sentences about farmer in kannada
Answers
Explanation:
ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು, ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ, ಮತ್ತು ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಬದಾಳುಗಳೆಂದು ಕರೆಯಲಾಗುತ್ತದೆ. ಆದರೆ, ಸ್ವಲ್ಪ ಕಾಲದ ಹಿಂದಿನವರೆಗೂ, ರೈತನು ಪರಿಶ್ರಮ ಮತ್ತು ಗಮನದಿಂದ ಸಸ್ಯ, ಬೆಳೆ ಇತ್ಯಾದಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಅಥವಾ ಸುಧಾರಿಸುವ ಅಥವಾ ಪ್ರಾಣಿಗಳನ್ನು (ಜಾನುವಾರು ಅಥವಾ ಮೀನು) ಬೆಳೆಸುವ ವ್ಯಕ್ತಿಯಾಗಿದ್ದನು.
Nepali farmer.jpg
ಕೃಷಿಯ ಕಾಲಮಾನ ನವಶಿಲಾಯುಗದಷ್ಟು ಹಿಂದಿನದ್ದು ಎಂದು ನಿರ್ಧರಿಸಲಾಗಿದೆ. ಕಂಚಿನ ಯುಗದ ವೇಳೆಗೆ, ಸುಮೇರಿಯನ್ನರು ಕೃಷಿ ವಿಶೇಷ ಕಾರ್ಮಿಕ ಪಡೆಯನ್ನು ಹೊಂದಿದ್ದರು (ಕ್ರಿ.ಪೂ. ೫೦೦೦-೪೦೦೦), ಮತ್ತು ಬೆಳೆಗಳನ್ನು ಬೆಳೆಯಲು ನೀರಾವರಿ ಮೇಲೆ ಬಹಳವಾಗಿ ಅವಲಂಬಿಸಿದ್ದರು. ಅವರು ವಸಂತ ಋತುವಿನಲ್ಲಿ ಕೊಯ್ಲು ಮಾಡುವಾಗ ಮೂರು ವ್ಯಕ್ತಿಗಳ ತಂಡಗಳ ಮೇಲೆ ಅವಲಂಬಿಸಿದ್ದರು. ಪ್ರಾಚೀನ ಈಜಿಪ್ಟ್‌ನ ರೈತರು ಬೇಸಾಯ ಮಾಡುತ್ತಿದ್ದರು ಮತ್ತು ನೈಲ್ ನದಿಯಿಂದ ತಮ್ಮ ನೀರನ್ನು ಒದಗಿಸಿಕೊಳ್ಳುತ್ತಿದ್ದರು ಮತ್ತು ಅದರ ಮೇಲೆ ಅವಲಂಬಿಸಿದ್ದರು.
ನಿರ್ದಿಷ್ಟ ಪಳಗಿಸಿದ ಪ್ರಾಣಿಗಳನ್ನು ಬೆಳೆಸುವ ರೈತರನ್ನು ಸೂಚಿಸಲು ಹೆಚ್ಚು ವಿಶಿಷ್ಟ ಪದಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಪಶುಪಾಲಕರು ಅಥವಾ ಜಾನುವಾರು ಸಾಕುವವರೆಂದರೆ ದನಗಳು, ಕುರಿಗಳು, ಆಡುಗಳು, ಮತ್ತು ಕುದುರೆಗಳಂತಹ ಮೇಯುವ ಜಾನುವಾರುಗಳನ್ನು ಬೆಳೆಸುವವರು. ಮುಖ್ಯವಾಗಿ ಹಾಲು ಉತ್ಪಾದನೆಯಲ್ಲಿ (ದನಗಳು, ಮೇಕೆಗಳು, ಕುರಿಗಳು ಅಥವಾ ಇತರ ಹಾಲು ಉತ್ಪಾದಿಸುವ ಪ್ರಾಣಿಗಳಿಂದ) ತೊಡಗಿರುವವರಿಗೆ ಹೈನು ಕೃಷಿಕ ಪದವನ್ನು ಅನ್ವಯಿಸಲಾಗುತ್ತದೆ. ಕೋಳಿ ಸಾಕಣೆಗಾರನೆಂದರೆ ಮಾಂಸ, ಮೊಟ್ಟೆ ಅಥವಾ ಗರಿ ಉತ್ಪಾದನೆಗಾಗಿ (ಸಾಮಾನ್ಯವಾಗಿ ಎಲ್ಲ ಮೂರು) ಕೋಳಿಗಳು, ಟರ್ಕಿಗಳು, ಬಾತುಕೋಳಿಗಳು ಅಥವಾ ಹೆಬ್ಬಾತುಗಳನ್ನು ಸಾಕುವುದರ ಮೇಲೆ ಗಮನಹರಿಸುವವನು.
Answer:
ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆ (ಡಿ.23) ಗೆ ಹೆಚ್ಚು ಅರ್ಥ ಬರಲಿದೆ.
Explanation:
ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧರಿ ಚರಣ್‌ಸಿಂಗ್‌ರ ಜನ್ಮ ದಿನವನ್ನೇ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಚರಣ್‌ಸಿಂಗ್‌ರು ಅಧಿಕಾರಾವಧಿಯಲ್ಲಿ ರೈತರ ಜೀವನ ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು. ಚೌಧರಿ ಚರಣ್‌ಸಿಂಗ್‌ರು ಒಬ್ಬ ಯಶಸ್ವಿ ಬರಹಗಾರರಾಗಿದ್ದರು. ಅಲ್ಲದೆ ರೈತರು ಮತ್ತು ಅವರ ಸಮಸ್ಯೆಗಳ ಕುರಿತು ಅವರ ಆಲೋಚನೆಗಳನ್ನು ಚಿತ್ರಿಸುವ ಹಲವು ಪುಸ್ತಕಗಳನ್ನು ಬರೆದರು. ಸಮಾಜವಾದಿ ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್‌ರ ಒಡನಾಡಿಯಾಗಿ ಗುರುತಿಸಿಕೊಂಡರು. ಚರಣ್‌ಸಿಂಗ್‌ರು ಉತ್ತರ ಪ್ರದೇಶದ ಘಾಜಿಯಾಬಾದ್‌ನವರು. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್‌ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಬಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾದರು. 1938ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು. ಆ ಮೂಲಕ ರೈತ ಪರ ಧೋರಣೆ ಪ್ರದರ್ಶಿಸಿದರು. ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆ ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲ ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು. ಪಂಜಾಬ್ ರಾಜ್ಯ ಇದನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವಾಯಿತು.
1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿ ನಿಷೇಧಿಸುವ ಮತ್ತು ಭೂ ಸುಧಾರಣೆ ಕಾಯಿದೆ ಜಾರಿಗೆ ತರುವ ಮಹತ್ವದ ನಿಧಾರ ಕೈಗೊಂಡರು. ಮುಂದೆ ಇದು ಸಹ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು.
ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚರಣ್‌ಸಿಂಗ್ ರೈತ ಸಮುದಾಯದಲ್ಲಿ ಚಿರಸ್ಥಾಯಿಯಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತ ದಿನಾಚರಣೆ ಆಚರಣೆಗೆ ಬಂದಿದೆ. ನವ ದೆಹಲಿಯಲ್ಲಿರುವ ಪ್ರಸಿದ್ಧ 'ಕಿಸಾನ್ ಘಾಟ್'ನ್ನು ರೈತ ಸಮುದಾಯಕ್ಕೆ ಸಂಬಂಧಿಸಿದ ಕಾರಣ ಚೌಧರಿ ಚರಣ್‌ಸಿಂಗ್ ಅವರಿಗೆ ಸಮರ್ಪಿಸಲಾಗಿದೆ. ಭಾರತದಲ್ಲಿನ ಕೃಷಿ ಸಮುದಾಯಗಳಿಗೆ ಪ್ರಿಯವಾದ ಕಾರಣಗಳೊಂದಿಗಿನ ಅವರ ಸಂಬಂಧವು ದೆಹಲಿಯಲ್ಲಿ ಅವರ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಹೆಸರಿಸಿತು. ಡಿ.23 ರಂದು ಅವರ ಜನ್ಮದಿನವನ್ನು ಭಾರತದಲ್ಲಿ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತಿದೆ.