಶುದ್ದಮಾರ್ಗನುಂ ನಿತ್ಯಹೋವ್ಮಧಯನಾನೇಕ ಯಾಗಾವಭೃತಸ್ನಾನ ಪವಿತ್ರಗಾತ್ರನುಂ, ಭಗವನ್ನಾರಯಣ ಚರಣಾಂಬುಜ ಸ್ಮರಣ ಪರಿಣತಾಂತ:ಕರಣನುಂ, ತರ್ಕವ್ಯಾಕರಣ ಕಾವ್ಯ ನಾಟಕ ಭರತ ವಾತ್ಸ್ಯಯನಾದ್ಯಶೇಷ ವಿದ್ಯಾಸಮುದ್ರತರಣಗುಣೈಕಪುಣ್ಯನುಂ ಧರಾಮರಾಗ್ರಗಣ್ಯನುಂ, ಅದ ದುರ್ಗಮಯ್ಯನಿದ್ದನು. ಅವನ ಮಗನಾದ ‘ದೇವದ್ವಿಜ ಗುರುಜನಪದಸೇವಾನಿರತ, ನದ ಈಶ್ವರಾರನಿದ್ದನು. ಅವನ ಹೆಂಡತಿ ರೇವಾಂಬಿಕೆ ಇವರಿಬ್ಬರ ಮಗ ಪ್ರಸ್ತುತ ಕವಿಯಾದ ದುರ್ಗಸಿಂಹ. ಈತನು ಬ್ರಾಹಣ. ಕಮ್ಮೆ ಕುಲದವನು ಗೌತಮ ಗೋತ್ರ ಸಂಭೂತನು. ಇವನ ಗುರು ‘ಮಹಾಯೋಗಿ, ಯಾದ ಶಂಕರಭಟ್ಟ. ‘ಸತ್ಯಾಶ್ರಯ ಕುಲತಿಲಕಂ. ಚೋಳ ಕಾಲಾನಲಂ, ಎಂಬ ಬಿರುದುಗಳುಳ್ಳ ಜಗದೇಕಮಲ್ಲ ಜಯಸಿಂಹ ಎಂಬ ರಾಜನಲ್ಲಿ ಶ್ರೀ ಗಂಡಭೂರಿಶ್ರಯನೆಂಬ ಬಿರುದುಳ್ಳ ಸಿಂಹಸನ್ನಾಹನೆಂಬ ದಂಡನಾಯಕನಿದ್ದನು. ಅವನ ಪಾದಕಮಲಭೃಂಗನಾದ ಚಕ್ರವರ್ತಿಯದಂಡಾದೀಶ, ಕೋದಂಡರಾಮಾಪ ಮೊದಲಾದ ಬಿರುದುಳ್ಳ ಕುಮಾರಸ್ವಾಮಿಯು ಕವಿಗೆ ಜಗದೇಕಮಲ್ಲನಲ್ಲಿ ಸಂವಿಗ್ರಹಿ ಪದವಿಯನ್ನು ಕೊಡಿಸಿದನು. ಇವನು ತನ್ನ ಚಕ್ರವರ್ತಿಯ ಅಜ್ಞೆಯ ಸಯ್ಯಡಿಯಲ್ಲಿ ‘ಹರಿಹರಭವನ, ಗಳನ್ನು ಮಾಡಿಸಿದಂತೆ.

Similar questions