Vrudara andhara essay in Kannada
Answers
ಶ್ರೀರಂಗಪಟ್ಟಣ ತಾಪಂ ಸಭೆಯಲ್ಲಿ ಸದಸ್ಯರ ಒಕ್ಕೊರಲ ಮನವಿ
ಶ್ರೀರಂಗಪಟ್ಟಣ: ವಯಸ್ಸಾದವರು ಬೆರಳುಗಳ ಗೆರೆ ಸವೆದಿದ್ದು, ನ್ಯಾಯ ಬೆಲೆ ಅಂಗಡಿಯ ಯಂತ್ರ ವೃದ್ಧರ ಬೆರಳಚ್ಚು ಗುರುತಿಸದ್ದರಿಂದ ಅಂಥವರು ಪಡಿತರ ಪಡೆಯಲು ಪರದಾಡುತ್ತಿದ್ದಾರೆ. ಇವರಿಗೆ ಪಡಿತರ ನೀಡಲು ಪರಾರಯಯ ವ್ಯವಸ್ಥೆ ಕಲ್ಪಿಸಬೇಕೆಂದು ಆಹಾರ ಇಲಾಖೆ ಅಧಿಕಾರಿಗಳನ್ನು ತಾಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
''ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಕಾರ್ಡ್‌ಗಳಿಗೆ ವಿತರಣೆ ಮಾಡಿ ಉಳಿದ ಆಹಾರ ಪಾದಾರ್ಥಗಳನ್ನು ಮಾರಾಟ ಮಾಡಿಕೊಳ್ಳದಂತೆ ತಡೆಗಟ್ಟುವ ಉದ್ದೇಶದಿಂದ ಸರಕಾರ ಈ ಪದ್ಧತಿ ಜಾರಿಗೆ ತಂದಿದೆ. 100 ಕಾರ್ಡ್‌ಗಳ ಪೈಕಿ ಇಬ್ಬರ ಬೆರಳಚ್ಚು ಸಂಗ್ರಹವಾಗದಿದ್ದರೂ ಪಡಿತರ ವಿತರಣೆ ಮಾಡುವಂತೆ ಆದೇಶ ನೀಡಲಾಗಿದೆ'' ಎಂದು ಆಹಾರ ಇಲಾಖೆ ಸಿಬ್ಬಂದಿ ಸಭೆಗೆ ತಿಳಿಸಿದರು.
ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ಕಾಯಿಲೆಗಳು ಸೇರಿದಂತೆ ಪ್ರತ್ಯೇಕವಾಗಿ ಮಹಿಳೆಯರನ್ನು ಕಾಡುವ ಸ್ತ್ರೀ ರೋಗಗಳಿಗೂ ಚಿಕಿತ್ಸೆ ದೊರೆಯುತ್ತದೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಅಡ್ಡಪರಿಣಾಮ ಇರುವುದಿಲ್ಲ ಪ್ರಯೋಜನ ಪಡೆದುಕೊಳ್ಳಬೇಕು. ಎಂದು ಆಯುಷ್ ಇಲಾಖೆಯ ಡಾ.ರಮ್ಯಾ ತಿಳಿಸಿದರು. ಆಯುರ್ವೇದ ಚಿಕಿತ್ಸೆ ಸಂಬಂಧ ಜನರಿಗೆ ಜಾಗೃತಿ ಮೂಡಿಸಬೇಕು. ಆಯುರ್ವೇದ ಶಿಬಿರಗಳ ಸಂಬಂಧ ಕರಪತ್ರಗಳನ್ನು ಹಂಚಬೇಕು ಎಂದು ಸದಸ್ಯ ಅರೆಕೆರೆಸಂತೋಷ್ ಒತ್ತಾಯಿಸಿದರು. ಕಡ್ಡಾಯವಾಗಿ ಆಯಾಯ ತಾ.ಪಂ ಸದಸ್ಯರಿಗೆ ಶಿಬಿರಗಳ ಮಾಹಿತಿ ನೀಡಬೇಕು ಎಂದು ತಾ.ಪಂ ಇಒ ದರ್ಶನ್ ಸಲಹೆ ನೀಡಿದರು.
ಕಾಳು ಕಟ್ಟುವ, ಕಾಳು ಕಟ್ಟುತ್ತಿರುವ ಹಂತಕ್ಕೆ ಬಂದಿರುವ ಭತ್ತಕ್ಕೆ ರೋಗ ಬಾಧೆ ಬಾಧಿಸುತ್ತಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೃಷಿ ಇಲಾಖೆ ಅಧಿಕಾರಿಯನ್ನು ಸದಸ್ಯರಾದ ಎಸ್.ಕಾಳೇಗೌಡ, ದೇವೇಗೌಡ, ದೇವರಾಜು ಪ್ರಶ್ನಿಸಿದರು. ಉತ್ತರಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್ ಕೀಲಾರ ಇದೇ ಮೊದಲ ಬಾರಿಗೆ ತಾಲೂಕಿನ ನಾನಾ ಕಡೆ ಸೈನಿಕ ಕೀಟ ಬಾಧೆ ಭತ್ತದ ಬೆಳೆಯನ್ನು ಬಾಧಿಸುತ್ತಿದೆ. ಇದಕ್ಕೆ ಅಗತ್ಯ ಔಷಧವನ್ನು ಇಲಾಖೆಗೆ ತರಿಸಲಾಗಿದೆ. ಸೈನಿಕ ಹುಳು ಬಾಧೆಗೆ ಸಂಜೆ ವೇಳೆ ಕೀಟ ನಾಶಕ ಸಿಂಪಡಿಸುವಂತೆ ರೈತರಿಗೆ ಸಲಹೆ ನೀಡಲಾಗಿದೆ. ರೋಗ ಹತೋಟಿಗೆ ಬರುತ್ತಿದೆ.
ಕೆಆರ್‌ಎಸ್ ಜಲಾಶಯದಲ್ಲಿ ನೀರು ಭರ್ತಿಯಾಗದ ಹಿನ್ನಲೆಯಲ್ಲಿ ಮುಂಗಾರು ಬೆಳೆ ಬೆಳೆಯದಂತೆ ಇಲಾಖೆ ವತಿಯಿಂದಲೇ ರೈತರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಹಿಂಗಾರು ಬೆಳೆಗೆ ಜಲಾಶಯದಲ್ಲಿ ನೀರು ಲಭ್ಯವಿರುವ ಕಾರಣ ಈಗಾಗಲೇ ಕಾವೇರಿ ನೀರಾವರಿ ಸಲಹಾ ಸಮಿತಿಯಲ್ಲಿ ಹಿಂಗಾರು ಬೆಳೆಗೆ 4 ಕಟ್ಟು ನೀರು ಹರಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ. ಹಾಗಾಗಿ ಹಿಂಗಾರು ಬೆಳೆಗೆ ನೀರು ಹರಿಸುವ ದಿನಾಂಕ, ಯಾವ ದಿನಾಂಕದಿಂದ ನೀರು ಹರಿಸಲಾಗುತ್ತದೆ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ ಎಂದು ಸಭೆಗೆ ತಿಳಿಸಿದರು.
ಪ್ರತ್ಯೇಕ ಶುದ್ಧ ಕುಡಿಯುವ ನೀರು ಘಟಕ ನಿರ್ಮಿಸಬೇಕು ಎಂದು ಸದಸ್ಯ ನೇರಲಕೆರೆ ಸುರೇಶ್, ಚಿಂದಗಿರಿಕೊಪ್ಪಲು ಕೊಳವೆ ಬಾವಿಯಲ್ಲಿ ಅಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ ಪರಿಶೀಲಿಸಿ ಎಂದು ಸದಸ್ಯೆ ಭವ್ಯ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಅವರನ್ನು ಒತ್ತಾಯಿಸಿದರು. ಕೊಳವೆ ಬಾವಿ ಕುಡಿಯುವ ನೀರು ಪರೀಕ್ಷೆ ನಡೆಸಲಾಗುವುದು. ನೇರಲಕರೆಗೆ ಪ್ರತ್ಯೇಕ ಶುದ್ಧಕುಡಿಯುವ ನೀರು ಘಟಕ ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಇಇ ಬಸವರಾಜು ಭರವಸೆ ನೀಡಿದರು.
ತಾ.ಪಂ ಇಒ ದರ್ಶನ್, ಉಪಾಧ್ಯಕ್ಷೆ ನಂದಾಮಣಿ, ಸದಸ್ಯರಾದ ರಾಮಕೃಷ್ಣ, ಉಮೇಶ್, ಸರಸ್ವತಿ, ಕೋಮಲ, ಶಿಕ್ಷ ಣ, ತೋಟಗಾರಿಕೆ, ಆರೋಗ್ಯ, ಸೆಸ್ಕ್ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು