protection of food in Kannada
Answers
Answer:
Answer:
ನಾವು ಬಾಹ್ಯ ಸನ್ನಿವೇಶಗಳಲ್ಲಿ ವಾಸವಾಗಿದ್ದೇವೆ. ಬಾಹ್ಯ ಸನ್ನಿವೇಶಗಳನ್ನೊಳಗೊಂಡ ನಮ್ಮ ಸುತ್ತಲಿನ ವಾತಾವರಣವೇ ನಮ್ಮ ಪರಿಸರ, ಗಾಳಿ, ಬೆಳಕು, ಉಷ್ಣತೆ, ಸಸ್ಯವರ್ಗ, ಪ್ರಾಣಿವರ್ಗ, ಈ ಪರಿಸರದಲ್ಲಿವೆ. ದೈವ ನಿರ್ಮಿತ ಪರಿಸರ ಯಾವಾಗಲೂ ಸ್ವಚ್ಛವಾಗಿರುತ್ತದೆ. ಆದರೆ ಮಾನವ ಅದನ್ನು ಕಲುಷಿತಗೊಳಿಸುತ್ತಾನೆ.
ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಇದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಗಾಳಿಯು ಮಲಿನವಾಗದಂತೆ ನೋಡಿಕೊಳ್ಳಬೇಕು. ಹೊಗೆ, ಧೂಳು, ಕೊಳೆತ ಪದಾರ್ಥಗಳಿಂದ ಗಾಳಿ ಕೆಡುತ್ತದೆ. ಆದ್ದರಿಂದ ಗಾಳಿಯನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಜಲಮೂಲಗಳ ಬಳಿ ಮಲಮೂತ್ರ ವಿಸರ್ಜಿಸುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ಮತ್ತು ಪಾತ್ರೆ ಸ್ವಚ್ಛಮಾಡುವುದು, ಶೌಚಗೃಹಗಳನ್ನು ನಿರ್ಮಿಸುವುದು, ಇವುಗಳಿಂದ ನೀರು ಅಶುದ್ಧವಾಗುತ್ತದೆ. ಆದ್ದರಿಂದ ಇವುಗಳನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ತಗ್ಗುಪ್ರದೇಶಗಳಲ್ಲಿ ನೀರು ನಿಂತು ರೋಗಾಣುಗಳ ಮೂಲ ಸ್ಥಾನವಾಗುತ್ತದೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಬಚ್ಚಲ ನೀರು, ಮೋರಿಯ ನೀರು, ಸುಗಮವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು. ಹೀರುಗುಂಡಿಗಳನ್ನು ನಿರ್ಮಿಸಿ ಕಲುಷಿತ ನೀರು ಭೂಮಿಗೆ ಸೇರುವಂತೆ ಮಾಡಬೇಕು.
ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು.
ನೀರನ್ನು ಶುದ್ಧ ಮಾಡಲು ಅನೇಕ ಮಾರ್ಗಗಳಿವೆ. ಕುದಿಸುವುದು, ಬೀಚಿಂಗ್ ಪೌಡರ್ ಸೇರಿಸುವುದು, ಶೋಧಿಸುವುದು ಇತ್ಯಾದಿ ಕೆಲವು ಕ್ರಮಗಳಿಂದ ನೀರು ಶುದ್ಧವಾಗುತ್ತದೆ. ಮನೆಗಳಲ್ಲಿ ನೀರು ತುಂಬಿರುವ ಪಾತ್ರೆಯನ್ನು ಮುಚ್ಚಿರಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.
ಮನೆಯ ಹಿಂದೆಮುಂದೆ ಜಾಗವಿದ್ದರೆ ಕೈತೋಟ ಮಾಡುವುದು ಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳನ್ನು ಹರಡುವುದನ್ನು ತಡೆಗಟ್ಟಬಹುದು. ಹೊಗೆರಹಿತ ಒಲೆಗಳ ನಿರ್ಮಾಣ ಮಾಡಬೇಕು. ಗೃಹ ನೈರ್ಮಲ್ಯದ ಬಗ್ಗೆ ಆಸಕ್ತಿ ವಹಿಸಬೇಕು. ನಾವು ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ, ಎಲ್ಲವೂ ಶುಚಿಯಾಗಿರುವುದು ಅಗತ್ಯ. ನೆರೆಹೊರೆ, ಸ್ವಚ್ಛವಾಗಿದ್ದರೆ ಪರಿಸರ ಸ್ವಚ್ಛವಾಗಿರುತ್ತದೆ.