English, asked by durugappakm997264, 6 months ago

Vrudara andhara essay in Kannada

Answers

Answered by Anonymous
3

ನಿಮ್ಮನ್ನು ಎತ್ತಿ ಆಡಿಸಿದ ಅಪ್ಪಅಮ್ಮ ಒಂದು ಸಮಯದಲ್ಲಿ ಸುದೃಢರಾಗಿದ್ದು ಎಲ್ಲ ಕೆಲಸಗಳನ್ನು ಸಮರ್ಥವಾಗಿ ಮಾಡುತ್ತಿದ್ದರು. ಆದರೆ ಈಗ ಅವರಿಗೆ ವಯಸ್ಸಾಗಿ ನಿಮ್ಮ ಮುಂದೆಯೇ ಬಲಹೀನರಾಗಿ ತಮ್ಮ ಕೆಲಸಗಳನ್ನೇ ಮಾಡಿಕೊಳ್ಳಲಾಗದ ಸ್ಥಿತಿಗೆ ಬರುವುದನ್ನು ನೋಡುವಾಗ ನಿಮ್ಮ ಹೃದಯ ಹಿಂಡಿದಂತಾಗುತ್ತದೆ ಅಲ್ಲವೇ? ಅಪ್ಪಅಮ್ಮ ಬಿದ್ದು ಸೊಂಟ ಮುರಿದುಕೊಂಡಿರಬಹುದು, ಮರೆವು, ಚಂಚಲ ಮನೋಭಾವ ಅವರನ್ನು ಕಾಡುತ್ತಿರಬಹುದು ಅಥವಾ ಯಾವುದೋ ಗಂಭೀರ ಕಾಯಿಲೆಗೆ ತುತ್ತಾಗಿರಬಹುದು. ಆಗ ನಿಮಗೆ ತುಂಬ ನೋವಾಗುತ್ತದೆ. ಅದೇ ಸಮಯದಲ್ಲಿ ಹೆತ್ತವರಿಗೆ ಇನ್ನೊಂದು ರೀತಿಯ ನೋವಿರುತ್ತದೆ. ತಮಗೆ ವಯಸ್ಸಾಗಿದೆ, ಮೊದಲಿದ್ದಷ್ಟು ಬಲ ಈಗ ಇಲ್ಲ, ಬೇರೆಯವರ ನೆರವು ಬೇಕು ಎಂಬುದನ್ನು ಒಪ್ಪಿಕೊಳ್ಳಲು ಅವರಿಗೆ ತುಂಬ ಕಷ್ಟವಾಗಬಹುದು. (ಯೋಬ 14:1) ಈ ಸನ್ನಿವೇಶಗಳಲ್ಲಿರುವ ಹೆತ್ತವರಿಗೆ ನೆರವು ನೀಡುವುದು ಹೇಗೆ? ಕಾಳಜಿ ವಹಿಸುವುದು ಹೇಗೆ?

2 ವೃದ್ಧರ ಕಾಳಜಿ ವಹಿಸುವ ಸಂಬಂಧದಲ್ಲಿ ಒಂದು ಲೇಖನ ಹೀಗೆ ಹೇಳುತ್ತದೆ: “ವೃದ್ಧಾಪ್ಯದ ತೊಂದರೆಗಳ ಬಗ್ಗೆ ಮಾತಾಡುವುದು ಅಷ್ಟೇನು ಸುಲಭವಲ್ಲ. ಆದರೆ ಯಾರು ಇದರ ಬಗ್ಗೆ ಮುಕ್ತವಾಗಿ ಮಾತಾಡಿ ಯಾವ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿರುತ್ತಾರೋ ಅವರು ಮುಂದೆ ಎಂಥದ್ದೇ ಸನ್ನಿವೇಶಗಳು ಬಂದರೂ ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ.” ಈ ರೀತಿಯ ಮಾತುಕತೆ ಸುಲಭವಾಗಬೇಕಾದರೆ ಎಲ್ಲರು ಒಂದು ವಿಷಯವನ್ನು ಮನಸ್ಸಿನಲ್ಲಿಡಬೇಕು ಏನೆಂದರೆ ಮುಪ್ಪಿನಲ್ಲಿ ತೊಂದರೆ-ತೊಡುಕುಗಳು ಬಂದೇ ಬರುತ್ತವೆ. ಅವುಗಳನ್ನು ತಡೆಯಲು ಆಗುವುದಿಲ್ಲ. ಆದರೂ ಅದಕ್ಕಾಗಿ ಮುಂಚೆಯೇ ತಯಾರಿ ಹಾಗೂ ನಿರ್ಣಯಗಳನ್ನು ಮಾಡಿಡಲು ಸಾಧ್ಯ. ನಾವೀಗ ಅದನ್ನೇ ಕಲಿಯಲಿದ್ದೇವೆ. ಕುಟುಂಬ ಸದಸ್ಯರೆಲ್ಲರೂ ಕೈಜೋಡಿಸಿ ಇಂಥ ಕೆಲವು ಸವಾಲುಗಳನ್ನು ಜಯಿಸಲು ಹೇಗೆ ಪ್ರೀತಿಯಿಂದ ಸಹಕರಿಸಬಹುದೆಂದು ನೋಡೋಣ.

‘ಕಷ್ಟದ ದಿನಗಳು’ ಬರುವ ಮುಂಚೆ ತಯಾರಿ

3. ವಯಸ್ಸಾದ ಹೆತ್ತವರಿಗೆ ಹೆಚ್ಚು ನೆರವು ಬೇಕಾಗಿರುವಾಗ ಕುಟುಂಬ ಸದಸ್ಯರು ಏನು ಮಾಡಬೇಕಾಗಬಹುದು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

3 ‘ಕಷ್ಟದ ದಿನಗಳು’ ಯಾವಾಗ ಬರುತ್ತವೆ? ಹೆತ್ತವರಿಗೆ ತಮ್ಮ ಕೆಲಸಗಳನ್ನು ತಾವು ಮಾಡಲು ಆಗದೆ ಬೇರೆಯವರ ಮೇಲೆ ಹೊಂದಿಕೊಳ್ಳಬೇಕಾಗುವಾಗ. (ಪ್ರಸಂಗಿ 12:1-7 ಓದಿ.) ಇಂಥ ಸಮಯದಲ್ಲಿ ಏನು ಮಾಡಿದರೆ ಅತ್ಯುತ್ತಮ, ತಮ್ಮ ಸಾಮರ್ಥ್ಯಕ್ಕನುಸಾರ ಏನನ್ನು ಮಾಡಲು ಆಗುತ್ತದೆ ಎಂದು ವೃದ್ಧ ಹೆತ್ತವರು ಮತ್ತು ವಯಸ್ಕ ಮಕ್ಕಳು ನಿರ್ಧರಿಸಬೇಕು. ಇದಕ್ಕಾಗಿ ಇಡೀ ಕುಟುಂಬವು ಕೂತು ಮಾತಾಡಿದರೆ ಒಳ್ಳೇದು. ಹೇಗೆ ಎಲ್ಲರು ಒಬ್ಬರಿಗೊಬ್ಬರು ಸಹಕರಿಸಬಹುದು, ಹೆತ್ತವರ ಅಗತ್ಯಗಳೇನು, ಹೇಗೆ ನೆರವು ನೀಡಬಹುದೆಂದು ಚರ್ಚಿಸುವುದು ವಿವೇಕಯುತ. ಎಲ್ಲರೂ ಮುಕ್ತವಾಗಿ ಮಾತಾಡಬೇಕು. ವಿಶೇಷವಾಗಿ ಹೆತ್ತವರು ತಮ್ಮ ಬಯಕೆಗಳನ್ನು, ಭಾವನೆಗಳನ್ನು ಹಾಗೂ ಸತ್ಯಾಂಶಗಳನ್ನು ಮನಸ್ಸುಬಿಚ್ಚಿ ತಿಳಿಸಬೇಕು. ಒಂದುವೇಳೆ ಹೆತ್ತವರು ತಮ್ಮ ಮನೆಯಲ್ಲೇ ಇರಲು ಬಯಸುವಲ್ಲಿ ಅವರು ಸುರಕ್ಷಿತರಾಗಿರುವಂತೆ ಯಾವ ಹೆಚ್ಚಿನ ಸಹಾಯವನ್ನು ಕೊಡಬಹುದೆಂದು ಚರ್ಚಿಸಬಹುದು. * ಪ್ರತಿಯೊಬ್ಬ ಕುಟುಂಬ ಸದಸ್ಯನಿಗೆ ಎಷ್ಟು ಸಹಾಯಮಾಡಲು ಸಾಧ್ಯ ಎನ್ನುವುದನ್ನೂ ಪರಿಗಣಿಸಬಹುದು. (ಜ್ಞಾನೋ. 24:6) ಉದಾಹರಣೆಗೆ, ಕೆಲವರಿಗೆ ದಿನನಿತ್ಯದ ಕೆಲಸಗಳಲ್ಲಿ ನೆರವು ನೀಡಲು ಆಗಬಹುದು, ಇನ್ನು ಕೆಲವರಿಗೆ ದುಡ್ಡಿನ ವಿಷಯದಲ್ಲಿ ನೆರವು ನೀಡಲು ಸಾಧ್ಯವಿರಬಹುದು. ಹೀಗೆ ಎಲ್ಲರಿಗೂ ಹೆತ್ತವರ ಕಾಳಜಿ ವಹಿಸುವುದರಲ್ಲಿ ಪಾಲಿದೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಲ್ಲಿಡಬೇಕು. ಸಮಯ ಸಂದಂತೆ ಅವರು ಬೇರೆ ರೀತಿಯ ಸಹಾಯ ಕೂಡ ನೀಡಬೇಕಾಗಬಹುದು. ಸರದಿ ಪ್ರಕಾರ ಒಂದೊಂದು ಸಾರಿ ಒಬ್ಬೊಬ್ಬರು ಒಂದೊಂದು ರೀತಿಯ ನೆರವು ನೀಡಬೇಕಾಗಬಹುದು.

4. ವೃದ್ಧರ ಆರೈಕೆ ಮಾಡುವಾಗ ಕುಟುಂಬ ಸದಸ್ಯರು ಯಾವೆಲ್ಲ ಸಹಾಯವನ್ನು ಪಡೆದುಕೊಳ್ಳಬಹುದು?

4 ನೀವು ಹೆತ್ತವರಿಗೆ ಸಹಾಯ ಮಾಡಲು ಆರಂಭಿಸಿದಂದಿನಿಂದ ಅವರ ಕಾಯಿಲೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಒಂದುವೇಳೆ ಅಪ್ಪ ಅಥವಾ ಅಮ್ಮನಿಗೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುವ ಯಾವುದಾದರೂ ಆರೋಗ್ಯ ಸಮಸ್ಯೆಯಿರುವಲ್ಲಿ ಅದರಿಂದಾಗಿ ಮುಂದೆ ಏನೆಲ್ಲ ಆಗಬಹುದು ಎಂದು ತಿಳಿದುಕೊಳ್ಳಿ. (ಜ್ಞಾನೋ. 1:5) ವಯಸ್ಸಾದವರಿಗೆ ಸೌಲಭ್ಯಗಳನ್ನು ಒದಗಿಸುವ ಸರ್ಕಾರಿ ಸೇವಾ ಸಂಸ್ಥೆಗಳಿರುವಲ್ಲಿ ಅವುಗಳನ್ನು ಸಂಪರ್ಕಿಸಿ. ವೃದ್ಧರನ್ನು ಉತ್ತಮವಾಗಿ ಕಾಳಜಿ ವಹಿಸಲು ನಿಮಗೆ ನೆರವಾಗುವ ಯಾವುದಾದರೂ ಯೋಜನೆಗಳಿವೆಯೋ ಎಂದು ತಿಳಿದುಕೊಳ್ಳಿ. ಕೌಟುಂಬಿಕ ಸನ್ನಿವೇಶಗಳು ಈ ರೀತಿ ಮಾರ್ಪಡುವಾಗ ನಿಮಗೆ ಆತಂಕವಾಗಬಹುದು. ಸಂಭವಿಸುತ್ತಿರುವುದನ್ನು ಅರಗಿಸಿಕೊಳ್ಳಲು ಆಗದಿರಬಹುದು, ಮನಸ್ಸು ಗೊಂದಲದ ಗೂಡಾಗಬಹುದು ಅಥವಾ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ನಿಮ್ಮ ಮನಸ್ಸನ್ನು ಆವರಿಸಬಹುದು. ಹಾಗಂತ ಕೊರಗುತ್ತಾ ಸುಮ್ಮನಿರಬೇಡಿ. ಆಪ್ತ ಸ್ನೇಹಿತರೊಬ್ಬರ ಹತ್ತಿರ ನಿಮ್ಮ ನೋವನ್ನು ಹೇಳಿಕೊಳ್ಳಿ. ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ಹೃದಯಭಾರವನ್ನು ಯೆಹೋವನಲ್ಲಿ ತೋಡಿಕೊಳ್ಳಿ. ಯಾವುದೇ ಸನ್ನಿವೇಶ ಬಂದರೂ ಅದನ್ನು ಸಂಭಾಳಿಸಲು ಬೇಕಾಗಿರುವ ಮನಶ್ಶಾಂತಿಯನ್ನು ಆತನು ಕೊಡುವನು.—ಕೀರ್ತ. 55:22; ಜ್ಞಾನೋ. 24:10; ಫಿಲಿ. 4:6, 7.

I can't understand this language so sorry if it's wrong and if it's correct then no problem

Similar questions