World Languages, asked by maladongaragavi, 6 months ago

protection of food in Kannada​

Answers

Answered by Anonymous
37

Answer:

ನಾವು ಬಾಹ್ಯ ಸನ್ನಿವೇಶಗಳಲ್ಲಿ ವಾಸವಾಗಿದ್ದೇವೆ. ಬಾಹ್ಯ ಸನ್ನಿವೇಶಗಳನ್ನೊಳಗೊಂಡ ನಮ್ಮ ಸುತ್ತಲಿನ ವಾತಾವರಣವೇ ನಮ್ಮ ಪರಿಸರ, ಗಾಳಿ, ಬೆಳಕು, ಉಷ್ಣತೆ, ಸಸ್ಯವರ್ಗ, ಪ್ರಾಣಿವರ್ಗ, ಈ ಪರಿಸರದಲ್ಲಿವೆ. ದೈವ ನಿರ್ಮಿತ ಪರಿಸರ ಯಾವಾಗಲೂ ಸ್ವಚ್ಛವಾಗಿರುತ್ತದೆ. ಆದರೆ ಮಾನವ ಅದನ್ನು ಕಲುಷಿತಗೊಳಿಸುತ್ತಾನೆ.

ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಇದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಗಾಳಿಯು ಮಲಿನವಾಗದಂತೆ ನೋಡಿಕೊಳ್ಳಬೇಕು. ಹೊಗೆ, ಧೂಳು, ಕೊಳೆತ ಪದಾರ್ಥಗಳಿಂದ ಗಾಳಿ ಕೆಡುತ್ತದೆ. ಆದ್ದರಿಂದ ಗಾಳಿಯನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಜಲಮೂಲಗಳ ಬಳಿ ಮಲಮೂತ್ರ ವಿಸರ್ಜಿಸುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ಮತ್ತು ಪಾತ್ರೆ ಸ್ವಚ್ಛಮಾಡುವುದು, ಶೌಚಗೃಹಗಳನ್ನು ನಿರ್ಮಿಸುವುದು, ಇವುಗಳಿಂದ ನೀರು ಅಶುದ್ಧವಾಗುತ್ತದೆ. ಆದ್ದರಿಂದ ಇವುಗಳನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ತಗ್ಗುಪ್ರದೇಶಗಳಲ್ಲಿ ನೀರು ನಿಂತು ರೋಗಾಣುಗಳ ಮೂಲ ಸ್ಥಾನವಾಗುತ್ತದೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಬಚ್ಚಲ ನೀರು, ಮೋರಿಯ ನೀರು, ಸುಗಮವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು. ಹೀರುಗುಂಡಿಗಳನ್ನು ನಿರ್ಮಿಸಿ ಕಲುಷಿತ ನೀರು ಭೂಮಿಗೆ ಸೇರುವಂತೆ ಮಾಡಬೇಕು.

ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು.

ನೀರನ್ನು ಶುದ್ಧ ಮಾಡಲು ಅನೇಕ ಮಾರ್ಗಗಳಿವೆ. ಕುದಿಸುವುದು, ಬೀಚಿಂಗ್ ಪೌಡರ್ ಸೇರಿಸುವುದು, ಶೋಧಿಸುವುದು ಇತ್ಯಾದಿ ಕೆಲವು ಕ್ರಮಗಳಿಂದ ನೀರು ಶುದ್ಧವಾಗುತ್ತದೆ. ಮನೆಗಳಲ್ಲಿ ನೀರು ತುಂಬಿರುವ ಪಾತ್ರೆಯನ್ನು ಮುಚ್ಚಿರಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.

ಮನೆಯ ಹಿಂದೆಮುಂದೆ ಜಾಗವಿದ್ದರೆ ಕೈತೋಟ ಮಾಡುವುದು ಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳನ್ನು ಹರಡುವುದನ್ನು ತಡೆಗಟ್ಟಬಹುದು. ಹೊಗೆರಹಿತ ಒಲೆಗಳ ನಿರ್ಮಾಣ ಮಾಡಬೇಕು. ಗೃಹ ನೈರ್ಮಲ್ಯದ ಬಗ್ಗೆ ಆಸಕ್ತಿ ವಹಿಸಬೇಕು. ನಾವು ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ, ಎಲ್ಲವೂ ಶುಚಿಯಾಗಿರುವುದು ಅಗತ್ಯ. ನೆರೆಹೊರೆ, ಸ್ವಚ್ಛವಾಗಿದ್ದರೆ ಪರಿಸರ ಸ್ವಚ್ಛವಾಗಿರುತ್ತದೆ.

hope this helps you

Answered by Anonymous
38

Answer:

ಆಹಾರ ಸಂರಕ್ಷಣೆ

ಅತಿಸೂಕ್ಷ್ಮಾಣುಗಳಿಂದ ತ್ವರಿತಗೊಳಿಸಲ್ಪಡುವ ಅಥವಾ ಕಾರಣವಾಗುವ ಹಾಳಾಗುವಿಕೆಯನ್ನು (ಗುಣಮಟ್ಟ, ಸೇವಿಸಲು ಯೋಗ್ಯವಾದ, ಅಥವಾ ಪೌಷ್ಟಿಕಾಂಶಗಳ ನಷ್ಟ) ಹೆಚ್ಚಾಗಿ ಕಡಿಮೆ ಮಾಡಲು ಇಲ್ಲವೆ ನಿಲ್ಲಿಸಲು ಆಹಾರವನ್ನು ಸಂಸ್ಕರಿಸುವ ಮತ್ತು ನಿರ್ವಹಣೆಯ ಕಾರ್ಯವಿಧಾನವೇ ಆಹಾರ ಸಂರಕ್ಷಣೆ . ಆದಾಗ್ಯೂ, ಕೆಲವು ಪದ್ಧತಿಗಳಲ್ಲಿ ಆಹಾರವನ್ನು ಕಾಪಾಡಲು ಮತ್ತು ನಿರ್ದಿಷ್ಟ ಗುಣಮಟ್ಟವನ್ನು ಸೇರಿಸಲು ಉಪಯೋಗಕಾರಿ ಬೂಷ್ಟು , ಈಸ್ಟ್ ಗಳು ಅಥವಾ ಮೃದು ಅಣುಜೀವಿಗಳನ್ನು ಉಪಯೋಗಿಸುತ್ತಾರೆ (ಉದಾ. ಚೀಸ್, ವೈನ್). ಪೌಷ್ಟಿಕತೆಯ ಮಹತ್ವ, ರಚನೆ, ಮತ್ತು ಸ್ವಾದಯುಕ್ತ ರುಚಿಯನ್ನು ಪೋಷಿಸಿ ಕಾಪಾಡುವುದು ಆಹಾರವಾಗಿ ಅದರ ಉಪಯುಕ್ತತೆಯನ್ನು ಸಂರಕ್ಷಿಸುವುದು ಮುಖ್ಯ. ಇದು ಸಾಂಸ್ಕೃತಿಕವಾಗಿ ಅವಲಂಬಿತವಾಗಿದೆ, ಏಕೆಂದರೆ ಒಂದು ಸಂಸ್ಕೃತಿಯಲ್ಲಿ ಮಾನವರಿಗೆ ಆಹಾರವಾಗಿ ಯೋಗ್ಯವಾಗಿದ್ದು ಮತ್ತೊಂದು ಸಂಸ್ಕೃತಿಯಲ್ಲಿ ಇಷ್ಟವಿಲ್ಲದಿರಬಹುದು. ಸಂರಕ್ಷಣೆಯು ಸಾಮಾನ್ಯವಾಗಿ ಅಣುಜೀವಿಗಳು, ಬೂಷ್ಟು ಹಾಗೂ ಇತರೆ ಅತಿ ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ತಡೆಗಟ್ಟುವುದೂ ಅಲ್ಲದೆ ದುರ್ವಾಸನೆಯನ್ನುಂಟು ಮಾಡುವ ಕೊಬ್ಬುಗಳು ಆಮ್ಲಜನಕದೊಂದಿಗೆ ಸೇರಿಕೊಳ್ಳುವಿಕೆಯನ್ನು ನಿಧಾನಗೊಳಿಸುವುದನ್ನು ಸಹ ಒಳಗೊಂಡಿರುತ್ತದೆ. ಕತ್ತರಿಸಿದ ನಂತರ ಸೇಬಿನ ಹಣ್ಣುಗಳಲ್ಲಿ ಕಿಣ್ವದಿಂದ ಕಂದುಬಣ್ಣಕ್ಕೆ ತಿರುಗುವ ಪ್ರತಿಕ್ರಿಯೆಯಂತಹ ಆಹಾರ ತಯಾರಿಕೆಯ ಅವಧಿಯಲ್ಲಿ ಆಗುವಂತಹ ಬಣ್ಣಗೆಡುವ ಮತ್ತು ನೈಸರ್ಗಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುವ ಕಾರ್ಯವಿಧಾನಗಳನ್ನೂ ಸಹ ಒಳಗೊಂಡಿರುತ್ತದೆ. ಕೆಲವು ಸಂರಕ್ಷಣೆಯ ಪದ್ಧತಿಗಳಲ್ಲಿ ಅತಿಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಪುನರ್ಸೋಂಕನ್ನು ತಡೆಗಟ್ಟಲು ಸಂಸ್ಕರಣೆಯ ನಂತರ ಆಹಾರವನ್ನು ಭದ್ರವಾಗಿ ಮೊಹರು ಮಾಡಿಡಬೇಕಾಗುತ್ತದೆ; ಒಣಗಿಸುವಿಕೆಯಂತಹ ಇತರ ಕೆಲವು ಪದ್ಧತಿಗಳು ಯಾವುದೇ ವಿಶೇಷವಾಗಿ ಭದ್ರವಾಗಿ ಮುಚ್ಚಿಡದೇ ಇದ್ದರೂ ಬಹಳ ಕಾಲದವರೆಗೆ ಆಹಾರವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಒಣಗಿಸುವಿಕೆ, ಸ್ಪ್ರೇ ಮಾಡಿ ಒಣಗಿಸುವಿಕೆ, ಹೆಪ್ಪುಗಟ್ಟಿಸಿ ಒಣಗಿಸುವಿಕೆ, ಘನೀಕರಿಸುವಿಕೆ, ನಿರ್ವಾತ ಪ್ಯಾಕಿಂಗ್, ಡಬ್ಬಿಯಲ್ಲಿ ಭದ್ರತೆಯಿಂದ ಮುಚ್ಚುವುದು, ಪಾಕದಲ್ಲಿ ಸಂರಕ್ಷಣೆ, ಸಕ್ಕರೆ ಹರಳುಗಟ್ಟಿಸುವಿಕೆ, ಆಹಾರಕ್ಕೆ ವಿಕಿರಣವನ್ನು ಹಾಯಿಸುವಿಕೆ, ಮತ್ತು ಇಂಗಾಲದ ಡೈ ಆಕ್ಸೈಡ್ ನಂತಹ ಮಂದಾನಿಲಗಳು ಅಥವಾ ಸಂರಕ್ಷಕಗಳನ್ನು ಸೇರಿಸುವ ಕಾರ್ಯವಿಧಾನಗಳು ಅನ್ವಯಿಸುವ ಸಾಮಾನ್ಯ ಪದ್ಧತಿಗಳನ್ನು ಒಳಗೊಂಡಿರುತ್ತವೆ. ಆಹಾರವನ್ನು ಸಂರಕ್ಷಿಸಿಲು ಸಹಾಯಮಾಡುವುದೂ ಅಲ್ಲದೆ, ಸ್ವಾದಿಷ್ಟ ರುಚಿಯನ್ನು ಒದಗಿಸುವ ದ್ರಾವಣದಲ್ಲಿಡುವುದು, ಉಪ್ಪಿನಲ್ಲಿ ಸಂಗ್ರಹಣೆ, ಹೊಗೆ ಹಾಯಿಸುವಿಕೆ, ಸಕ್ಕರೆ ಪಾಕದಲ್ಲಿಡುವುದು ಅಥವಾ ಮದ್ಯಸಾರದಲ್ಲಿ ಸಂರಕ್ಷಿಸಿಡುವುದು, ಸಕ್ಕರೆ ಹರಳುಗಟ್ಟಿಸುವಿಕೆ ಮತ್ತು ಗಟ್ಟಿ ಮಾಡುವಿಕೆ ಯಂತಹ ಇತರೆ ಪದ್ಧತಿಗಳೂ ಒಳಗೊಂಡಿರುತ್ತವೆ.

ಸಂರಕ್ಷಣೆಯ ವಿಧಾನಗಳು ಇವುಗಳನ್ನೂ ಒಳಗೊಂಡಿರುತ್ತವೆ:

ಅತಿಸೂಕ್ಷ್ಮಾಣುಜೀವಿಗಳನ್ನು ಅಸ್ವಾಭಾವಿಕಗೊಳಿಸಲು ಇಲ್ಲವೆ ಕೊಲ್ಲಲು ಕಾಯಿಸುವುದು (ಉದಾ. ಕುದಿಸುವಿಕೆ)

ಆಮ್ಲಜನಕದೊಡನೆ ಸೇರಿಸುವಿಕೆ (ಉದಾ. ಗಂಧಕದ ಡೈ ಆಕ್ಸೈಡ್ ನ ಉಪಯೋಗ)

ವಿಷವನ್ನು ತಡೆಗಟ್ಟುವಿಕೆ (ಉದಾ. ಹೊಗೆ ಹಾಯಿಸುವಿಕೆ, ಇಂಗಾಲದ ಡೈ ಆಕ್ಸೈಡ್, ವಿನೆಗರ್, ಮದ್ಯಸಾರ ಮುಂತಾದವುಗಳ ಉಪಯೋಗ)

ನೀರಿನ ಅಂಶವನ್ನು ನಾಶಪಡಿಸುವಿಕೆ (ಒಣಗಿಸುವುದು)

ಆಸ್ಮಾಟಿಕ್ ನಿರೋಧಿಸುವಿಕೆ (ಉದಾ. ಸಕ್ಕರೆ ಪಾಕಗಳ ಉಪಯೋಗ)

ಅತಿ ಕಡಿಮೆ ಉಷ್ಣಾಂಶದಲ್ಲಿ ನಿಷ್ಕ್ರಿಯಗೊಳಿಸುವಿಕೆ (ಉದಾ. ಘನೀಕರಿಸುವಿಕೆ)

ಅತಿ ಹೆಚ್ಚಿನ ನೀರಿನ ಒತ್ತಡ (ಉದಾ. ತಾಜಾಗೊಳಿಸುವಿಕೆ, "ತಣ್ಣನೆಯ" ಪ್ಯಾಶ್ಚುರೈಸೇಷನ್ ನ ಒಂದು ಬಗೆ, ಆಹಾರದ ಹಾಳಾಗುವಿಕೆ ಮತ್ತು ಆಹಾರದ ಸುರಕ್ಷತೆಗೆ ಪ್ರಭಾವ ಬೀರುವಂತಹ ನೈಸರ್ಗಿಕವಾಗಿ ದೊರಕುವ ಪ್ಯಾಥಜನ್ ಗಳನ್ನು ಆ ಒತ್ತಡವು ಕೊಲ್ಲುತ್ತದೆ.)

ಈ ವಿಧಾನಗಳ ಅನೇಕ ಸಂಯುಕ್ತ ಕ್ರಿಯೆಗಳು

Similar questions