Summary of Ninna Muttina Sattigeyannittu Salahu
Answers
ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು
( ಕನ್ನಡದಲ್ಲಿ )
ಬೇಟೆಗೆಂದು ಅರಣ್ಯಕ್ಕೆ ತೆರಳಿದ ಹರಿಶಂದ್ರನು ಅರಿಯದ ವಿಶ್ವಾಮಿತ್ರನ ಆಶ್ರಮದೊಳಗೆ ಕಾಲಿಡುತ್ತಾನೆ. ಆಗ ಅವನಿಗೆ ಗುರುವಿನಾಜ್ಞೆ ಮೀರಿ ಬಂದದ್ದರ ಅರಿವಾಗುತ್ತದೆ. ಅದೇ ಸಮಯಕ್ಕೆ ವಿಶ್ವಾಮಿತ್ರನು, ಹರಿಶಂದ್ರನ ಸತ್ಯಸಂಧತೆಯನ್ನು ಪರೀಕ್ಷಿಸಲು ತನ್ನ ತಪೋಬಲದಿಂದ ಗಾನರಾಣಿಯರನ್ನು ಸೃಷ್ಟಿಸಿ, ಹರಿಶ೦ದ್ರನ ಬಳಿ ಕಳುಹಿಸುತ್ತಾನೆ. ತಮ್ಮ ಹಾಡು, ನೃತ್ಯಗಳಿಂದ ಹರಿಶಂದ್ರನನ್ನು ಸಂತೋಷಪಡಿಸುತ್ತಾರೆ. ಈ ಸಂದರ್ಭದಲ್ಲಿ ಗಾನರಾಣಿಯರಿಗೂ ಮತ್ತು ಹರಿಶ್ಚ೦ದ್ರರಿಗೂ ನಡೆದ ಸಂವಾದ ಇಲ್ಲಿದೆ:
ವಿಶ್ವಾಮಿತ್ರನ ಕೋಪ, ಛಲದಿಂದ ಸೃಷ್ಟಿಯಾದ ಗಾನರಾಣಿಯರ ಮೈಬಣ್ಣ ಕಡುಗಪ್ಪಾಗಿರುತ್ತದೆ. ವರ್ಣನೆ ಇಲ್ಲಿದೆ:- ಕಾರಿರುಳಿನಲ್ಲಿ ಕನ್ನೆಯರು ನೋಡಲೆಂದು ಬಂದರೋ ಎಂಬಂತೆ ಹರಿಶ೦ದ್ರನ ಬಳಿ ಧಾವಿಸುತ್ತಾರೆ. ಸುರಾಸುರರು ಸಮುದ್ರಮ ಪಥನ ಮಾಡಿದಾಗ ಹುಟ್ಟಿದ ವಿಷ ಹೇಗೆ ಕಪ್ಪಾಗಿತ್ತೋ ಹಾಗೆ ಕಪ್ಪು ಬಣ್ಣದಿಂದ ಕೂಡಿದ್ದರು. ಈ ಕನ್ನೆಯರು (ಜಲದೇವಿಯರು) ತಮ್ಮ ಕಪ್ಪನೆಯ ಬಣ್ಣದಿಂದ ನೊಂದು, ಮನುಷ್ಯ ಜನ್ಮ ತಾಳದಿದ್ದರೇ ಎಂಬುದು ಕವಿಯ ಸಂಶಯ. ಕಮಲಜನು ನೀಲಿವರ್ಣದ ಸಾಲಭಂಜಿಕೆಗಳಿಗೆ ಜೀವ ತುಂಬಿರುವನೋ ಎಂಬಂತೆ ಅವರು ಸುಂದರವಾಗಿ ಕಾಣುತ್ತಿದ್ದರು. ಇಂತಹ ಕೃಷ್ಣವರ್ಣದ ಸುಂದರ ಗಾನರಾಣಿಯರು ಅರಸನ ಬಳಿ ನೃತ್ಯ ಮಾಡಲು ಬರುತ್ತಾರೆ.
ವಿಶ್ವಾಮಿತ್ರ ಸೃಷ್ಟಿಸಿದ ಈ ಮಾಯಾಂಗನೆಯರು, ಮತ್ತು ಭಾವು, ಭಾವದಟರಾಯ, ಮಝರೇರಾಯ, ರಾಯದಳವುಳಕಾರ, ರಾಯಕಂಟಕ, ರಾಯಜಗಜಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮಥನ, ರಾಯಜೀಯ ಸ್ಥಿರಂಜೀವ ಎಂದು ಹರಿಶ್ಚಂದ್ರನನ್ನು ಹೊಗಳುತ್ತಾ, ಅವನಿಗೆ ನಮಸ್ಕರಿಸಿ ಹಾಡಲು ಪ್ರಾರಂಭಿಸಿದರು.
ಕಾಡುಹಂದಿಯನ್ನು ಬೇಟೆಯಾಡಲು ಬೆನ್ನಟ್ಟಿದ ಹರಿಶ್ಚ೦ದ್ರ ರಾಜನಿಗೆ ಆಯಾಸವಾಗಿ ತಿಳಿಯದ ವಿಶ್ವಾಮಿತ್ರನ ಆಶ್ರಮಕ್ಕೆ ಬಂದುಬಿಟ್ಟನು. ಆ ನಂತರ ತಾನು ತನ್ನ ಗುರುಗಳಾದ ವಸಿಷ್ಕರ ಆಜ್ಞೆ ಮೀರಿ ಇಲ್ಲಿಗೆ ಬಂದಿದ್ದಕ್ಕೆ ರಾಜನಿಗೆ ಭಯ ಆಗುತ್ತದೆ. ಇದರ ಜೊತೆಗೆ ತಾನು ಕಂಡ ಕೆಟ್ಟ ಕನಸಿನ ನೆನಪಾಗಿ ಅಂಜಿಕೆ ಮತ್ತಷ್ಟು ಜಾಸ್ತಿಯಾಗುತ್ತದೆ. ಆದರೆ, ಈ ಎಲ್ಲಾ ಆಯಾಸ, ಅಂಜಿಕೆಗಳು ದೂರವಾಗುವಂತೆ ಸಮಯೋಜಿತವಾದ ಗಾನರಾಣಿಯರ ಗಾನನೃತ್ಯಗಳನ್ನು ಕೇಳಿ, ಕಂಡು ಸಂತೋಷವಾಗುತ್ತದೆ. ಈ ಸಂತಸದಿಂದ ರಾಜನು ನೃತ್ಯಗಾರ್ತಿಯರಿಗೆ ತನ್ನಲ್ಲಿದ್ದ ಆಭರಣವನ್ನು ಉಡುಗೊರೆಯಾಗಿ ಕೊಡುವನು.
ಬಡವನಿಗೆ ಆನೆ ಉಡುಗೊರೆಯಾಗಿ ದೊರಕಿದರೆ ಪ್ರಯೋಜನವಿದೆಯೇ? ಬಾಯಾರಿದವನಿಗೆ ತುಪ್ಪ ಸಿಕ್ಕರೆ ಅವನ ದಾಹ ಹಿಂಗುವುದೇ? ಕಾಯಿಲೆ ಬಂದು ಮಲಗಿದಾಗ ರಂಭೆಯಂತಹ ಸುಂದರ ಸ್ತ್ರೀ ದೊರೆತರೂ ಉಪಯೋಗವಿಲ್ಲ. ಸಾಯುವ ಸಮಯದಲ್ಲಿ ಅರಸುತನ ಒದಗಿದರೆ ಫಲವೇನು? ಬಿಸಿಲಿನಲ್ಲಿ ಒಣಗಿ ಬೆಂಡಾಗಿ ಬೀಳುತ್ತಿರುವ ನಮಗೆ ನೀನು ಮಣಿಯ ಆಭರಣಗಳನ್ನು ಕೊಟ್ಟರೆ ಪ್ರಯೋಜನವೇನು ಅರಸ ಹೇಳು ಎಂದು ನೃತ್ಯಗಾರ್ತಿಯರು ಅರಸನನ್ನು ಪ್ರಶ್ನಿಸುತ್ತಾರೆ.
ಕಡಲಿನಲ್ಲಿ ಈಜುವವನಿಗೆ ತೇಪ್ಪವನ್ನು ಉಡುಗೊರೆಯಾಗಿ ಕೊಡಬೇಕು. ಕಡು ಬಡವನಿಗೆ ಚಿನ್ನವನ್ನು ನೀಡಬೇಕು. ರೋಗಿಯಾದವನಿಗೆ ಅಮೃತ ಕುಡಿಸಬೇಕು. ಆಗ ಕೊಟ್ಟ ಉಡುಗೊರೆ ಅವರಿಗೂ ಅತೀವವಾದ ಸಂತಸವಾಗುತ್ತದೆ. ಸುಡು ಸುಡನೆ ಸುಡುವ, ಬಿರುಬಿಸಿಲ ಸಕಯಿಂದಾಗಿ ಉಸಿರಾಡುವುದೇ ಕಷ್ಟವಾಗಿದೆ. ಬಿಸಿಲಿನ ಪ್ರಖರತೆಯಿಂದ ಬಾಯಿ ಬತ್ತಿಹೋಗಿದೆ. ಸುತ್ತಲಿನ ಧಗೆಯಿಂದ ಸಾವು ಬಂದಂತೆ ಎನ್ನಿಸುತ್ತಿದೆ. ಇಂತಹ ಸಮಯದಲ್ಲಿ ನೀನು ನಮಗೆ ಆಸರೆಯಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು ಇತ್ತು ಸಲಹು ಅರಸನೇ” ಎಂದು ಗಾನರಾಣಿಯರು ಹರಿಶ್ಚಂದ್ರನನ್ನು ಕೇಳಿಕೊಳ್ಳುವರು.
ಸೂರ್ಯವಂಶದ ಅರಸನಿಗೆ ಪಟ್ಟ ಕಟ್ಟುವಾಗ ಶ್ವೇತಛತ್ರ ಇಲ್ಲದಿದ್ದರೆ ಸಾಧ್ಯವಿಲ್ಲ. ಯುದ್ಧ ಮಾಡಲು ಹೊರಟಾಗ ರಥದ ಮೇಲೆ ಬಿಳಿಕೊಡೆ ಇರಲೇಬೇಕು. ಆಗಲೇ ಹಗೆಗಳು ಬೀಳಿಕೊಡೆಯನ್ನು ಕಂಡು ಅರಸನೆಂದು ಬಗೆದು
ಭಯಪಡುವರು. ಶ್ವೇತಛತ್ರದ ನೆರಳಿನಲ್ಲಿ ಇರುವವನಿಗೆ ಯಾವುದೇ ರೀತಿಯ ತೊಂದರೆ, ದುಃಖ, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಯಾವುದೂ ಇರುವುದಿಲ್ಲ. ಇದನ್ನು ತಿಳಿದೂ ನೀವು ಸತ್ತಿಗೆಯನ್ನು ಕೇಳಬಹುದೇ ಹೇಳು ಎಂದು ಹರಿಶಂದ್ರನು ನೃತ್ಯಗಾರ್ತಿಯರನ್ನು ಪ್ರಶ್ನಿಸುತ್ತಾನೆ.
ಅನುನಯದಿಂದ ಏನು ಬೇಕಾದರೂ ಕೊಡಬಹುದು; ಅಥವಾ ಕೊಡದೆಯೂ ಇರಬಹುದು. ತಂದೆ, ತಾಯಿ, ಪ್ರಿಯತಮ, ದೈವ, ತನ್ನ ಪರಿವಾರ - ಹೀಗೆ ಕೊಡುವ ಮಹಾನ್ ಪುರುಷರು ಈವರೆಗೆ ಜನಿಸಿಲ್ಲ.
ಈ ಮೇಲೆ ಹೇಳಿದ ಯಾವುದನ್ನೂ ನೀನು ನಮಗೆ ಕೊಡಬೇಡ. ಕೇವಲ ಕೊಡೆಯನ್ನು ಮಾತ್ರ ಕೇಳುತ್ತಿದ್ದೇವೆ. ಅದರ ಬಗ್ಗೆ ಅಷ್ಟೊಂದು ಲೋಭವೇಕೆ ಎಂದು ಗಾನರಾಣಿಯರು ಕೇಳಿದಾಗ - 'ನನಗೆ ಬೆಳ್ಕೊಡೆಯೇ ಮಾತಾಪಿತರು. ಬೆಳ್ಳಡೆ ಮಾತಾಪಿತರಿಗೆ ಸಮಾನ' ಆದ್ದರಿಂದ ಕ ಡಲಾರನೆಂದು ಅರಸ ಹೇಳುತ್ತಾನೆ.
ಸತಿಯನ್ನು ಹೇಗೆ ಬೇರೆಯವರಿಗೆ ಕೊಡುವುದಿಲ್ಲವೋ ಹಾಗೆ ಸತ್ತಿಗೆಯನ್ನೂ ಜನಸಾಮಾನ್ಯರಿಗೆ ಕೊಡಬಾರದು. ಸತ್ತಿಗೆಯು ವಂಶಪಾರಂಗತವಾಗಿ ಬರುವುದರಿಂದ ಇದು ತಂದೆಗೆ ಸಮಾನ. ಪಟ್ಟ ಕಟ್ಟುವ ಸಮಯದಲ್ಲಿ ಸತ್ತಿಗೆಯ ಪೂಜೆಯನ್ನು ಮಾಡುವುದರಿಂದ ಇದು ದೈವಕ್ಕೆ ಸಮಾನ, ಬೆಲ್ಲೋಡೆಯು ತಂಪಾದ ನೆರಳನ್ನು ನೀಡುವುದರಿಂದ ಇದು ತಾಯಿಯಂತೆ, ಸತ್ತಿಗೆಯನ್ನು ಕಂಡು ರಣರಂಗದಲ್ಲಿ ವೈರಿಗಳು ಹಿಮ್ಮೆಟ್ಟುವುದರಿಂದ ಇದು ಚತುರಂಗಬಲಕ್ಕೆ ಸಮಾನ. ಇದೆಲ್ಲವನ್ನೂ ತಿಳಿದೂ ಅರಸನ ಮುತ್ತಿನ ಸತ್ತಿಗೆಯನ್ನು
ಬೇಡುವವರನ್ನು ಅತಿ ಮರುಳರು ಎನ್ನುತ್ತದೆ. ಈ ಮೂಲೋಕ ಎಂದು ಹರಿಶ್ಚಂದ್ರ ಗಾನರಾಣಿಯರಿಗೆ ವಿವರಿಸುತ್ತಾನೆ.
pls mark brainliest
Answer:
Explanation: