Rupaka alankara example in kannada
Answers
Answer: metaphors!
Explanation:
roopaka alankara or roopakagalu are basically metaphors, these examples must help..
ಕಸ್ತೂರಿ ಕನ್ನಡ(KastooriKannada) : Language Kannada is compared with musk (ಕಸ್ತೂರಿ).
ಕೋಪಾಗ್ನಿ(Kopaagni) : Kopa(Angry) + agni(Fire). Mean Angry is as sharp as fire.
ಹಾಲ್ಬೆಳದಿಂಗಳು (Haalbeladingalu) : Moonlight(ಬೆಳದಿಂಗಳು) is compared with milk(ಹಾಲು).
ಭವಸಮುದ್ರ (BhavaSamhdra) : Life(ಭವ/ಬದುಕು) is compared with vast sea(ಸಮುದ್ರ).
ಕರುಣಾಸಾಗರ(KarunaaSagara) : Kindness(ಕರುಣೆ) is compared with Ocean(ಸಾಗರ).
ಪಾದಪದ್ಮ (PaadaPadma): Feet(ಪಾದ) is compared with lotus(ಪದ್ಮ).
ಬೆಳ್ಳಿಬೆಳಕು(BelliBelaku): Light(ಬೆಳಕು) is compared with Silver (ಬೆಳ್ಳಿ).
ಬೆಳ್ಮುಗಿಲು (Belmugilu): Sky (ಮುಗಿಲು) is compared with Silver (ಬೆಳ್ಳಿ).
ಜ್ಞಾನಸಿರಿ (JnaanaSiri) : Knowledge (ಜ್ಞಾನ) is compared with richness(ಸಿರಿ).
This one is important….. this is not given by any poet but the great actor of Kannada Dr.Rajkumar coined this word and that's ಅಭಿಮಾನಿ ದೇವರು (Abhimaani Devaru) : Here fans(ಅಭಿಮಾನಿಗಳು) are compared with Gods(ದೇವರುಗಳು).
Answer:
ರೂಪಕಾಲಂಕಾರ
ಮಾತನಾಡುವಾಗ ಒಮ್ಮೊಮ್ಮೆ ಹೀಗೆ ಹೇಳುವುದುಂಟು.
(i) ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
(ii) ಆ ಮನುಷ್ಯ ನಿಜವಾಗಿ ದೇವರು.
(iii) ಈ ಶಾಲೆಗೆ ಆ ವಿದ್ಯಾರ್ಥಿಯೊಂದು ರತ್ನ.
(೧) ಇಲ್ಲಿ ಮೊದಲ ವಾಕ್ಯದಲ್ಲಿ-
ವಿದ್ವಾಂಸನೂ ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಭೇದವಿಲ್ಲದೆ ಹೇಳಲಾಗಿದೆ.
(೨) ಎರಡನೆಯ ವಾಕ್ಯದಲ್ಲಿ-
ಮನುಷ್ಯನೂ, ದೇವರೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಿದೆ.
(೩) ಮೂರನೆಯ ವಾಕ್ಯದಲ್ಲಿ-
ವಿದ್ಯಾರ್ಥಿಯೂ ರತ್ನವೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಲಾಗಿದೆ.
ಇಲ್ಲಿ ಮೂರೂ ವಾಕ್ಯಗಳಲ್ಲಿ ಒಂದರಂತೆ ಇನ್ನೊಂದಿದೆ ಎಂದು ಹೇಳಿಲ್ಲ. ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.
Explanation:
1. ಮಾರಿಗೌತಣವಾಯ್ತು ನಾಳಿನ ಭಾರತವು. - ರೂಪಕಾಲಂಕಾರ
೧. ಉಪಮೇಯ : ನಾಳಿನ ಭಾರತ ಯುದ್ಧ
೨. ಉಪಮಾನ : ಮಾರಿಯ ಔತಣ
ಸಮನ್ವಯ : ಇಲ್ಲಿ ಉಪಮೇಯವಾದ ನಾಳಿನ ಭಾರತ ಯುದ್ಧವನ್ನು ಉಪಮಾನವಾದ ಮಾರಿಯ ಔತಣಕ್ಕೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.
2. ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ. - ರೂಪಕಾಲಂಕಾರ
೧. ಉಪಮೇಯ : ಒಡಲಬೇಗೆ
೨. ಉಪಮಾನ : ಬೆಂಕಿಯುರಿ
ಸಮನ್ವಯ : ಇಲ್ಲಿ ಉಪಮೇಯವಾದ ಅಯೋಧ್ಯೆಯ ಪ್ರಜೆಗಳ ಒಡಲಬೇಗೆಯನ್ನು ಉಪಮಾನವಾದ ಬೆಂಕಿಯುರಿಗೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.