India Languages, asked by prachetha, 1 year ago

sawch bharath essay in kannada

Answers

Answered by Srushthi
1
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದುದು ೨೦೧೫-೨೦೧೬ನೇ ಸಾಲಿನಲ್ಲಿ.ಇದು ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ .ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು.ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚ­­ನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊ­ಡೆದಿವೆ.
Similar questions