usea of computer in kannada essay
Answers
Answer:
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. ಕಖ
ಕಂಪ್ಯೂಟರ್ ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಉಪಯೋಗಿಸಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ.
ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ. ಇಂದು ಬಹುತೇಕ ಕ್ಷೇತ್ರಗಳಲ್ಲಿ ಕಂಪ್ಯೂಟರ್‌ನ್ನು ಬಳಸುತ್ತಾರೆ.
ಕಂಪ್ಯೂಟರಿಗೆ ಉಳಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ. ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್‌ವೇರ್) ಕೆಲಸ. ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು.
ದತ್ತಾಂಶ ಸಂಸ್ಕರಣೆಯಲ್ಲಿ ತಂತ್ರಾಂಶ ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ ಯಂತ್ರಾಂಶದ (ಹಾರ್ಡ್‌ವೇರ್) ಜವಾಬ್ದಾರಿ. ಕಂಪ್ಯೂಟರ್‌ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.
ದೂರಸಂಪರ್ಕ, ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಜೀವವಿಮೆ, ಕೋರ್ಟು-ಕಚೇರಿ, ವ್ಯಾಪಾರ, ಕಾರ್ಖಾನೆ, ಚಲನಚಿತ್ರ, ಮುದ್ರಣ - ಹೀಗೆ ಕಂಪ್ಯೂಟರ್ ಎಲ್ಲ ಕ್ಷೇತ್ರಗಳಲ್ಲೂ ಉಪಯುಕ್ತ. ವ್ಯವಹಾರ, ಶಿಕ್ಷಣ, ಪದಸಂಸ್ಕರಣೆ, ಮನರಂಜನೆ, ಸಂಶೋಧನೆ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಭಾರೀ ಪ್ರಮಾಣದ ಮಾಹಿತಿ ಸಂಗ್ರಹಣೆ ಇವುಗಳ ಇನ್ನೊಂದು ಪ್ರಮುಖ ಉಪಯೋಗ.