vaayu malinya in kannada
Answers
ಪರಿಸರ ಮಾಲಿನ್ಯ ಮತ್ತು ನಿಯಂತ್ರಕ ಅಂಶಗಳು
ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ ಸರಿಪಡಿಸಲಾಗದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸರಮಾಲಿನ್ಯದಲ್ಲಿ ಮುಖ್ಯವಾಗಿ ಐದು ವಿಧಗಳು, ಅವೆಂದರೆ-
ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ವಿಕಿರಣ ಸಂಬಂಧಿತ ಮಾಲಿನ್ಯ. ಪ್ರತೀ ವರ್ಷವೂ ಜಗತ್ತಿನಲ್ಲಿ ಸುಮಾರು 2.4 ಮಿಲಿಯನ್ ಜನರು, ಕೇವಲ ವಾಯುಮಾಲಿನ್ಯದ ನೇರ ಪರಿಣಾಮಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜು ಮಾಡಿದೆ.
ಒಂದು ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ ವಿವಿಧ ಹಾನಿಕಾರಕ ಅಂಶಗಳನ್ನು ಅಥವಾ ಅನಾರೋಗ್ಯಕರ ಅಂಶಗಳನ್ನು ಆ ಪರಿಸರದ ಒಳಕ್ಕೆ ಸೇರಿಸುವುದು- ಇದು ಪರಿಸರಮಾಲಿನ್ಯಕ್ಕೆ ನಾವು ಕೊಡಬಹುದಾದ ಅತ್ಯಂತ ಸೂಕ್ತ ವಿವರಣೆ. ಬಹಳ ಸಾಮಾನ್ಯ ರೀತಿಯ ಮಾಲಿನ್ಯ ಕಾರಕಗಳು ಅಂದರೆ, ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಕಲುಷಿತ ನೀರು. ರಾಜಧಾನಿ ಬೀಜಿಂಗ್ ಸೇರಿದಂತೆ ಚೀನಾದ ನಗರಗಳು ವಾಯುಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆ. ಅತ್ಯಧಿಕ ಮಟ್ಟದಲ್ಲಿ ಕಲುಷಿತವಾಗಿರುವ ಭಾರತದ ಗಂಗಾನದಿ ಜಲಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆಗಳಲ್ಲಿ ಒಂದು.
ನೈರ್ಮಲ್ಯವು ಸ್ವಾತಂತ್ರÂಕ್ಕಿಂತಲೂ ಹೆಚ್ಚಿನದು ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ. ಆದರೆ ದುರದೃಷ್ಟದ ವಿಚಾರ ಅಂದರೆ, ನಾವು ಸ್ವಾತಂತ್ರÂವನ್ನು ಗಳಿಸಿ 67 ವರ್ಷಗಳನ್ನು ಕ್ರಮಿಸಿದ್ದರೂ ಸಹ, ಇಲ್ಲಿ ಶೌಚಾಲಯದ ಸೌಕರ್ಯ ದೊರೆತಿರುವುದು ಗ್ರಾಮೀಣ ನಾಗರಿಕರಲ್ಲಿ ಸುಮಾರು 30% ರಷ್ಟು ಜನರಿಗೆ ಮಾತ್ರ.
ಮನುಷ್ಯ ತನ್ನ ಜೀವನ ಸೌಕರ್ಯದ ಅತಿಲಾಲಸೆಗಾಗಿ ಪರಿಸರವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಧಾವಂತದಲ್ಲಿ, ಸ್ವಾರ್ಥಪರನಾಗಿ ಮಾಲಿನ್ಯದ ಪರಿಣಾಮಗಳನ್ನೇ ಮರೆತುಬಿಟ್ಟಿದಾನೆ. ಕೈಗಾರಿಕಾ ಅಭಿವೃದ್ಧಿಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಇಡೀ ಜೀವಜಗತ್ತಿನ ಜೀವನಾಧಾರ ವ್ಯವಸ್ಥೆಯನ್ನು ಮನುಷ್ಯ ತನ್ನದೇ ಸ್ವಂತ ಸ್ವತ್ತು ಎಂಬಂತೆ ಬದಲಾಯಿಸಿ ಬಿಟ್ಟಿದ್ದಾನೆ. ಇದರಿಂದಾಗಿ ಪರಿಸರದ ನೈಸರ್ಗಿಕ ಸಮತೋಲನವೇ ಅಸ್ತವ್ಯಸ್ತವಾಗಿದೆ. ಅತಿಬಳಕೆ, ದುರ್ಬಳಕೆ ಮತ್ತು ಸಂಪನ್ಮೂಲಗಳನ್ನು ಸ್ವಾರ್ಥ ಸಾಧನೆಗಾಗಿ ಬಳಸುತ್ತಿರುವ ಕಾರಣದಿಂದಾಗಿ ಭೂಸವಕಳಿ ಮತ್ತು ಬರಗಾಲದಂತಹ ಗಂಭೀರ ಸಮಸ್ಯೆಗಳು ತಲೆ ಎತ್ತಿವೆ.
ಇಷ್ಟು ಮಾತ್ರ ಅಲ್ಲ, ಈಗ ಹವಾಮಾನ ಬದಲಾವಣೆ ಎನ್ನುವ ಇನ್ನೊಂಂದು ಅಪಾಯ ಎದ್ದು ನಿಂತಿದೆ. ಮಾಲಿನ್ಯವು ಜಾಗತಿಕ ತಾಪಮಾನದ ರೂಪದಲ್ಲಿ ಎದುರಾಗಿದ್ದು, ಇದು ಜಾಗತಿಕ ಹವಾಮಾನದ ಕಾರ್ಯ ವಿಧಾನಕ್ಕೆ ಅಡಚಣೆ ಉಂಟುಮಾಡುವ ಮೂಲಕ ಅಡ್ಡಿಪಡಿಸುತ್ತದೆ. ಚಳಿಗಾಲದಲ್ಲಿ ಬಿಸಿಯೇರುತ್ತಿದೆ, ಬರಗಾಲ ಮತ್ತು ಆಹಾರದ ಹಾಹಾಕಾರವು ಹೆಚ್ಚುತ್ತಿದೆ, ಮಳೆಯು ಮಳೆಗಾಲದಲ್ಲಿ ಮಾತ್ರ ಬೀಳುತ್ತದೆ ಎಂದು ಹೇಳುವುದು ಅಸಾಧ್ಯ.
ಆದರೆ ಕಾಲ ಇನ್ನೂ ಮಿಂಚಿಲ್ಲ, ನಾವು ಇನ್ನೂ ಕಾರ್ಯೋನ್ಮುಖರಾಗಬಹುದು ಎನ್ನುವುದು ಜಾnನಿಗಳ ಅಭಿಪ್ರಾಯ, ಕಾರ್ಬನ್ ಡೈ ಆಕ್ಸೆ„ಡ್ ಅನ್ನು ತಡೆಯುವ ಮೂಲಕ, ಶುದ್ಧ ಇಂಧನಗಳನ್ನು ಉಪಯೊಗಿಸುವ ಮೂಲಕ, ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ವ್ಯಾಪಕ ರೀತಿಯಲ್ಲಿ ಮರಗಿಡಗಳನ್ನು ನೆಡುವ ಮೂಲಕ, ಆಗಿರುವ ಮಾಲಿನ್ಯವನ್ನು ಇನ್ನೂ ಸರಿಪಡಿಸಬಹುದು ಎನ್ನುವುದು ವಿಜಾnನಿಗಳ ಅನಿಸಿಕೆ.