prabandha on namma deshada bennalubu above 3-4 pages
Answers
Explanation:
ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದರೆ, ರೈತರ ಬೆನ್ನೆಲುಬಾದ ಕೃಷಿ ಕಾರ್ಮಿಕರನ್ನೆ ಮರೆತಿದ್ದೇವೆ! ಕೃಷಿ ಕಾರ್ಮಿಕರು ಮತ್ತು ರೈತರ ನಿಜವಾದ ಸಮಸ್ಯೆ ಹುಡುಕಿ ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣ ಎಡವಿದ್ದೇವೆ. ಬದಲಾಗಿ ಅವರು ಮತ್ತಷ್ಟು ದೈನೇಸಿಗಳೂ, ಭಿಕಾರಿಗಳೂ ಆಗುವಂತೆ ಅನ್ನಭಾಗ್ಯ, ಬೆಳೆಹಾನಿ ಪರಿಹಾರ, ವಿಮೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ಅವರ ಮೂಗಿಗೆ ಬೆಣ್ಣೆ ಸವರಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ಸ್ಥಳೀಯ ಆಹಾರ ಪದ್ಧತಿಗನುಗುಣವಾಗಿ ಸ್ಥಳೀಯ ರೈತರಿಂದಲೇ ಖರೀದಿಸಿದ ಆಹಾರಧಾನ್ಯಗಳನ್ನು ನ್ಯಾಯಬೆಲೆಯ ರಿಯಾಯ್ತಿಯಲ್ಲಿ ವಿತರಿಸಿದ್ದರೆ ಇದೊಂದು ಒಳ್ಳೆಯ ಯೋಜನೆಯೆ! ಅನ್ನಭಾಗ್ಯ ಯೋಜನೆ ಎನ್ನುವುದು ನಮ್ಮ ವೈವಿಧ್ಯಮಯ ಬೆಳೆಪದ್ಧತಿ ಮತ್ತು ಆಹಾರಪದ್ಧತಿಗಳ ಮೇಲೆ ಸರ್ಕಾರವೆ ಪ್ರಯೋಗಿಸುತ್ತಿರುವ ಮಾರಕಾಸ್ತ್ರವಾಗಿದೆ. ಅಲ್ಲದೆ, ಇದು ನಮ್ಮ ಜನರ ಸ್ವಾಭಿಮಾನ ಮತ್ತು ಸಹಬಾಳ್ವೆಗೆ ನೀಡುತ್ತಿರುವ ಕೊಡಲಿ ಪೆಟ್ಟಾಗಿದೆ!
ಇನ್ನು ಇತ್ತೀಚೆಗೆ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಅವುಗಳಲ್ಲಿ ಬೆಳೆ ವಿಮೆ ಮುಖ್ಯವಾದುದು. ಈ ಯೋಜನೆಯಲ್ಲಿ ಕೃಷಿ ಕಾರ್ಮಿಕರನ್ನು ಸಂಪೂರ್ಣ ಕೈ ಬಿಡಲಾಗಿದೆ. ಕೃಷಿಯಲ್ಲಿ ಅವರ ಪಾತ್ರವೇ ಇಲ್ಲವೇನೋ ಎಂಬಂತೆ ಭೂಮಿ ಇದ್ದವರಿಗೆ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಎಕರೆಗೆ ಐದು ಸಾವಿರ ರೂ. ವಿಮೆ ಪರಿಹಾರ ನಿಗದಿಯಾದರೆ, ಒಂದು ಎಕರೆಯ ರೈತನಿಗೆ ಕೇವಲ ಐದು ಸಾವಿರ ರೂ. ದೊರೆಯುತ್ತದೆ. ಅದೇ ಐವತ್ತು ಎಕರೆಯ ಜಮೀನ್ದಾರನಿಗೆ ಎರಡುವರೆ ಲಕ್ಷ ರೂ. ದೊರೆಯುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತ, ಬಡವರನ್ನು ಬಡವರನ್ನಾಗಿಯೆ ಉಳಿಸುವ ಇಂಥ ಯೋಜನೆಗಳನ್ನು ಜಾರಿಗೊಳಿಸುವ ಸರ್ಕಾರಗಳು ಸಾಮಾಜಿಕ ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದು ಹಾಸ್ಯಾಸ್ಪದ ಅನಿಸುವುದಿಲ್ಲವೆ?
ಯಾವುದೇ ವರ್ಷದ ಬೆಳೆಹಾನಿಯ ಶೇಕಡಾವಾರು ಪ್ರಮಾಣದ ಮೇಲೆ ನೀಡುವ ಈ ವಿಮೆ ಪರಿಹಾರ, ಪ್ರತಿವರ್ಷ ಅತಿ ಚಿಕ್ಕ ಹಿಡುವಳಿದಾರರಿಗೆ ಅಂದರೆ ಐದು ಎಕರೆ ಮತ್ತು ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ನೂರಕ್ಕೆ ನೂರರಷ್ಟು ಸಿಗಬೇಕು. ಹತ್ತು ಎಕರೆ ಉಳ್ಳವರಿಗೆ ಶೇ.75 ಹದಿನೈದು ಎಕರೆ ಉಳ್ಳವರಿಗೆ ಶೇ.50 ಮತ್ತು ಇದಕ್ಕೂ ಹೆಚ್ಚು ಜಮೀನು ಇದ್ದವರಿಗೆ ಶೇ.25 ಪರಿಹಾರ ನೀಡಬೇಕು. ಇಲ್ಲಿ ಕಡಿತಗೊಳಿಸಿರುವ ಒಟ್ಟು ಪರಿಹಾರ ಮೊತ್ತವನ್ನು ಅವರವರ ದುಡಿಮೆ ದಿನಗಳನ್ನು ಆಧರಿಸಿ, ಅಂದರೆ ವರ್ಷಕ್ಕೆ ಕನಿಷ್ಠ ನೂರಕ್ಕೂ ಹೆಚ್ಚು ದಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರಿಗೆ ವಿತರಿಸಬೇಕು. ಇದರಿಂದ ರೈತರ ಜತೆಗೆ ಕೃಷಿಕಾರ್ಮಿಕರ ಬದುಕಿಗೂ ಭದ್ರತೆ ಒದಗಿಸಿದಂತಾಗುತ್ತದೆ. ಕಾರ್ಮಿಕರ ಅಭಾವದಿಂದ ಕಂಗೆಟ್ಟಿರುವ ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದಂತೆಯೂ ಆಗುತ್ತದೆ. ವಿಮೆ ಅಲ್ಲದೆ, ಇತ್ತೀಚೆಗೆ ರಾಜ್ಯಸರ್ಕಾರ ಬೆಳೆಹಾನಿ ಪರಿಹಾರವನ್ನೂ ನೀಡುತ್ತಿದೆ. ವಿಮೆ ಹಾಗೂ ಬೆಳೆಹಾನಿ ಪರಿಹಾರದ ಸಮೀಕ್ಷೆ ಕೈಗೊಳ್ಳುವುದು ಕಂದಾಯ ಇಲಾಖೆ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಅವರ ಸಹಾಯಕರು ಈ ಸಮೀಕ್ಷೆ ಕೈಗೊಳ್ಳುತ್ತಾರೆ. ಇವರು ರೈತರು ಬೆಳೆದ ಬೆಳೆಯನ್ನು ಹಾನಿ ಪ್ರಮಾಣವನ್ನೂ ದಾಖಲಿಸಬೇಕಾಗುತ್ತದೆ. ಆದರೆ, ವಿಮಾ ಕಂಪನಿ ಎಲ್ಲ ಬೆಳೆಗಳಿಗೂ ಸಮನಾದ ಪರಿಹಾರ ನೀಡುವುದಿಲ್ಲ. ವಾಣಿಜ್ಯ ಬೆಳೆಗಳಿಗೆ ಹೆಚ್ಚು ಪರಿಹಾರ ವಿತರಿಸಿದರೆ, ಆಹಾರ ಧಾನ್ಯ ಬೆಳೆಗಳಿಗೆ ಕಡಿಮೆ ಇರುತ್ತದೆ. ಆದ್ದರಿಂದ ಬಹುತೇಕ ಪ್ರಭಾವಶಾಲಿಗಳಾದ ದೊಡ್ಡ ರೈತರು ತಾವು ಯಾವುದೇ ಬೆಳೆ ಬೆಳೆದಿದ್ದರೂ ಹೆಚ್ಚು ಪರಿಹಾರ ಸಿಗುವ ಬೆಳೆಯನ್ನೆ ದಾಖಲಿಸುವಲ್ಲಿ ಸಫಲರಾಗುತ್ತಾರೆ.