ಕ್ರೀಡೆಗಳ ಮಹತ್ವ prabandhan give the answer
Answers
Answer:
ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವುಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ, ಪ್ರಾಣಿಗಳ ಮತ್ತು/ಅಥವಾ ಚೆಂಡುಗಳು ಮತ್ತು ಯಂತ್ರಗಳಂತಹ ವಿವಿಧ ವಸ್ತುಗಳ ಚಲನೆಯನ್ನು ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಹಾಗು ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ. ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು.
ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ. ಆದರೂ, ಡೈವಿಂಗ್ , ಕುದುರೆ ತರಬೇತಿ ಮತ್ತು ಫಿಗರ್ ಸ್ಕೇಟಿಂಗ್ ನಂತಹ ಕೆಲವು ಕ್ರೀಡೆಗಳಲ್ಲಿ ಕೌಶಲದ ಮಟ್ಟವನ್ನು ಉತ್ತಮವಾಗಿ ನಿರ್ಧರಿಸಲಾದ ಮಾನದಂಡಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ. ಸೌಂದರ್ಯ ಸ್ಪರ್ಧೆ ಮತ್ತು ಶರೀರವರ್ಧನೆ ಪ್ರದರ್ಶನಗಳಂತಹ ಫಲಿತಾಂಶ ನಿರ್ಣಯಿಸುವ ಇತರ ಚಟುವಟಿಕೆಗಳಿಗೆ ಇದು ತದ್ವಿರುದ್ಧವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಕೌಶಲವನ್ನು ತೋರಿಸಬೇಕಿಲ್ಲ ಮತ್ತು ಮಾನದಂಡವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ.