small essay about forest in Kannada
Answers
Answered by
2
Explanation:
ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು ಚಿಕಿತ್ಸೆ ನೀಡಿ ಬಿಡುತ್ತದೆ.
ಮನುಷ್ಯನು ಕಾಲಕ್ರಮೇಣ ಕಾಡಿನಿಂದ ನಾಡಿನತ್ತ ಸಂಚಾರ ಮಾಡಿದ. ಕಾಡಿನ ಸೂಕ್ಷ್ಮತೆಗಳನ್ನು ಅರಿಯುವುದು ಮರೆತುಬಿಟ್ಟ. ಆದರೆ ನಾವು ಎಷ್ಟು ಮುಂದುವರೆದರೂ ಪ್ರಕೃತಿಗೆ ತಲೆಬಾಗಲೇಬೇಕು.
ನಮ್ಮ ಪೂರ್ವಜರು ಕಾಡಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ನಮ್ಮ ವೇದಗಳಲ್ಲಿ ಕೂಡ ಕಾಡಿನ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಥರ್ವ ವೇದದಲ್ಲಿ ನಾನು ನಿನ್ನಿಂದ ಏನನ್ನು ತೆಗೆದುಕೊಳ್ಳೂತ್ತೇನೂ, ಅದು ನಿನ್ನಲ್ಲಿ ಬೇಗ ಪುನಃ ಉತ್ಪನ್ನಗೊಳ್ಳಲಿ ಎಂದು ಹೇಳಲಾಗಿದೆ
Similar questions