India Languages, asked by mswamy3, 4 days ago

೨ ಸಂಧಿ ಕಾರ್ಯ ಎಂದರೇನು? ಕನ್ನಡದಲ್ಲಿ ಉದಾಹರಣೆಯೊಂದಿಗೆ

sandhi karia meaning with few examples in Kannada ​

Answers

Answered by Cholocious
5

Answer:

ವರ್ಣಗಳ ಪರಸ್ಪರ ಸೇರ್ಪಡೆಯಲ್ಲಿ ಆಗುವ ಮಾರ್ಪಾಟನ್ನು ಸಂಧಿಕಾರ್ಯ ಎನ್ನಬಹುದು.

ಉದಾಹರಣೆ-

ಆಗ + ಆಗ = ಆಗಾಗ

ಹೋಗು + ಎಂದ = ಹೋಗೆಂದ

ಚಳಿ + ಕಾಲ = ಚಳಿಗಾಲ

ಕಣ್ + ಪನಿ = ಕಂಬನಿ

ಮಗು + ಅನ್ನು = ಮಗುವನ್ನು

ಪಿತೃ + ಇಗೆ = ಪಿತೃವಿಗೆ

ಕನ್ನಡ ವ್ಯಾಕರಣದಲ್ಲಿನ ಮುಖ್ಯ ಸಂಧಿಗಳು ಮೂರು.

1. ಲೋಪಸಂಧಿ

2. ಆಗಮಸಂಧಿ

3. ಆದೇಶಸಂಧಿ

(1) ಲೋಪಸಂಧಿ-

ಎರಡು ಸ್ವರಗಳು ಒಂದನ್ನೊಂದು ಕೂಡಿದಾಗ, ಮೊದಲನೆಯ ಸ್ವರವು ಲೋಪ ಆಗುತ್ತದೆ. ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು.

ಉದಾಹರಣೆ-

ನೋಡುತ್ತ + ಇರು = ನೋಡುತ್ತಿರು

ಮಹ + ಈಶ = ಮಹೇಶ

ಹೋಗು + ಎಂದ = ಹೋಗೆಂದ

ಒಂದು+ ಎರಡು = ಒಂದೆರಡು

(2) ಆಗಮಸಂಧಿ

ಹಲವೊಮ್ಮೆ ಎರಡು ವರ್ಣಗಳು ಸೇರಿದಾಗ, ಆ ಜಾಗದಲ್ಲಿ ಬೇರೊಂದು ಹೊಸ ವರ್ಣ ಕಾಣಿಸಿಕೊಳ್ಳುತ್ತದೆ. ಇದನ್ನೇ ಆಗಮ ಸಂಧಿ ಎನ್ನಲಾಗುವುದು.

ಇದರಲ್ಲಿ 2 ವಿಧ

1. ಯಕಾರಾಗಮ

2. ವಕಾರಾಗಮ

ಮೊದಲ ಪದದ ಕೊನೆಯಲ್ಲಿ ಅ, ಇ, ಈ, ಎ, ಏ, ಐ ಸ್ವರಗಳು ಅದರ ಮುಂದಣ ಪದದ ಮೊದಲಲ್ಲಿ ಬೇರೊಂದು ಸ್ವರ ಬಂದಾಗ, ಈ ಎರಡೂ ಸ್ವರಗಳ ಬದಲು ‘ಯ’ ವರ್ಣವು ಹೊಸದಾಗಿ ಆಗಮಿಸುವುದು. ಇದನ್ನೇ ಯಕಾರಾಗಮ ಸಂಧಿ ಎನ್ನುವರು.

ಉದಾಹರಣೆ-

ತಾಯಿ + ಅನ್ನು = ತಾಯಿಯನ್ನು

ಕೈ + ಇಂದ = ಕೈಯಿಂದ.

ಮೊದಲ ಪದವು ಉ, ಊ, ಋ, ಋ, ಒ, ಓ, ಔ ವರ್ಣಗಳಿಂದ ಕೊನೆಗೊಂಡಿದ್ದು, ಮುಂದಣ ಪದದ ಪ್ರಾರಂಭದಲ್ಲಿ ಯಾವುದಾದರೂ ಬೇರೊಂದು ಸ್ವರ ಬಂದು ಸೇರಿದ್ದಾಗ ‘ವ್’ ಎಂಬ ಹೊಸ ವರ್ಣ ಆ ಜಾಗದಲ್ಲಿ ಕಾಣಿಸಿಕೊಳ್ಳುವುದು. ಇದನ್ನೇ ವಕಾರಾಗಮ ಸಂಧಿ ಎನ್ನಲಾಗುವುದು.

ಉದಾಹರಣೆ-

ಕರು + ಅನ್ನು = ಕರುವನ್ನು

ಹೂ + ಉ = ಹೂವು

ಶತೃ + ಇಗೆ = ಶತೃವಿಗೆ

ಗೋ + ಅನ್ನು = ಗೋವನ್ನು

(3) ಆದೇಶಸಂಧಿ-

ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು.

ಉದಾಹರಣೆ-

ಮಳೆ + ಕಾಲ = ಮಳೆಗಾಲ

ಬೆಟ್ಟ+ ತಾವರೆ = ಬೆಟ್ಟದಾವರೆ

ಪೂ+ ಪುಟ್ಟಿ = ಪೂಬುಟ್ಟಿ

ಕಣ್ + ಪನಿ = ಕಂಬನಿ

ಹೀಗೆಯೇ ಪದದ ಕೊನೆಯಲ್ಲಿ ‘ಅ’ ಬಂದಿದ್ದಾಗ ‘ವ್’ ಬೇರೊಂದು ವರ್ಣವೂ ಬರುವುದುಂಟು.

ಉದಾಹರಣೆ-

ಹೊಲ + ಅನ್ನು = ಹೊಲವನ್ನು

ಹಲವೊಮ್ಮೆ ಎರಡು ಪದಗಳು ಕೂಡಿದರೂ ಸಂಧಿ ಆಗದಿರುವುದು ಉಂಟು.

ಉದಾಹರಣೆ-

ಹೊಸ + ಪುಸ್ತಕ = ಹೊಸಪುಸ್ತಕ

ಹಳೆ + ಕೋಟು = ಹಳೆಕೋಟು

Similar questions