India Languages, asked by michaelgimmy, 6 months ago

ಅರ್ಥ ವಾರ್ಷಿಕ ಪರೀಕ್ಷೆಗೆ ಮಾಡಿಕೊಂಡಿರುವ ಸಿದ್ಧತೆಯನ್ನು ವಿವರಿಸಿ ನಿಮ್ಮ ಅಣ್ಣನಿಗೆ ಒಂದು ಪತ್ರ ಬರೆಯಿರಿ -

Type : Informal Letter
[Note : Language - Kannada]

❄ NO SPAMMING ❄​

Answers

Answered by dhanalakshmigb2020
6

Answer:

ಜುಲೈ 22, 2019

ಪತ್ರ ಲೇಖನ :

ಆತ್ಮೀಯರು, ಬಂಧುಗಳು, ಸಂಬಂಧಿಕರು, ಗೆಳೆಯರು,ಸಂಘ ಸಂಸ್ಥೆಗಳು ,ಸರ್ಕಾರಿ ಕಛೇರಿಗಳು ಸಂಪರ್ಕವನ್ನು ಇಟ್ಟುಕೊಳ್ಳಲು ಬಳಸುವ ಒಂದು ಮಾದ್ಯಮ ಪತ್ರ ಲೇಖನ. ಮಕ್ಕಳಲ್ಲಿ ಸ್ವಯಂ ಅಭಿವ್ಯಕ್ತಿ ಸಾಧನವೂ ಇದಾಗಿದೆ.

ಮೊಬೈಲ್ ಯುಗದಲ್ಲಿ ಪತ್ರ ವ್ಯವಹಾರವು ಕಡಿಮೆಯಾದರೂ ನಿಂತಿಲ್ಲ .

ಪತ್ರ ಲೇಖನದಲ್ಲಿ ಗಮನಿಸಬೇಕಾದ ಅಂಶಗಳು :

· ಪತ್ರವು ಸುಸ್ಪಷ್ಟ ಹಾಗೂ ಅಚ್ಚುಕಟ್ಟಾಗಿರಬೇಕು .

· ಪತ್ರದ ಬಲಭಾಗದಲ್ಲಿ ಪತ್ರ ಬರೆಯುವವರ ಹೆಸರು, ಸ್ಥಳ, ದಿನಾಂಕ ಇರಬೇಕು.

· ಕಛೇರಿ ಪತ್ರದಲ್ಲಿ ಯಾರಿಗೆ ಪತ್ರ ಬರೆಯಲಾಗಿದೆಯೋ ಅವರ ವಿಳಾಸ ವನ್ನು ಪತ್ರದ ಎಡಭಾಗದಲ್ಲಿ ಬರೆಯಬೇಕು

· ಪತ್ರದಲ್ಲಿ ಸಂಭೋಧನೆಯು ಬಹಳ ಮುಖ್ಯವಾಗಿದ್ದು ಇಡೀ ಪತ್ರದ ಮುಖ್ಯ ಅಂಶವಾಗಿದೆ. ತಂದೆಗೆ ತೀರ್ಥರೂಪರಿಗೆ ಎಂತಲೂ, ತಾಯಿಗೆ ಪತ್ರ ಬರೆಯುವಾಗ ಮಾತೃಶ್ರೀ ಯವರಿಗೆ ಎಂತಲೂ, ಗೆಳೆಯರಿಗೆ ಪತ್ರ ಬರೆಯುವಾಗ ಪ್ರೀತಿಯ ಗೆಳೆಯನಿಗೆ ಎಂತಲೂ , ಕಛೇರಿಗೆ ಬರೆಯುವಾಗ ಮಾನ್ಯರೇ ಎಂತಲೂ ಪ್ರಯೋಗಿಸಬೇಕು.

· ಪತ್ರದಲ್ಲಿ ವಿಷಯವು ಮುಖ್ಯವಾಗಿದ್ದು , ಪತ್ರವು ಏನನ್ನು ಹೇಳಬಯಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಬೇಕು. ಈಗಾಗಲೇ ಪತ್ರ ವ್ಯವಹಾರ ನಡೆದಿದ್ದಲ್ಲಿ ಹಿಂದಿನ ಪತ್ರದ ಉಲ್ಲೇಖವನ್ನು ನಮೂದಿಸಬೇಕು.

· ವಿಷಯ ವಿವರಣೆಯಲ್ಲಿ ವಿಷಯವನ್ನು ಪೂರ್ಣವಾಗಿ ತಿಳಿಸಬೇಕು. ಹೇಳಬೇಕೆಂದಿರುವ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಬೇಕು.

· ತದನಂತರ ಪತ್ರದ ಬಲಭಾಗದಲ್ಲಿ ಪತ್ರವನ್ನು ಯಾರಿಗೆ ಬರೆಯುತ್ತಿದ್ದೇವೋ ಅದರ ಾಧಾರದ ಮೇಲೆ ಇತಿ ತಮ್ಮ ವಿಶ್ವಾಸಿ, ಇತಿ ತಮ್ಮ ನಂಬುಗೆಯ ಎಂದೂ, ಕೌಟುಂಬಿಕ ಪತ್ರಗಳಲ್ಲಿ ಇತಿ ತಮ್ಮ ಪ್ರೀತಿಯ ಮಗ/ಮಗಳು ಎಂತಲೂ ಗೆಳೆಯರಿಗೆ ಬರೆಯುವಾಗ ಇತಿ ನಿನ್ನ ಪ್ರೀತಿಯ ಗೆಳೆಯ ಎಂದು ಬಳಸಬೇಕು.ಮತ್ತು ಸಹಿ ಮಾಡಬೇಕು.

· ಪತ್ರವು ಪೂರ್ಣಗೊಂಡ ಮೇಲೆ ಪತ್ರದ ಹೊರಭಾಗದಲ್ಲಿ ಪತ್ರದ ಹೊರವಿಲಸವನ್ನು ಅಗತ್ಯವಾಗಿ ಬರೆಯಬೇಕು ಪಿನ್ ಕೋಡ್ ಸಮೇತ ವಿಳಾಸ ಬರೆಯುವುದು ಉತ್ತಮ.

ಮಾದರಿ ಪತ್ರಗಳು.

ನಿಮ್ಮನ್ನು ಆತ್ಮರಾಜ, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ ಎಂದು ತಿಳಿದು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ನಿಮ್ಮ ತಂದೆಗೆ ವಿದ್ಯಾಭ್ಯಾಸದ ಕುರಿತು ಒಂದು ಪತ್ರ ಬರೆಯಿರಿ.

ಶ್ರೀ ಆತ್ಮರಾಜ

10ನೇ ತರಗತಿ

ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ

ದಿನಾಂಕ : 07.07.2019

ತೀರ್ಥರೂಪರಿಗೆ ನಿಮ್ಮ ಮಗನಾದ ಆತ್ಮರಾಜನು ಮಾಡುವ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ.

ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಈಗ ರೂಪಣಾತ್ಮಕ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ಬಾರಿ ನಾನು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯಬೇಕೆಂದುಕೊಂಡಿರುವುದರಿಂದ ಉತ್ತಮವಾಗಿ ಅಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ನೇಹಿತರು ಸಹ ನನಗೆ ಸಹಕಾರ ನೀಡುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಗೊತ್ತಾಗದ ವಿಷಯಗಳನ್ನು ಕೇಳಿ ತಿಳಿಯುತ್ತಿದ್ದೇನೆ. ನನಗೆ ನಿಮ್ಮ ಆಶೀರ್ವಾದವು ಇರಲಿ.

ಇನ್ನೇನು ವಿಷಯವಿಲ್ಲ. ನನ್ನ ತಾಯಿಗೆ ಹಾಗೂ ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಮ್ಮ ಪತ್ರಕ್ಕಾಗಿ ಕಾದಿರುವೆ.

ಇತಿ ತಮ್ಮ ಪ್ರೀತಿಯ ಮಗ,

ಆತ್ಮರಾಜ

ಹೊರ ವಿಳಾಸ

ಗೆ,

ಶಿವಪ್ಪ,

ಮನೆ ನಂ. 12/21, 4ನೇ ಅಡ್ಡರಸ್ತೆ,

ಕುವೆಂಪು ನಗರ, ಮೈಸೂರು

2) ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ವರದಿಯನ್ನು ಪ್ರಕಟಿಸುವಂತೆ ಕೋರಿ ಹಾಸನದ ಪ್ರಜಾವಾಣಿ ದಿನಪತ್ರಿಕೆಯ ಸಂಪಾಧಕರಿಗೆ ಒಂದು ಮನವಿ ಪತ್ರವನ್ನು ಬರೆಯಿರಿ.

ಮನವಿ ಪತ್ರ

ಇವರಿಂದ,

ರಾಕೇಶ,

10ನೇ ತರಗತಿ,

ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ.

ಇವರಿಗೆ,

ಸಂಪಾದಕರು,

ಪ್ರಜಾವಾಣಿ ದಿನಪತ್ರಿಕೆ,

ಹಾಸನ ವಿಭಾಗ, ಹಾಸನ.

ಮಾನ್ಯರೇ,

ವಿಷಯ:- ಶಾಲಾ ವಾರ್ಷಿಕೋತ್ಸವದ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವಂತೆ

ಕೋರಿ.

* * *

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2019-20ನೇ ಸಾಲಿನ ಶಾಲಾ ವಾರ್ಷಿಕೋತ್ಸವವು ದಿನಾಂಕ 10.07.2019 ರಂದು ಜರುಗಿತು. ಈ ಸಮಾರಂಭಕ್ಕೆ ನಮ್ಮ ತಾಲ್ಲೂಕಿನ ಶಾಸಕರು ಆಗಮಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಮತ್ತು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕರು ಮಾತನಾಡಿ, ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಈ ಸಮಾರಂಭದ ಕುರಿತು ವಿವರವಾದ ವರದಿಯನ್ನು ಫೋಟೋ ಸಮೇತ ಈಪತ್ರದ ಜೊತೆಗೆ ಲಗತ್ತಿಸಿದ್ದೇನೆ. ದಯವಿಟ್ಟು ಪ್ರಕಟಿಸಬೇಕೆಂದು ಕೋರುತ್ತೇನೆ.

ವಂದನೆಗಳೊಂದಿಗೆ,

ಇತಿ ತಮ್ಮ ವಿಶ್ವಾಸಿ,

ರಾಕೇಶ್

ಸ್ಥಳ : ಹಂಡ್ರಂಗಿ

ದಿನಾಂಕ : 12.07.2019

ಹೊರ ವಿಳಾಸ,

ಗೆ,

ಸಂಪಾದಕರು,

ಪ್ರಜಾವಾಣಿ ದಿನಪತ್ರಿಕೆ,

ಹಾಸನ ವಿಭಾಗ, ಹಾಸನ.

ಪ್ರಬಂಧ ಲೇಖನ :

ಒಂದು ನಿರ್ಧಿಷ್ಟ ವಿಚಾರದ ಕುರಿತಾಗಿ ವಿಷಯವನ್ನು ಸಂಗ್ರಹಿಸಿ ತನ್ನ ಅನುಭವದಿಂದಲೋ, ಕಲ್ಪನೆಯಿಂದಲೋ, ವಿಷಯವನ್ನು ವಿಷಯವನ್ನು ರೂಪಿಸಿ ಸುಸಂಬದ್ಧವಾಗಿ ಶುದ್ಧವಾದ ಭಾಷೆಯೊಂದಿಗೆ ಬರೆಯುವುದೇ ಪ್ರಬಂಧ .

ಭಾಷಾ ಅಭ್ಯಾಸದ ಬಹುಮುಖ ಸಾಧನ ಪ್ರಬಂಧ . ಜನ ಸಾಮಾನ್ಯರಿಂದ ದಾರ್ಶನಿಕರವರೆಗೆ ಪ್ರಬಂಧಗಳು ರಚನೆಯಾಗಿವೆ. ಪ್ರಬಧದ ವ್ಯಾಪ್ತಿ ಒಂದು ಪುಟದಿಂದ ನೂರಾರು ಪುಟಗಳ ವರೆಗೆ ವಿಸ್ತರಿಸಬಹುದಾಗಿದೆ.

ಪ್ರಬಂಧವು ಸ್ವಯಂ ಅಭಿವ್ಯಕ್ತಿ ಸಾಮರ್ಥ ಬೆಳೆಸುತ್ತದೆ. ವಾಕ್ಯ ರಚನಾ ಕೌಶಲ ಹೆಚ್ಟುತ್ತದೆ. ಭಾಷಾ ಪ್ರಯೋಗ ಉತ್ತಮ ಗೊಳ್ಳುತ್ತದೆ. ಶಬ್ಧ ಭಂಡಾರ ಹೆಚ್ಚಿ ಜ್ಞಾನಾರ್ಜನೆಗೆ ದಾರಿಯಾಗಯತ್ತದೆ. ಒಂದು ಚೌಕಟ್ಟಿನ ಒಳಗೆ ವಿಷಯವನ್ನು ಪ್ರತಿಪಾದಿಸುವ ಕಲೆ ಬೆಳೆಯುತ್ತದೆ. ಬರವಣಿಗೆ ಹಾಗೂ ಮಾತುಗಾರಿಕೆಯ ಸಾಮರ್ಥ್ಯಹೆಚ್ಚುತ್ತದೆ.

ಪ್ರಬಂಧ ರಚನೆಯ ಹಂತಗಳು :

1) ವಿಷಯದ ಆಯ್ಕೆ ಮಾಡಿಕೊಳ್ಳುವುದು

2) ಸಮರ್ಪಕವಾದ ಮಾಹಿತಿ ಸಂಗ್ರಹಿಸುವುದು .

3) ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸುವುದು.

4) ವ್ಯವಸ್ಥೆಗೊಳಿಸಿದ ಮಾಹಿತಿಯನ್ನು ಸುಸಂಬದ್ಧವಾಗಿ ಬರೆಯುವುದು.

ಪ್ರಬಂಧ ರಚನಾ ಕೌಶಲವನ್ನು ಉತ್ತಮ ಗೊಳಿಸುವ ಮಾರ್ಗಗಳು :

· ಉತ್ತಮ ಸಿದ್ಧತೆ ನಡೆಸಬೇಕು. ವಿಷಯದ ಆಯ್ಕೆ , ಮಾಹಿತಿ ಸಂಗ್ರಹಣೆ, ಏನನ್ನು ಎಷ್ಟು ಬರೆಯಬೇಕು ಎನ್ನುವ ರೂಪುರೇಷೆ ತಯಾರಿಸಿ ಕೊಂಡು ಸೂಕ್ತ ಶಿರೋನಾಮೆ ರೂಪಿಸಿಕೊಳ್ಳಬೇಕು .

· ಉದ್ದೇಶಪೂರ್ವಕವಾಗಿ ಪ್ರಬಂಧ ಬರೆಯಬೇಕು.

· ಲಭ್ಯವಿರುವ ಮಾಹಿತಿಗೆ ಅನುಗುಣವಾಗಿ ಪ್ರಬಂಧದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು.

· ಪ್ರಬಂಧವು ಪೀಠಿಕೆ, ವಿಷಯ ವಿವರಣೆ, ಮುಕ್ತಾಯ ಎಂಬ ಮೂರು ಹಂತಗಳಲ್ಲಿ ಇರಬೇಕು.

· ಶುದ್ಧ ಭಾಷೆಯ ಪ್ರಯೋಗ, ಅರ್ಥಪೂರ್ಣ, ಸರಳ ವಾಕ್ಯಗಳಲ್ಲಿ ಪ್ರಬಂಧ ರಚನೆಯಾಗಬೇಕು

· ಪ್ರಬಂಧದ ವಿಷಯಕ್ಕೆ ಕೊಡುವ ಪ್ರಮುಖ್ಯತೆ ಭಾಷೆಗೂ ಕೊಡಬೇಕು.

· ಮುಖ್ಯ ವಿಷಯದಿಂದ ಎಲ್ಲಿಯೂ ವಿಷಯಾಂತರವಾಗಬಾರದು. ನೇರವೂ, ನಿಖರವು, ಸುಸಂಭದ್ದವು ಆಗಿ ಪ್ರಬಂಧವು ಮೂಡಿ ಬರಬೇಕು.

· ಪ್ರಬಂಧದಲ್ಲಿ ನುಡಿಗಟ್ಟುಗಳನ್ನು, ಗಾದೆಮಾತು, ಪ್ರಸಿದ್ದರ ಹೇಳಿಕೆಗಳನ್ನು ಬಳಸಿಕೊಳ್ಳಬೇಕು.

· ದೈನಂದಿನ ವಿಚಾರಗಳಿಗೆ ಸರಿಯಾದ ಪ್ರಬಂಧವನ್ನು ಆಯ್ಕೆಮಾಡಿಕೊಳ್ಳಬೇಕು.

· ಪ್ರಬಂಧವನ್ನು ಮೊದಲು ಅಭ್ಯಸ ಮಾಡಿ ನಂತರ ಬರೆಯಲು ಹೇಳಬೇಕು.

· ಪ್ರಬಂಧದಲ್ಲಿ ವಿಷಯದ ಭಂದವು ಕಂಡುಬರಬೇಕು. ಮಧ್ಯದಲ್ಲಿ ತೇಪೆಹಾಕಿದಂತೆ ಇರಬಾರದು. ಸತ್ಯಕ್ಕೆ ದೂರವಾದ ವಿಷಯವಾಗಲಿ ಅಥವಾ ಇನ್ನೊo

Answered by Anonymous
6

Herewith Attaching the Letter/Answer...

Plz Mark it as Brainliest Answer!

Attachments:
Similar questions