India Languages, asked by phshamin7, 7 months ago

stories in Kannada please ​

Answers

Answered by Sakshi192007
3

Answer:

ಮಹಾಭಾರತ ಯುದ್ಧ ಮುಗಿದ ನಂತರ ವೇದವ್ಯಾಸರು ತಮ್ಮ ಅಗಾಧ ತಪಸ್ಸಿನ ಶಕ್ತಿಯ ಫಲದಿಂದ ಮೊಮ್ಮಕ್ಕಳ ಕಾಲಾನಂತರವೂ ಆರೋಗ್ಯವಂತರಾಗಿ ಹಿಮಾಲಯದ ತಪ್ಪಲಿನಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಸೃಷ್ಟಿಕರ್ತ ಬ್ರಹ್ಮದೇವ ಮಹಾಭಾರತ ಯುದ್ಧದ ಕುರಿತು ಕೃತಿ ರಚಿಸಲು ಬಯಸಿದರು. ಈ ಶ್ರೇಷ್ಠ ಕೃತಿ ಬರೆಯಲು ಆ ಮಹಾಯುದ್ಧದ ಪ್ರತ್ಯಕ್ಷದರ್ಶಿ ಮತ್ತು ಅಲ್ಲಿಬರುವ ಪ್ರತಿ ಪಾತ್ರವನ್ನೂ ಹತ್ತಿರದಿಂದ ನೋಡಿರುವ ವೇದವ್ಯಾಸರಿಗಿಂತ ಶಕ್ತ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಅರಿತ ಅವರು ವೇದವ್ಯಾಸರ ಎದುರು ಪ್ರತ್ಯಕ್ಷರಾಗಿ ಕೃತಿ ರಚಿಸಲು ಕೇಳಿದರು.

ಅದಕ್ಕೊಪ್ಪಿದ ವ್ಯಾಸರು ತನ್ನ ಸಹಾಯಕ್ಕೆ ಲಿಪಿಕಾರನ ಅಗತ್ಯವಿದೆ ಎಂದು ಹೇಳಿದರು. ಅದಕ್ಕೆ ಬ್ರಹ್ಮದೇವ ಈ ಕೆಲಸಕ್ಕೆ ಪ್ರಥಮ ಪೂಜಿತ ಗಣಪತಿಯೇ ಯೋಗ್ಯನೆಂದು ತಿಳಿಸಿದರು. ಆಗ ವ್ಯಾಸರು ತಮ್ಮ ಕೃತಿ ರಚನೆಯ ಕೆಲಸಕ್ಕೆ ನೆರವಾಗುವಂತೆ ಗಣಪತಿಯನ್ನು ಕೋರಿ ಮತ್ತೆ ತಪಸ್ಸಿಗೆ ಕುಳಿತರು. ಈ ತಪಸ್ಸಿಗೆ ಪ್ರಸನ್ನನಾದ ಗಣಪತಿ ವ್ಯಾಸರೆದುರು ಸಾಕ್ಷಾತ್ಕಾರಗೊಂಡು ತಪಸ್ಸಿನ ಕಾರಣ ಕೇಳಿದನು.

ಆಗ ವ್ಯಾಸರು ಬ್ರಹ್ಮದೇವರಿಂದ ನಿವೇದನೆಗೊಳಗಾದ ಕಾರ್ಯವನ್ನು ತಿಳಿಸಿ ಅದಕ್ಕೆ ಸಹಾಯ ಮಾಡುವಂತೆ ಕೋರಿದರು. ಇಂತಹ ಅದ್ಭುತ ಕೃತಿ ರಚಿಸುವ ಶಕ್ತಿ ವೇದವ್ಯಾಸರಿಗಿದೆ ಎಂದು ಗಣಪತಿಗೆ ತಿಳಿದಿದ್ದರೂ ಅವರನ್ನು ಪರೀಕ್ಷಿಸುವ ಸಲುವಾಗಿ ಆತ ಒಂದು ಷರತ್ತು ವಿಧಿಸಿ, ವ್ಯಾಸರು ಯಾವುದೇ ಕಾರಣಕ್ಕೂ ಕಥೆ ಹೇಳುವುದನ್ನು ಮಧ್ಯದಲ್ಲಿ ನಿಲ್ಲಿಸಬಾರದು. ಹಾಗೇನಾದರು ಮಾಡಿದರೆ ನಾನು ಆ ಕ್ಷಣವೇ ಬರೆಯುವುದನ್ನು ನಿಲ್ಲಿಸಿ ಮರಳುತ್ತೇನೆ ಮತ್ತು ನಾನೂ ಯಾವುದೇ ಕಾರಣಕ್ಕೂ ಬರೆಯುವುದನ್ನು ನಿಲ್ಲಿಸುವುದಿಲ್ಲವೆಂದು ಹೇಳಿದನು.

ವ್ಯಾಸರಿಗೆ ತಮ್ಮ ಶಕ್ತಿಯ ಅರಿವಿದ್ದರೂ ಗಣಪತಿಯ ವೇಗಕ್ಕೆ ಕಥೆ ಹೇಳಲು ಸಾಧ್ಯನಾ ಎಂಬ ಸಂಶಯ ಮೂಡಿ ಅದಕ್ಕೊಂದು ಉಪಾಯ ಹೂಡುತ್ತಾರೆ. ಅದರಂತೆ ಅವರು ಗಣಪತಿಗೆ, ನಾನು ಹೇಳುವ ಕಥೆಯನ್ನು ಅರ್ಥ ಮಾಡಿಕೊಳ್ಳದೇ ನೀನು ಬರೆಯುವಂತಿಲ್ಲ' ಎಂದಾಗ ಆತ ಅದಕ್ಕೆ ಒಪ್ಪಿದನು. ಅದರಂತೆ ಒಂದು ಶುಭ ಮುಹೂರ್ತದಲ್ಲಿಮಹಾಭಾರತದ ಕೃತಿ ರಚಿಸಲು ಕುಳಿತ ಲಿಪಿಕಾರ ಗಣಪತಿಗೆ ವಂದಿಸಿ ವ್ಯಾಸರು ಕಥೆ ಹೇಳಲು ಶುರು ಮಾಡಿದನು.

ಅವರು ಹೇಳಿದ್ದನ್ನೆಲ್ಲ ಶ್ರದ್ಧೆಯಿಂದ ಕೇಳಿಸಿಕೊಂಡು ಗಣಪತಿ ಬರೆಯತೊಡಗಿದನು. ವ್ಯಾಸರು ತಮ್ಮ ಉಪಾಯದಂತೆ ತಮಗೆ ಕ್ಷಣಿಕ ವಿಶ್ರಾಂತಿ ಬೇಕೆನಿಸಿದಾಗ ಕ್ಲಿಷ್ಟಕರವಾಗಿರುವ ಮತ್ತು ಯೋಚನೆಗೆ ಒರೆ ಹಚ್ಚುವಂತಹ ವಾಕ್ಯಗಳನ್ನು ಹೇಳಿ ಅದನ್ನು ಗಣಪತಿ ಅರ್ಥೈಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲಿವಿಶ್ರಾಂತಿ ಪಡೆದು ಮತ್ತೆ ಕಥೆ ಹೇಳುವುದನ್ನು ಮುಂದುವರೆಸಿದರು. ಕೃತಿ ರಚಿಸುವ ಸಮಯದಲ್ಲೊಮ್ಮೆ ಗಣಪತಿಯ ಲೇಖನಿ ತುಂಡಾಗುತ್ತದೆ. ಆಗ ಬರವಣಿಗೆಯನ್ನು ನಿಲ್ಲಿಸುವುದಿಲ್ಲಎಂಬ ಮಾತಿನಂತೆ ನಡೆದುಕೊಳ್ಳುವ ಸಲುವಾಗಿ ಗಣಪತಿ ತನ್ನ ದಂತವನ್ನೇ ಮುರಿದು ಕೃತಿ ರಚನೆಯನ್ನು ಮುಂದುವರೆಸಿದನು. ಹೀಗೆ ವರ್ಷಗಟ್ಟಲೇ ವ್ಯಾಸರು ಕಥೆ ಹೇಳುವುದು ಮತ್ತು ಗಣಪತಿ ಬರೆಯುವುದು ಮುಂದುವರೆದು ಶ್ರೇಷ್ಠ ಕೃತಿಯೊಂದು ರಚನೆಯಾಗುತ್ತದೆ.

hope it helps you

Similar questions