tenail rama Krishna stories in kannda full fast answer
Answers
Answer:
ವಿಕಟಕವಿ ತೆನಾಲಿ ರಾಮಕೃಷ್ಣ ತನ್ನ ಹಾಸ್ಯಪ್ರಜ್ಞೆಯಿಂದ ವಿಜಯನಗರದ ಮಹಾನ್ ಸಾಮ್ರಾಟ ಶ್ರೀಕೃಷ್ಣ ದೇವರಾಯನಿಗೆ ಅತ್ಯಂತ ಹತ್ತಿರವಾದನು. ರಾಯ ಪ್ರತಿಯೊಂದಕ್ಕು ಅವನ ಸಲಹೆ ಕೇಳುವಷ್ಟು ಅವನ ಸ್ನೇಹ ಪಸರಿಸಿತ್ತು. ರಾಮಕೃಷ್ಣನಿಲ್ಲನಿದ್ದರೆ ರಾಯನ ಮನ ನೀರಿನಿಂದ ಆಚೆ ಬಂದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿತ್ತು. ಆದರೆ ರಾಮಕೃಷ್ಣನಿಗೆ ರಾಯನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಒಂದು ಉಪಾಯವನ್ನು ಹೆಣೆದನು. ಒಂದಿನ ಬೇಕಂತಲೆ ಅರಮನೆಗೆ ತಡವಾಗಿ ಹೋದನು. ರಾಯ ಅವನಿಗಾಗಿ ಕಾಯುತ್ತಾ ಕುಳಿತ್ತಿದ್ದನು. ಅವನು ಹೋಗುತ್ತಿದ್ದಂತೆಯೇ ರಾಯ ಅವನಿಗೆ “ನಾನು ಕಾಯುತ್ತಿರುತ್ತೇನೆ ಎಂಬುದು ಗೊತ್ತಿದ್ದರೂ ಯಾಕೆ ತಡವಾಗಿ ಬಂದೆ?” ಎಂದು ಕೇಳಿದನು. ಅದಕ್ಕೆ ರಾಮಕೃಷ್ಣ “ಹಾಗೇನಿಲ್ಲ ಪ್ರಭು, ನಿಮ್ಮನ್ನು ಕಾಯಿಸಿ ಬೇಸರಿಸುವಂಥ ಉದ್ದೇಶ ಖಂಡಿತವಿಲ್ಲ ಪ್ರಭು” ಎಂದು ಸಮಜಾಯಿಸಿ ನೀಡಿದನು. ಆದರೆ ಅವನ ಸಮಜಾಯಿಸಿಗೆ ಸುಮ್ಮನಾಗದೆ ರಾಯ ಅವನಿಗೆ “ಏಕೆ ತಡವಾಗಿ ಬಂದೆ?” ಎಂದು ಮರುಪ್ರಶ್ನಿಸಿದನು. ಆಗ ರಾಮಕೃಷ್ಣ “ಏನಿಲ್ಲ ಪ್ರಭು, ಯಾವುದೋ ಕಾರಣಕ್ಕೆ ಇವತ್ತು ಮುಂಜಾನೆ ಪಂಚಾಂಗವನ್ನು ನೋಡುತ್ತಿದ್ದೆ. ನನ್ನ ಭವಿಷ್ಯವನ್ನು ನೋಡಬೇಕನಿಸಿತು. ಅದಕ್ಕಾಗಿ ಗ್ರಹಗತಿಗಳನ್ನು ತಾಳೆ ಮಾಡಿ ನೋಡಿದೆ. ನೋಡಿದ ನಂತರ ನನ್ನೆದೆ ಒಡೆದು ಹೋಯಿತು. ಏಕೆಂದರೆ ಎರಡು ವಕ್ರ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿವೆ. ನನ್ನ ಸಾವು ಸಮೀಪಿಸುತ್ತಿದೆ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಎಂದು ಚಿಂತಿಸುತ್ತಿದ್ದೆ. ಸಮಯ ಸರಿದಿದ್ದೆ ಗೊತ್ತಾಗಲಿಲ್ಲ. ಅದಕ್ಕೆ ತಡವಾಗಿ ಬಂದೆ…” ಎಂದೇಳಿ ಕೊಂಚ ದು:ಖದಲ್ಲಿ ಮುಳುಗಿರುವಂತೆ ನಾಟಕವಾಡಿದನು. ಅವನ ನಾಟಕವನ್ನು ನಿಜವೆಂದು ನಂಬಿ ಶ್ರೀಕೃಷ್ಣ ದೇವರಾಯ ಆಘಾತಕ್ಕೊಳಗಾದನು. ಅವನ ಕೋಪ ಕೆಲವೇ ಕ್ಷಣಗಳಲ್ಲಿ ಕರಗಿತು. ಅವನಿಗೆ ರಾಮಕೃಷ್ಣನ ಮೇಲೆ ಕನಿಕರ ಹುಟ್ಟಿತು. ಅದೇ ಭರದಲ್ಲಿ ರಾಯ ರಾಮಕೃಷ್ಣನಿಗೆ “ಸಾವು ಯಾರನ್ನು ಬಿಟ್ಟಿಲ್ಲ. ಒಂದು ವೇಳೆ ನಿನಗೇನಾದರೂ ಆದರೆ ನಿನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮದಾಗುತ್ತದೆ. ನೀನು ಈ ವಿಷಯದ ಬಗ್ಗೆ ಚಿಂತಿಸದಿರು…” ಎಂದೇಳಿ ತನ್ನ ಅಭಯ ಹಸ್ತವನ್ನು ಚಾಚಿದನು. ರಾಮಕೃಷ್ಣ ರಾಯನಿಗೆ ವಂದಿಸಿ, ಎಲ್ಲ ಕಾರ್ಯಕಲಾಪಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ಸಮಾಧಾನದಿಂದ ಮನೆಗೆ ತೆರಳಿದನು.ಮಾರನೇ ದಿನ ಕಾಕತಾಳೀಯವೆಂಬಂತೆ ತೆನಾಲಿ ರಾಮಕೃಷ್ಣನಿಗೆ ಜ್ವರ ಬಂದಿತು. ಅವನ ಹೆಂಡತಿ ಕಷಾಯ ಮಾಡಿಕೊಟ್ಟು, ಅವನ ಆರೈಕೆ ಮಾಡಿದರೂ ಸಹ ಅವನ ಜ್ವರ ಕಡಿಮೆಯಾಗಲಿಲ್ಲ. ಅವನು ಹಾಸಿಗೆಗೆ ಅಂಟಿಕೊಂಡೇ ಇರಬೇಕಾಯಿತು. ಈ ವಿಷಯ ಶ್ರೀಕೃಷ್ಣ ದೇವರಾಯನಿಗೆ ತಲುಪಿತು. ಆತನಿಗೆ ನಿನ್ನೆ ರಾಮಕೃಷ್ಣ ಹೇಳಿದ್ದು ನಿಜವೆನಿಸಿತು. ಕೂಡಲೇ ರಾಯ ತನ್ನ ಆಸ್ಥಾನದ ರಾಜ ವೈದ್ಯರನ್ನು ರಾಮಕೃಷ್ಣನ ಚಿಕಿತ್ಸೆಗೆ ಕಳುಹಿಸಿ ಕೊಟ್ಟನು. ಆದರೆ ಅವರ ಚಿಕಿತ್ಸೆಯಿಂದ ರಾಮಕೃಷ್ಣನಿಗೆ ಸ್ವಲ್ಪವೂ ಗುಣವಾಗಲಿಲ್ಲ. ಸುಳ್ಳೇಳಿದರ ತಪ್ಪಿಗೆ ನಿಜವಾಗಿಯೂ ಜ್ವರ ಬಂದು ಹಾಸಿಗೆ ಹಿಡಿಯುವಂತಾಯಿತು. ಅವನ ಅನಾರೋಗ್ಯ ರಾಯನ ಅಸಮಾಧಾನಕ್ಕೆ ಕಾರಣವಾಯಿತು. ಹೀಗೆ ಎರಡ್ಮೂರು ದಿನ ಗತಿಸುವಷ್ಟರಲ್ಲಿ ತೆನಾಲಿ ರಾಮಕೃಷ್ಣ ಜ್ವರದಿಂದ ಬಳಲಿ ತೀರಿ ಹೋದನು ಎಂಬ ಸುದ್ದಿ ರಾಜಧಾನಿಯ ತುಂಬೆಲ್ಲ ಹರಡಿತು. ರಾಮಕೃಷ್ಣನ ಅಕಾಲ ಮರಣದ ಅಶುಭ ಸುದ್ದಿ ಕೇಳಿ ರಾಯನ ಜಂಘಾಬಲವೇ ಉಡುಗಿ ಹೋಯಿತು. ಅವನ ಅಗಲಿಕೆ ರಾಯನ ಆತ್ಮಸ್ಥೈರ್ಯವನ್ನು ನಲುಗಿಸಿತು.
ತೆನಾಲಿ ರಾಮಕೃಷ್ಣನ ಮರಣ ವಾರ್ತೆಯಿಂದ ರಾಯ ಶೋಕ ಸಾಗರದಲ್ಲಿ ಮುಳುಗಿದನು. ಅದರಿಂದ ಹೊರಬಂದ ನಂತರ ಅವನಿಗೆ ತನ್ನ ಕರ್ತವ್ಯ ಪ್ರಜ್ಞೆ ಅರಿವಾಯಿತು. ಕೂಡಲೇ ಆತ ರಾಜಭಟರನ್ನು ಕರೆಯಿಸಿ ತೆನಾಲಿ ರಾಮಕೃಷ್ಣನ ಮನೆಗೆ ಹೋಗಿ ಅವನ ಸಂಪೂರ್ಣ ಸಂಪತ್ತನ್ನು ಸಂಗ್ರಹಿಸಿಕೊಂಡು ತರಲು ಹೇಳಿ ಕಳುಹಿಸಿದನು. ರಾಜಾಜ್ಞೆಯಂತೆ ರಾಜಭಟರು ರಾಮಕೃಷ್ಣನ ಮನೆಗೆ ಹೋದರು. ಕತ್ತಲಲ್ಲಿ ಕಣ್ಣೀರಾಕುತ್ತಾ ಕುಳಿತ್ತಿದ್ದ ಅವನ ಹೆಂಡತಿಯನ್ನು ಸಂತೈಸಿ ತಾವು ಬಂದ ಕಾರಣವನ್ನು ತಿಳಿಸಿದರು. ಆಗ ಅವನ ಮಡದಿ ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಎರಡು ದೊಡ್ಡ ಪೆಟ್ಟಿಗೆಗಳನ್ನು ತೋರಿಸಿದಳು. ಅವುಗಳ ಮೇಲೆ ದೊಡ್ಡದಾಗಿ ಬಂಗಾರ, ವಜ್ರ ವೈಢೂರ್ಯವೆಂದು ಬರೆದಿತ್ತು. ಕೂಡಲೇ ರಾಜಭಟರು ಅವುಗಳನ್ನು ಹೊತ್ತುಕೊಂಡು ಹೋಗಿ ರಾಯನ ಮುಂದಿಟ್ಟರು. ರಾಯ ಕುತೂಹಲದಿಂದ ಅವುಗಳನ್ನು ತೆರೆಯುವಂತೆ ಹೇಳಿದನು. ರಾಜಭಟರು ಪೆಟ್ಟಿಗೆಯನ್ನು ತೆಗೆದಾಗ ಅದರಿಂದ “ಜೈ ಕಾಳಿ…” ಎನ್ನುತ್ತಾ ತೆನಾಲಿ ರಾಮಕೃಷ್ಣ ಹೊರಬಂದನು. ರಾಮಕೃಷ್ಣನನ್ನು ನೋಡಿ ರಾಯನಿಗೆ ತನ್ನ ಮೇಲೆ ನಾಚಿಕೆಯಾಯಿತು. ಆತ “ರಾಮಕೃಷ್ಣ ನಾನು ಈ ಪೆಟ್ಟಿಗೆಗಳನ್ನು ತರಿಸಿದ ಉದ್ದೇಶವೆಂದರೆ ನಿನ್ನ ಸಂಪತ್ತನ್ನು ರಕ್ಷಿಸಲು ಅಷ್ಟೇ…” ಎಂದನು. ಅದಕ್ಕಾತ ನಗುತ್ತಾ “ಮಹಾಪ್ರಭುಗಳೇ, ನನಗಾಗಲೇ ಗೊತ್ತಿತ್ತು. ನನ್ನ ಮರಣದ ನಂತರ ನನ್ನೆಲ್ಲ ಸಂಪತ್ತು ರಾಜ ಬೊಕ್ಕಸಕ್ಕೆ ಸೇರುವುದೆಂದು. ಅದಕ್ಕೆ ನಾನು ಈ ರೀತಿ ನಿಮ್ಮನ್ನು ಪರೀಕ್ಷಿಸಿದೆ…” ಎಂದನು. ರಾಯನಿಗೆ ರಾಮಕೃಷ್ಣನಿಟ್ಟ ಪರೀಕ್ಷೆಯಲ್ಲಿ ತಾನು ಸೋತೆ ಎಂಬುದು ಗೊತ್ತಾಯಿತು. ಅಲ್ಲದೆ ಕಾಳಿಮಾತೆಯ ಕೃಪೆಯಿಂದ ರಾಮಕೃಷ್ಣನ ಜ್ವರ ಕಡಿಮೆಯಾದದ್ದು ಸಹ ಗೊತ್ತಾಯಿತು. ಅದಕ್ಕಾಗಿ ಸೋತ ತಪ್ಪಿಗೆ ರಾಯ ರಾಮಕೃಷ್ಣನನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ರಾಜ ಮರ್ಯಾದೆಯೊಂದಿಗೆ ಅವನ ಸಂಪತ್ತನ್ನು ಅವನ ಮನೆಗೆ ಹಿಂತಿರುಗಿಸಿದನು… To be Continued…
Explanation:
pls mark me as brainliest answer....and thank it