samajika Pidugu Galu essay in Kannada full essay
Answers
Answer:
Nanu kannadiga I'm from Karanataka Nan lasts an nine artha madkola bhahudu plzz mark me as brainliest plzzzzzzzzzzzzzzzzzzzzzzz Nanu Ninmna follow madthini plz
Answer:
ಸಮಾಜಕ್ಕೆ ಸಮಸ್ಯೆಯನ್ನು ಅಥವಾ ಕೆಡಕನ್ನುಂಟು ಮಾಡುವಂತಹ ಅನಿಷ್ಟಗಳೇ ಸಮಾಜಿಕ ಪಿಡುಗುಗಳು. ಅವುಗಳೆಂದರೆ ಅನಕ್ಷರತೆ, ಜಾತೀಯತೆ, ಅಸ್ಪೃಶ್ಯತೆ, ಭಿಕ್ಷಾಟನೆ, ಮಾದಕ ವಸ್ತುಗಳ ಸೇವನೆ ಮುಂತಾದವು. ಈ ಸಮಾಜಿಕ ಪಿಡುಗುಗಳು ದೇಶ ಎದುರಿಸಬೇಕಾಗಿರುವ ಸವಾಲುಗಳಾಗಿ ಪರಿಣಮಿಸಿದೆ. ಸಮಾಜ ಕಲುಷಿತವಾಗಲು ದಾರಿ ಮಾಡಿಕೊಡುವ ಇವುಗಳಿಂದ ಸಾಮಾಜಿಕ ಕ್ಷೋಭೆ ಪರಿಸರ ಹಾನಿಯೂ ಉಂಟಾಗುತ್ತಿದೆ. ಇಂತಹ ಪದ್ದತಿಗಳು ನಮ್ಮ ದೇಶವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯಲು ಕಂಟಕವಾಗಿದೆ.ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜಕ್ಕೆ ಅಂಟಿಕೊಂಡು ಬಂದಿರುವ, ಸಮಾಜದ ಅಭಿವೃದ್ದಿಗೆ ಕಂಟಕವಾಗಿರುವ ಬಡತನ, ಅನಕ್ಷರತೆ, ಬಾಲ್ಯವಿವಾಹ, ವರದಕ್ಷಣೆ, ಸ್ತ್ರೀಶೋಷಣೆ, ಭಿಕ್ಷಾಟನೆ, ಜಾತೀಯತೆ, ಅಸ್ಪೃಷ್ಯತೆ, ಸತಿಪದ್ದತಿ, ದೇವದಾಸಿ ಪದ್ದತಿ, ಜೀತಪದ್ದತಿ, ಪರದಾ ಪದ್ದತಿಯಂತಹ ಸಾಮಾಜಿಕ ಪಿಡುಗುಗಳು ನಮ್ಮನ್ನು ಇಂದಿಗೂ ಕಾಡುತ್ತಿವೆ. ಇಂತಹ ಅನಿಷ್ಟಗಳನ್ನು ಹೋಗಲಾಡಿಸಿದಾಗ ಮಾತ್ರ ನಮ್ಮ ಸಮಾಜದ ಏಳಿಗೆಯಾಗಲು ಸಾಧ್ಯವಿದೆ. ಇಲ್ಲವಾದರೆ ಸಮಾಜ ಅಭಿವೃದ್ದಿ ಕುಂಠಿತಗೊಂಡು ದಾಸ್ಯದಲ್ಲಿರಬೇಕಾಗುತ್ತದೆ. ಸಮಾಜಿಕ ಪಿಡುಗುಗಳು ಸಮಾಜಕ್ಕೆ ಹಿಡಿದ ಗೆದ್ದಲಿನಂತೆ ಸಮಾಜವನ್ನು ವಿನಾಶದತ್ತ ಕೊಂಡೊಯ್ಯತ್ತವೆ.