India Languages, asked by unicornexility, 9 months ago

short note on gandhiji childhood life in kannada plz​

Answers

Answered by roopeshamaltp
1

Answer:

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ[೧] ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.

ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.[೨]

ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.[೩] ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;

ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.

ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.

ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.[೪][೫] ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)[೬]

ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.[೭] ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.[೮]

ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌. ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.

ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು.

೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು [[ಲಂಡನ್‌|ಲಂಡನ್‌ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು.[೯]

ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ [೯], ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು.[೩]

ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.[೯]

ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.[೩][೯] ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು [೩] ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.

ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.[೯] ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.

Explanation:

mark as brainliest

if it is helpful

Similar questions