World Languages, asked by rahul954995, 1 year ago

savarna deerga sandhi in kannada​

Answers

Answered by 439ibrahim
42

Answer:

ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.  

ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.

ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.

ಉದಾಹರಣೆಗೆ:  

ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಉದಾಹರಣೆಗಳು:

ಕೃ ತ   +   ಅ ರ್ಥ   =   ಕೃ ತಾ ರ್ಥ

( ಅ   +   ಅ     =     ಆ )

ಶ ಚಿ   +   ಇಂ ದ್ರ   =   ಶ ಚೀಂ ದ್ರ

( ಇ   +   ಇ     =     ಈ )

ಬ ಹು   +   ಉ ದ ಕ   =   ಬ ಹೂ ದ ಕ

( ಉ   +   ಉ       =     ಊ )

ವಿ ದ್ಯಾ   +   ಅ ಭ್ಯಾ ಸ   =   ವಿ ದ್ಯಾ ಭ್ಯಾ ಸ

( ಆ   +   ಅ       =     ಆ )  

ಸ ತೀ   +   ಈ ಶ   =   ಸ ತೀ ಶ

( ಈ   +   ಈ     =     ಈ )

ಉ ಪ   +   ಆ ಹಾ ರ   =   ಉ ಪಾ ಹಾ ರ

( ಅ   +   ಆ       =     ಆ )

Explanation:

Answered by radhikaaash
7

Answer:

kcvjkkvjk

gjjvb

Explanation:

fgjbcg

Similar questions