Prajaprabutvada savalugalu
Answers
Answer:
i tried my level best to answer your question. brillianist please
Explanation:
ಇಂದಿನ ಕನ್ನಡಪ್ರಭದಲ್ಲಿನ ಮುಖಪುಟದ ಲೇಖನ ದಲ್ಲಿ ಪ್ರಕಟವಾದ ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದ ಶ್ರೀ ಮಧುಕರ ಶೆಟ್ಟಿ ರವರ ಸಂದರ್ಶನ, ಒಂದು ಕಡೆ ಪ್ರಬಲ ಜನಲೋಕಪಾಲ್ ಬಗ್ಗೆ ಅಣ್ಣಾ ಟೀಮ್ ಮತ್ತು ಬಹುತೇಕ ಪ್ರಜೆಗಳು ಒತ್ತಾಯ ಮಾಡ್ತಾಯಿರುವಾಗ ಮಧುಕರ ಶೆಟ್ಟಿಯವರ ಮಾತುಗಳು ಚಿಂತನೆಗೆ ಹಚ್ಚುತ್ತಿವೆ.....
ಬಾಲಕೃಷ್ಣೇಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆಗೆ ಸಿಟ್ಟಿಗೆದ್ದ ದೇವೇಗೌಡರು, ಲೋಕಾಯುಕ್ತ ಎಡಿಜಿಪಿಯಾಗಿದ್ದ ಜೀವನ್ ಕುಮಾರ್ ಗಾಂವ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿ, ತನಿಖೆ ಮುಂದುವರಿಸಿದ್ರೆ ಜಾಗ್ರತೆ ಎಂಬುದಾಗಿಯೂ ಬೆದರಿಕೆ ಹಾಕಿದ್ದಾರೆ ಅಂತ ವರದಿಯಾಗಿದೆ.,
ಆದರೆ ಅದಕ್ಕೆ ಸಮಜಾಯಿಷಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ, ತಾವು ಲೋಕಾಯುಕ್ತ ಎಡಿಜಿಪಿ ಆಗಿದ್ದ ಜೀವನ್ ವಿ ಗಾಂವ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿರುವ ಅವರು ಲೋಕಾಯುಕ್ತ ಹಗೆತನದ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್ ವಿ.ಗಾಂವಕರ್ ಅವರನ್ನು ಮುಖ್ಯಮಂತ್ರಿ ಸದಾನಂದ ಗೌಡ ವರ್ಗಾಯಿಸಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ. ಗಾಂವಕರ್ ಅವರ ಸ್ಥಾನಕ್ಕೆ ಎಚ್.ಎನ್ ಸತ್ಯನಾರಾಯಣ ರಾವ್ (ಅಪರಾಧ ಮತ್ತು ತಾಂತ್ರಿಕ) ಅವರನ್ನು ನೇಮಕ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸ್ಥಗಿತಗೊಳಸಿ, ತನಿಖೆಗಳ ಹಾದಿ ತಪ್ಪಿಸಬೇಕೆಂದೇ ಈ ವರ್ಗಾವಣೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಈ ಎಲ್ಲ ವರ್ಗಾವಣೆಗಳ ಹಿಂದೆ ಇದೆ ಎಂದು ಹೆಗ್ಡೆಯವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.