what is ari samasa in kannada vyakarana
Answers
ಸಮಾಸ
ಇನ್ನೊಂದು ಭಾಷೆಯಲ್ಲಿ ಓದು
Download PDF
ವೀಕ್ಷಿಸಿ
ಸಂಪಾದಿಸಿ
ಸಮಾಸ ಎಂದರೇನು ? ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.[೧] ಉದಾ: 'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.
ಪರಿವಿಡಿ
ಪದ ವಿವರ ಸಂಪಾದಿಸಿ
ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ.
ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ. ನಾಗವರ್ಮನ ಪ್ರಕಾರ, ‘ನಾಮವಾಚಿನಾಂ ಶಬ್ದನಾಂ ಪರಸ್ಪರಮನ್ವಯ ಸಿದ್ಧೋರ್ಥಸ್ಸಮಾಸ ಸಂಜ್ಞಸ್ಸ್ಯಾತ್’ (ಸೂತ್ರ : 131). ಎಂದರೆ ನಾಮವಾಚಿಯಾದ ಶಬ್ದಗಳೆರಡರ ಅನ್ವಯ ಸಿದ್ಧವಾದ ಅರ್ಥ. ನಾಮಪದಗಳು ಕೂಡಿ ನುಡಿಯುವ ಸರ್ಥವೇ ಸಮಾಸ. ಈ ಕೂಡು ನುಡಿಯನ್ನವನು ಪದವಿಧಿ ಯೆಂದೂ ಕರೆದಿದ್ದಾನೆ. ಕೇಶಿರಾಜನ ಸೂತ್ರದ ಪ್ರಕಾರ, “ಕರು ತಾಯ ಬಳಿಯನುಳಿಯದ ತೆರದಿಂದಂ ನಾಮಪದ ಮದರ್ಥಾನುಗಮಾ ಗೆರಿಗೆ ಸಮಾಸಂ ನೆಗಳ್ಗುಂ”. ಅಂದರೆ, ನಾಮಪದವು ಅರ್ಥಾನುಗತವಾಗುವುದೇ ಸಮಾಸ. ಹೀಗೆ ಅರ್ಥವನ್ನುಂಟು ಮಾಡುವ ಪರಸ್ಪರ ನಾಮಪದಗಳು ಅನ್ಯೋನ್ಯವಾಗಿ ಕೂಡಿರಬೇಕು. ಈ ಅನ್ಯೋನ್ಯವನ್ನು ಅವನು ‘ತಾಯ ಬಳಿಯ ಕರುವಿನಂತೆ’ಯೆಂದು ವರ್ಣಿಸುವನು. ಕೈಪಿಡಿಕಾರರ ಪ್ರಕಾರ, “ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ”.
ಸಮಾಸದ ಸ್ವರೂಪ ಸಂಪಾದಿಸಿ
ಪರಸ್ಪರ ಸಂಬಂಧವುಳ್ಳ ಅನೇಕ ಪದಗಳು ಒಂದು ‘ಪ್ರಾತಿಪದಿಕ’ವಾಗುವುದು ಸಮಾಸ. ಸಮಾಸವಾದಾಗ ಅದರಲ್ಲಿ ಸೇರಿರುವ ಪದಗಳ ನಡುವಿನ ವಿಭಕ್ತಿಗಳಿಗೆ ಲೋಪ ಬರುವುದು.
ಉದಾ : ಉಡುವ + ಕೊರೆ = ಉಡುಗೊರೆ. ಮಲರ್ + ಕಣ್ = ಮಲರ್ಗಣ್.
ಇಲ್ಲಿ ಎರಡು ಪದಗಳಿವೆ. ಮೊದಲನೆಯದು ‘ಪೂರ್ವಪದ’. ಎರಡನೆಯದು ‘ಉತ್ತರಪದ’. ಆಯಾ ಪ್ರಕೃತಿಗಳನ್ನು ವಿಭಕ್ತಿಗನುಗುಣವಾಗಿ ವಿಂಗಡಿಸಿ ಹೇಳುವ ವಿಶೇಷ ವಾಕ್ಯಕ್ಕೆ ‘ವಿಗ್ರಹವಾಕ್ಯ’ವೆಂದು ಹೆಸರು. ಅಂದರೆ ಸಮಾಸದ ಅರ್ಥವನ್ನು ಹೇಳುವ ವಾಕ್ಯ.
ಉದಾ : [ವಿಗ್ರಹವಾಕ್ಯ - ಪೂರ್ವಪದ + ಉತ್ತರ ಪದ = ಸಮಾಸ ಪದ.] ಅಲರಂತಪ್ಪ ಕಣ್ – ಅಲರ್ + ಕಣ್ = ಅಲರ್ಗಣ್.
ಸಮಾಗಳಲ್ಲಿ ಭಿನ್ನ ಭಿನ್ನ ನಾಮಪ್ರಕೃತಿಗಳು ಅಥವಾ ಧಾತುಗಳು ಸೇರುವುದರಿಂದಾಗಿ ಆಯಾ ಸಮಾಸಕ್ಕೆ ಬೇರೆ ಬೇರೆ ಹೆಸರು ಬಂದಿವೆ. ನಾಮಪ್ರಕೃತಿ ಮತ್ತು ಧಾತುಗಳು ಸೇರುವುದಕ್ಕೆ ಉದಾ :
ನಾಮ+ನಾಮ = ಅರಮನೆ.
ನಾಮ+ನಾಮ = ಅರಮನೆ.
ಧಾತು+ನಾಮ = ಉಡುಗೊರೆ.
ಅವ್ಯಯ+ನಾಮ = ನಿಡುಮೂಗಿ.
ಗುಣ +ನಾಮ = ಬೆಳ್ದಿಂಗಳ್.
ವಿಶೇಷಣ+ನಾಮ = ಹೆಗ್ಗೆರೆ.
ಸಂಖ್ಯೆ+ಸಂಖ್ಯೆ = ನೂರಪತ್ತು.
ನಾಮ+ಧಾತು = ಕೆಳೆಗೊಳ್.
ಸಂಖ್ಯೆ+ನಾಮ = ಇರ್ಕೋಡಿ.
ಸಮಾಸದಲ್ಲಿ ಕೆಲವು ಸಲ ಪೂರ್ವಪದಕ್ಕೂ ಕೆಲವು ಸಲ ಉತ್ತರಪದಕ್ಕೂ ಇನ್ನು ಕೆಲವು ಸಲ ಇವೆರಡಕ್ಕೂ ಸಂಬಂಧಿಸದ ಪರಪದಕ್ಕೂ ಪ್ರಾಮುಖ್ಯತೆ ಬರುವುದುಂಟು. ಈ ಪ್ರಾಮುಖ್ಯತೆಯುಳ್ಳ ಪದವನ್ನು ‘ಮುಖ್ಯಪದ’ವೆಂದು ಕರೆಯುತ್ತಾರೆ. ಒಂದು ಸಮಾಸದಲ್ಲಿ ಯಾವ ಪದಕ್ಕೆ ಕ್ರಿಯಾ ಸಂಬಂಧವಿರುವುದೋ ಅದು ‘ಮುಖ್ಯಪದ’ವೆಂದು ಕರೆಯಿಸಿಕೊಳ್ಳುತ್ತದೆ. [ಕ್ರಿಯೆ, ಒಂದು ಪದದ ಅರ್ಥದ ಸಂಬಂಧವನ್ನು ಹೇಳುತ್ತದೆ.] ಸಮಾಸ ಪದಗಳಲ್ಲಿ ಈ ಕ್ರಿಯಾ ಸಂಬಂಧವು ಪೂರ್ವಪದಕ್ಕಿದ್ದರೆ ಅದು ‘ಪೂರ್ವಪದ ಪ್ರಧಾನ’ ಸಮಾಸವೆಂದೂ, ಉತ್ತರದಲ್ಲಿದ್ದರೆ ‘ಉತ್ತರಪದ ಪ್ರಧಾನ ಸಮಾಸ’ವೆಂದು ಗ್ರಹಿಸಬೇಕು.
ವಿಗ್ರಹವಾಕ್ಯ ಸಂಪಾದಿಸಿ
ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ. "ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು" ಸಂಸ್ಕøತದಲ್ಲಿ 28 ಸಮಾಸಗಳ ವಿವರಣೆ ಕುರಿತು ಪ್ರಸ್ತಾಪಿಸಿದರೂ, ಕನ್ನಡಕ್ಕೆ ಎಷ್ಟು ಬೇಕೋ ಅಷ್ಟನ್ನೇ ಹೇಳುವುದು ಅವನ ಮುಖ್ಯ ಉದ್ದೇಶ. ಅರ್ಥವು ಯಾವ ಪದದಲ್ಲಿ ಮುಖ್ಯವಾಗಿರುವದೋ ಆ ತತ್ವದ ಮೂಲಕ್ಕೆ ಕೇಶಿರಾಜನು
ಸಮಾಸದ ವಿಧಗಳು ಸಂಪಾದಿಸಿ
ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ+ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ+ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು. ಮತ್ತು ಅದು ದೋಷಯುಕ್ತ ಸಮಾಸ ವೆನ್ನಿಸುವುದು. ಕೇಶಿರಾಜನು ಸಮಾಸಗಳಲ್ಲಿ ‘ಸಂಸ್ಕೃತ ಸಮಾಸ’ ಮತ್ತು ‘ಕನ್ನಡ ಸಮಾಸ’ವೆಂದು ಒಂಭತ್ತು ವಿಧಗಳನ್ನು ಮಾಡಿದ್ದಾನೆ.
ಸಂಸ್ಕೃತ ಸಮಾಸಗಳಲ್ಲಿ ಆರುವಿಧಗಳು ಸಂಪಾದಿಸಿ
ಕೇಶಿರಾಜ ಸಮಾಸಗಳನ್ನು ಐದು ರೀತಿಯಲ್ಲಿ ವರ್ಗೀಕರಿಸಿದ್ದಾನೆ.
ಉತ್ತರಪದ ಮುಖ್ಯ ಸಮಾಸ : ಅ) ತತ್ಪುರುಷ ಆ) ಕರ್ಮಧಾರಯ ಇ) ದ್ವಿಗು ಈ) ಕ್ರಿಯಾ ಉ) ಗಮಕ..
ಪೂರ್ವಪದ ಮುಖ್ಯ ಸಮಾಸ : ಅ) ಅವ್ಯಯೀಭಾವ ಸಮಾಸ (ಅಂಶೀ ಸಮಾಸ).
ಎರಡೂ ಪದ ಮುಖ್ಯ ಸಮಾಸ : ದ್ವಂದ್ವ ಸಮಾಸ
ಎರಡೂ ಪದ ಅಮುಖ್ಯ ಸಮಾಸ : ಬಹುವ್ರೀಹಿ ಸಮಾಸ.
ವಿರುದ್ಧ ಪದ ಸಮಾಸ : ಅರಿಸಮಾಸ.
ಸಂಸ್ಕೃತ ಸಮಾಸಗಳು : ಸಂಸ್ಕೃತ+ಸಂಸ್ಕೃತ ಪದಗಳು ಸೇರಿಯಾಗುವ ಸಮಾಸವಿದು.
""೧"".ತತ್ಪುರುಷ ಸಮಾಸ - ತತ್ಪುರುಷ ಸಮಾಸ - ತತ್ಪುರುಷ ಸಮಾಸ [ಉತ್ತರಪದಾರ್ಥ ಪ್ರಧಾನ] ‘ಪರಪದದೊಳರ್ಥವರ್ತನಮಿರೆ ತತ್ಪುರುಷಂ’ (ಸೂತ್ರ : 175) ಪರಪದ ಎಂದರೆ, ಉತ್ತರಪದ. ಉತ್ತರಪದದ ಅರ್ಥವು ಪ್ರಧಾನವಾಗಿ ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಕೂಡಿ ಆಗುವ ಸಮಾಸವು ತತ್ಪುರುಷ. ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಮೆಯ್ಯಿಂ + ಕಲಿ = ಮೈಯ್ಗಲಿ(ತೃತೀಯ). ತೇರ್ಗೆ + ಮರಂ = ತೇರ್ಮರಂ(ಚತುರ್ಥಿ). ಪೊರೆಯ + ನೀರ್ = ಪೊರೆನೀರ್(ಷಷ್ಠಿ). ಬಿಲ್ಲೊಳ್ + ಜಾಣಂ =ಬಿಲ್ಜಾಣಂ(ಸಪ್ತಮಿ). ನೀರನ್ನು+ಕುಡಿದಂ=ನೀರ್ಕುಡಿದಂ(ದ್ವಿತೀಯ) ಇತ್ಯಾದಿ.
೨.ಕರ್ಮಧಾರಯ ಸಮಾಸ - ಕರ್ಮಧಾರಯ ಸಮಾಸ ವ[ಉತ್ತರ ಪದಾರ್ಥ ಪ್ರಧಾನ] ‘ತತ್ಪುರುಷಂ ಏಕಾಶ್ರಯಮಾಗೆ ಕರ್ಮಧಾರೆಯಮಕ್ಕುಂ’ (ಸೂ:175) ಪೂರ್ವಪದದಲ್ಲಿ ವಿಶೇಷಣ - ವಿಶೇಷ್ಯಗಳು, ಉಪಮಾನ – ಉಪಮೇಯಗಳು ಸೇರಿ ಆಗುವ ಮತ್ತು ಸಂಭಾವನೆ, ಅವಧಾರಣೆ ತೋರುವ ಸಮಾಸ ಕರ್ಮಧಾರಯ. ಗುಣವಚನಗಳಾಗಿವೆ. ಇವೆಲ್ಲವೂ ಸಹಜ ವಿಶೇಷಣಗಳೇ. ಕರ್ಮಧಾರಯದಲ್ಲಿ ಗುಣವಚನ, ಕೃದಂತ, ಉಪಮಾನ, ಸಂಭಾವನಾ ಪದಗಳು ಪೂರ್ವದಲ್ಲಿ ವಿಶೇಷಣಗಳಾಗಿದ್ದು ಉತ್ತರಪದ ವಿಶೇಷ್ಯವಾಗಿರಬೇಕು. ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಬಿಳಿಯದು ಆದ + ಕೊಡೆ = ಬೆಳ್ಗೊಡೆ. ಹಿರಿದು ಆದ + ಮರ = ಹೆಮ್ಮರ. ಶ್ರೇಷ್ಠನಾದ + ನೃಪ = ನೃಪಶ್ರೇಷ್ಠ. ವೀರನಾದ + ನರ = ನರವೀರ. ಪೆರೆಯಂತೆ + ನೊಸಲ್ = ಪೆರೆನೊಸಲ್. ತಳಿರಂತಹ + ಅಡಿ = ತಳಿರಡಿ. ತೆರೆಯೇ + ಕಯ್.
ನನ್ನನ್ನು ಸ್ಪಷ್ಟವಾಗಿ ಗುರುತಿಸಿ
Answer:
ana or ari. I don'. Know Kannade