Science, asked by Trishna2395, 2 months ago

Sankramika rogadha bagge munnecharikegalu

Answers

Answered by Shreya762133
4

Answer:

ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ಅಗತ್ಯ

  • ಸಂತೆಮರಹಳ್ಳಿ: ಸಾಂಕ್ರಾಮಿಕ ರೋಗಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರಿಂದ ಇದಕ್ಕೆ ಎಚ್ಚರಿಕೆಯೇ ಪ್ರಥಮ ಚಿಕತ್ಸೆಯಾಗಿದ್ದು, ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೋಮಶೇಖರಪ್ಪ ಸಲಹೆ ನೀಡಿದರು.
  • ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

  • ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ವೈಯಕ್ತಿಕ ಸ್ವತ್ಛತೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಜನರಲ್ಲಿ ಅರಿವು ಮೂಡಿಸಬೇಕು. ತಾವೂ ತಮ್ಮ ಮನೆಯಿಂದಲೇ ಇದನ್ನು ಪರಿಪಾಲಿಸುವ ಪಾಠ ಕಲಿತುಕೊಳ್ಳಬೇಕು.

  • ರೋಗರುಜಿನಗಳಿಂದ ದೂರವಿರಲು ಶುದ್ಧ ನೀರು ಕುಡಿಯುವುದು, ಬಳಕೆ ಮಾಡಬೇಕು.

  • ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸೊಳ್ಳೆ, ಕ್ರಿಮಿಕೀಟಗಳ ಆವಾಸಸ್ಥಾನವನ್ನು ತಮ್ಮ ಪರಿಸರದಿಂದ ದೂರವಿಡಬೇಕು. ನೀರನ್ನು ಶೇಖರಿಸಿ ಇಡುವಾಗ ಇದಕ್ಕೆ ಮುಚ್ಚಳಗಳನ್ನು ಮುಚ್ಚಬೇಕು. ಪರಿಸರ ಸ್ವತ್ಛವಾಗಿಡುವ ಮೂಲಕ ರೋಗ ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು.

  • ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎಸ್‌.ಪ್ರಿಯಾ ಪ್ರಥಮ, ಪೂಜಾ ದ್ವಿತೀಯ ಮತ್ತು ಎಸ್‌. ಮಹದೇವಸ್ವಾಮಿ ತೃತೀಯ ಬಹುಮಾನ ಪಡೆದುಕೊಂಡರು. ಶಾಲೆಯ ಪ್ರಾಂಶುಪಾಲ ಶಿವಣ್ಣ, ಶಿಕ್ಷಕರಾದ ಮಂಜುನಾಥ್‌, ನಿಂಗರಾಜು, ಪುಟ್ಟರಾಜು ಆರೋಗ್ಯ ಇಲಾಖೆ ಆರೀಫ್, ಇಂದ್ರಮ್ಮ, ಪವಿತ್ರಾ, ಸುನಂದಾ ಜಯಲಕ್ಷ್ಮೀ ಇದ್ದರು.

  • ಕಬ್ಬಿನ ಗದ್ದೆಗೆ ಬೆಂಕಿ ಲಕ್ಷಾಂತರ ರೂ. ನಷ್ಟ
  • ಸಂತೆಮರಹಳ್ಳಿ: ಸಮೀಪದ ಅಂಬಳೆ ಗ್ರಾಮದಲ್ಲಿ ಬುಧವಾರ ಸಂಜೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿಬಿದ್ದು ಕಟಾವಿಗೆ ಬಂದಿದ್ದ ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ. ಅಂಬಳೆ ಗ್ರಾಮದಲ್ಲಿ 5 ಎಕರೆ ಪ್ರದೇಶದ ಕಬ್ಬು ಬೆಂಕಿಗಾಹುತಿಯಾಗಿದೆ.

HOPE SO IT HELPS YOU

Similar questions