Samuha madhyamagalu prabandha in Kannada
Answers
Explanation:
ಮಾಧ್ಯಮ ಅಥವಾ ಸಮೂಹ ಮಾಧ್ಯಮಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” (Fourth Estate) ಎಂದೂ ಕರೆಯುತ್ತಾರೆ
ಪತ್ರಿಕೆಗಳನ್ನು ಮುದ್ರಣ/ಲಿಖಿತ ಮಾಧ್ಯಮ ಎನ್ನಬಹುದು. ಕ್ರಿ.ಶ. ೧೮೪೩ರಲ್ಲಿ ಪ್ರಾರಂಭವಾದ ””ಮಂಗಳೂರು ಸಮಾಚಾರ”” ಕನ್ನಡದ ಮೊದಲ ಪತ್ರಿಕೆ. ಈಗ ಕನ್ನಡ ಮುದ್ರಣ ಮಾಧ್ಯಮ ಅಗಾಧವಾಗಿ ಬೆಳೆದು, ಒಂದು ಒಳ್ಳೆಯ ಮಟ್ಟಕ್ಕೆ ಬಂದು ನಿಂತಿದೆ. ಪತ್ರಿಕೆಗಳಲ್ಲಿ ಎರಡು ವಿಧಗಳಿವೆ.೧)ರಾಜ್ಯ ಮಟ್ಟದ ಸುದ್ಧಿಯನ್ನು ನೀಡುವ ಪತ್ರಿಕೆ, ೨)ರಾಷ್ಟ್ರಮಟ್ಟದ ವಿಷಯಗಳನ್ನು ಜನರಿಗೆ ತಲುಪಿಸುವ ಪತ್ರಿಕೆ.
ಸುದ್ದಿ ಪ್ರಧಾನ ಸಂಪಾದಿಸಿ
ಸುದ್ದಿ-ಸಮಾಚಾರಗಳನ್ನು ತಿಳಿಸುವ ಪತ್ರಿಕೆಗಳನ್ನು ಸುದ್ದಿ ಪ್ರಧಾನ ಪತ್ರಿಕೆಗಳೆನ್ನಬಹುದು. ಇವುಗಳು ಸಾಮನ್ಯವಾಗಿ ದೈನಿಕ, ಸಾಪ್ತಾಹಿಕ ಮತ್ತು ಪಾಕ್ಷಿಕವಾಗಿ ಪ್ರಕಟಣೆಗೊಳ್ಳುತ್ತವೆ.
ವಿಷಯ ಪ್ರಧಾನ ಸಂಪಾದಿಸಿ
ಸಿನಿಮಾ, ಕೃಷಿ, ಆಟೋಟ, ಆಧ್ಯಾತ್ಮ – ಹೀಗೆ ವಿವಿಧ ವಿಷಯಪ್ರಧಾನ ಸುದ್ದಿಗಳನ್ನು ಪ್ರಕಟಿಸುವ ಹಲವು ಪತ್ರಿಕೆಗಳು ಸಾಮಾನ್ಯವಾಗಿ ವಿಶೇಷ ಅಂಕಣಗಳಲ್ಲಿ- ಸಿನಿಮಾರಂಜನೆ, ಕೃಷಿಲೋಕ, ಕ್ರೀಡಾಪುರವಣೆ ಅಥವಾ ಇನ್ನೂ ವಿರಳವಾಗಿ ಪ್ರಕಟಣೆಗೊಳ್ಳುತ್ತವೆ.
ಸಾಹಿತ್ಯ ಪ್ರಧಾನ ಸಂಪಾದಿಸಿ
ಈ ಪ್ರಕಾರದ ಪತ್ರಿಕೆಗಳನ್ನು ವಿಷಯ ಪ್ರಧಾನ ಗುಂಪಿಗೆ ಸೇರಿಸಬಹುದಾದರೂ, ಕನ್ನಡದಲ್ಲಿ ಸಾಹಿತ್ಯಕ್ಕೆ ಒತ್ತು ಕೊಡುವ ಪತ್ರಿಕೆಗಳ ದೊಡ್ಡ ಗುಂಪೇ ಇದೆ. ಸಾಮಾನ್ಯವಾಗಿ ಸಾಪ್ತಾಹಿಕ ಅಥವಾ ವಾರದ ಅಂಕಣ ಪತ್ರಿಕೆಗಳಲ್ಲಿ ಇವು ಪ್ರಕಟಣೆಗೊಳ್ಳುತ್ತವೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವ ಲೇಖಕರೂ ಸೇರಿದಂತೆ ಇವತ್ತಿನ ಅನೇಕ ಪ್ರಮುಖ ಲೇಖಕರು ಈ ಪ್ರಕಾರದ ಪತ್ರಿಕೆಗಳಿಂದಲೇ ಜನಮನ ಗೆದ್ದಿದ್ದು. ಅವುಗಳಲ್ಲಿ ಪ್ರಜಾವಾಣಿ, ಸುಧಾ, ತರಂಗ, ದೀಪಾವಳಿ ವಿಶೇಷಾಂಕ, ಮಯೂರ, ಕಸ್ತೂರಿ, ತುಷಾರ, ಪ್ರಜಾಮತ ಇತ್ಯಾದಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿವೆ.