viswa parisara dinada bagge letter writing
Answers
ವಿಶ್ವ ಪರಿಸರ ದಿನಾಚರಣೆ :
ಪರಿಸರ ರಕ್ಷಣೆ-ನಮ್ಮೆಲ್ಲರ ಹೊಣೆ, ಗಿಡ ಮರ-ಬೆಳಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ .
ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಬದಲು ಪರಿಸರವನ್ನು ನಾವು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ ಎಂದು ಯೋಚಿಸುವಂತಾದರೆ ಬಹುಶಃ ಪರಿಸರ ದಿನಕ್ಕೆ ಹೊಸ ಅರ್ಥ ಬರಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೇ ಹಾನಿಯಾದಂತೆ.
ಜೂನ್ 5:
ಜೂನ್ 5ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972-73 ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.
1974 ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ 05 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.
ವಿದ್ಯಾವಂತರೇ ಹೆಚ್ಚು ಪರಿಸರವನ್ನು ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ವಿಶೇಷ ಒಲವು ಮೂಡುವಂತೆ ಮಾಡಬೇಕಿದೆ. ಶಾಲಾ ಕಾಲೇಜುಗಳಿಂದಲೇ ಪರಿಸರದ ಬಗ್ಗೆ ಅರಿವು ನೀಡಬೇಕಾಗಿದೆ. ಪ್ರಕೃತಿಯ ಜೊತೆ ಮಕ್ಕಳ ಬೆರೆಯುವಂತಾದರೆ ಪರಿಸರವು ತಾನಾಗಿಯೇ ಉಳಿಯುತ್ತದೆ.
ನಮ್ಮ ಪೂರ್ವಜರು ಪ್ರಕೃತಿ ಜೊತೆಗೆ ಬದುಕಿದವರು, ವಿದ್ಯೆಯಲ್ಲಿ ಹಿಂದಿದ್ದರೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಆದರೆ ನಾಗರೀಕತೆ ಬೆಳದಂತೆ ಪ್ರಕೃತಿಯ ಮಾರಣ ಹೋಮವೇ ನಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲದಂತಾಗುತ್ತಿದೆ. ಪ್ರತಿ ವರ್ಷ ಜೂನ್ 5 ರಂದು ನಾವೆಷ್ಟು ಪರಿಸರವನ್ನು ಹಾನಿ ಮಾಡಿದ್ದೇವೆ ಎಂದು ಲೆಕ್ಕಾಚಾರ ಮಾಡುವಂತಾಗಿದೆ.
ನಿಯಂತ್ರಣ:
ಪರಿಸರದ ಉಳಿವಿಗಾಗಿ ನಾವು ಸಾಕಷ್ಟು ಶ್ರಮ ವಹಿಸಬೇಕಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾದ್ಯವಾದಷ್ಟು ಕೆಲವು ಸಂಗತಿಗಳನ್ನು ನಿಯಂತ್ರಣ ಮಾಡಬೇಕಿದೆ. ವಾಯು ಮಾಲಿನ್ಯ, ಜಲಮಾಲಿನ್ಯ, ಭೂಮಿ ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ವಿದ್ಯುತ್ ಬಳಕೆ ಕಡಿಮೆ ಮಾಡುವುದು. ನೀರು ಪೋಲಾಗದಂತೆ ಮಿತವಾಗಿ ಬಳಸುವುದು, ಪೆಟ್ರೊಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ. ಸೌರಶಕ್ತಿಯನ್ನು ಉಪಯೋಗಿಸಬೇಕು. ಅರಣ್ಯನಾಶ ಮಾಡಬಾರದು. ಹಸಿರು ಸಸ್ಯ ಬೆಳೆಸುವುದು. ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ ಬಳಕೆ ಕಡಿಮೆ ಮಾಡಬೇಕು.
ವನಮಹೋತ್ಸವ ಆಚರಣೆ:
ಭಾರತದಲ್ಲಿ ವನಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ. ವನಮಹೋತ್ಸವವು ವಿಶ್ವ ಪರಿಸರ ದಿನದಂತೆ ಒಂದು ದಿನದ ಆಚರಣೆಯಲ್ಲ. ಬದಲಾಗಿ ಜುಲೈ ಒಂದು ತಿಂಗಳು ಪೂರ್ತಿ ಈ ದಿನವನ್ನು ಆಚರಿಸುತ್ತಾರೆ. ಪ್ರತಿಯೊಂದು ಶಾಲೆ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸುತ್ತಾರೆ.
ಪ್ರತಿಯೊಬ್ಬರಿಗೂ ಪರಿಸರದ ಮಹತ್ವ ಮತ್ತು ಹಾನಿಯ ನಷ್ಟವನ್ನು ಮನದಟ್ಟು ಮಾಡಿ ಮುಂದಿನ ದಿನಗಳಲ್ಲಿ ಪರಿಸರದ ಅಭಿವೃದ್ಧಿಯ ಲೆಕ್ಕಾಚಾರ ಮಾಡುವಂತಾದರೆ ಪರಿಸರ ದಿನಕ್ಕೆ ಮಹತ್ವ ಬಂದಂತಾಗುತ್ತದೆ.