speech gor childrens day in kannada
Answers
"ಪ್ರತಿ ಮನುಷ್ಯನೂ ತನ್ನೊಳಗಿರುವ ಮಗುತನದ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವುದು, ಬದುಕಿನಲ್ಲಿ ಸದಾ ಚೈತನ್ಯದಿಂದ ಉಳಿಯುವುದಕ್ಕಿರುವ ದಾರಿ" ಎಂಬುದು ಮಹಾತ್ಮರೊಬ್ಬರ ಮಾತು. ಇಂದು(ನ.14) ಮಕ್ಕಳ ದಿನಾಚರಣೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು(14.11.1889-27.05.1964) ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ.
ಮೋತಿಲಾಲ್ ನೆಹರು ಮತ್ತು ಸ್ವರೂಪ ರಾಣಿ ಅವರ ಪುತ್ರರಾಗಿ ಅಲಹಾಬಾದ್ ನಲ್ಲಿ ಜನಿಸಿದ ಜವಾಹರಲಾಲ್ ನೆಹರು ಎರಡು ಅವಧಿಗೆ ಭಾರತೀಯ ಪ್ರಧಾನಿಯಾಗಿ ಕಾರ್ಯನಿರ್ಹಿಸಿದರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದ ನೆಹರು, ಗಾಂಧಿಯವರ ಅಹಿಂಸಾ ಹೋರಾಟವನ್ನು ಬೆಂಬಲಿಸಿದವರು. ಮಕ್ಕಳನ್ನು ಬಹುವಾಗಿ ಇಷ್ಟಪಡುತ್ತಿದ್ದ ನೆಹರು ಅವರೇ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಹೇಳಿದ್ದರು.
ಇಂದು ಅವರ 128 ನೇ ಜನ್ಮದಿನದ ನಿಮಿತ್ತ ಟ್ವಿಟ್ಟರ್ ನಲ್ಲಿ #ChildrensDay ಟ್ರೆಂಡಿಂಗ್ ಆಗಿದೆ. ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶದ ಭವಿಷ್ಯವೇ ಆದ ಮಕ್ಕಳಿಗೆ ತುಂಬು ಹೃದಯದಿಂದ ಮಕ್ಕಳ ದಿನಾಚರಣೆಯ ಶುಭಕೋರಿದ್ದಾರೆ.
mark as brainliest