India Languages, asked by spoorti6, 30 days ago

sentences about fruits in kannada

Answers

Answered by sharmanamita962
1

Answer:

Kannada kannada dance in the one of the same same tome Una

Answered by nikhilsram2004
4

Answer:

ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ.. ರುಚಿ ರುಚಿಯಾದ ರಸಭರಿತ ಹಣ್ಣುಗಳನ್ನು ಮೆಲ್ಲುವುದೇ ಒಂದು ಸುಖ. ಆದರೆ, ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ, ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಹಣ್ಣುಗಳನ್ನು ತಿನ್ನಲೂ ಕ್ರಮವಿದೆ. ಊಟ ಅಥವಾ ತಿಂಡಿ ತಿನ್ನಲು ಅರ್ಧಗಂಟೆಯ ಮೊದಲು ಹಣ್ಣು ತಿನ್ನಬೇಕು. ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನಬಾರದು. ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಏಕೆಂದರೆ, ನಾವು ತಿಂದ ಆಹಾರ ಜಠರಕ್ಕೆ ಹೋದ ನಂತರ ಅದು ಕಿಣ್ವವಾಗಿ ಬದಲಾಗುತ್ತದೆ. ನಂತರ ಅದು ಆಮ್ಲವಾಗಿ ಬದಲಾಗಿ ಪಚನವಾಗಲು ಪ್ರಾರಂಭವಾಗುತ್ತದೆ. ಆದರೆ ಹಣ್ಣು ಹಾಗಲ್ಲ. ಅದು ಜಠರಕ್ಕೆ ಸೇರಿದ ತಕ್ಷಣವೇ ಪಚನವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ನಾವು ಆಹಾರ ಮತ್ತು ಹಣ್ಣನ್ನು ಒಟ್ಟಿಗೇ ತಿಂದರೆ, ತಿಂದ ಆಹಾರ ಹಣ್ಣಿನ ಜೊತೆಗೆ ಪಚನವಾಗಲು ಪ್ರಾರಂಭವಾಗುತ್ತದೆ. ಕಿಣ್ವವಾಗದೆ, ಆಮ್ಲವಾಗಿ ಪರಿವರ್ತನೆ ಹೊಂದಲು ಹಣ್ಣು ಆಹಾರಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕಾಗಿಯೇ ಎಸಿಡಿಟಿಯಂತಹ ತೊಂದರೆಯೂ ಕಾಣಿಸಿಕೊಳ್ಳಬಹುದು.

ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ, ಕೂದಲು ಹಣ್ಣಾಗುವುದು, ಬಕ್ಕತಲೆ, ವಿಪರೀತವಾಗಿ ಕೈ-ಕಾಲು ನಡುಗುವುದು ಮತ್ತು ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಗಳು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನೇ ತಿನ್ನುವುದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ.

ಹಣ್ಣುಗಳು ವಿಟಮಿನ್‌, ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರ. ಹೀಗಾಗಿ ಗರ್ಭಿಣಿ ಸ್ತ್ರೀಯರಿಗೂ ಕೂಡ ಹಣ್ಣುಗಳನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಹೊಟ್ಟೆಯಲ್ಲಿರುವ ಮಗುವಿಗೆ ಬೆಳವಣಿಗೆಗೆ ಬೇಕಾದ ಜೀವಸತ್ವಗಳು ನೈಸರ್ಗಿಕವಾಗಿ ಸಿಗಬೇಕೆಂದರೆ ಹಣ್ಣುಗಳನ್ನು ಸೇವಿಸಲೇ ಬೇಕು. ಮಗುವಿನ ಮೂಳೆ ಹಾಗೂ ಹಲ್ಲುಗಳು ಆರೋಗ್ಯಕರವಾಗಿ ರೂಪುಗೊಳ್ಳಲು, ದೃಷ್ಟಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನರವ್ಯೂಹದ ನಳಿಕೆಗಳ ನ್ಯೂನತೆಗಳಿಂದ ಮಗುವನ್ನು ತಡೆಯಲು ಮತ್ತು ಆರೋಗ್ಯಕರ ತೂಕ ಹೊಂದಲು ಸಹಕಾರಿಯಾಗುವಂತಹ ಗುಣಗಳು ಹಣ್ಣುಗಳಿಂದ ಮಗುವಿಗೆ ಸಿಗಲು ಸಾಧ್ಯ. ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಡುವ ಮಲಬದ್ಧತೆ ಮತ್ತು ಮೂಲವ್ಯಾಧಿಯಂತಹ ತೊಂದರೆಗಳಿಗೆ ಹಣ್ಣುಗಳೇ ಔಷಧಿಯಾಗಿವೆ.

ಆರೋಗ್ಯ ನೀಡುವ ವಿವಿಧ ಹಣ್ಣುಗಳು

Similar questions