India Languages, asked by Bhardwajpushkar7404, 5 months ago

What is the use of online classes(in kannada, please)

Answers

Answered by Anonymous
4

ಭಾರತದಲ್ಲಿ ಆನ್‌ಲೈನ್ ಶಿಕ್ಷಣ ಅಭೂತಪೂರ್ವ ಪ್ರಗತಿ ಕಾಣುತ್ತಿದೆ. ಇತ್ತೀಚೆಗೆ ಪ್ರಕಟವಾದ ವರದಿಯೊಂದು ಯಾವ ರೀತಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಆನ್‌ಲೈನ್ ಕೋರ್ಸ್ ಸಕಾರಾತ್ಮಕ ಪರಿಣಾಮ ಬೀರಿವೆ ಎಂಬುದನ್ನು ತೆರೆದಿಟ್ಟಿದೆ.

ಆನ್‌ಲೈನ್ ಶಿಕ್ಷಣ ಕೋರ್ಸ್‌ಗಳ ಸಾಕಷ್ಟು ಜಾಹೀರಾತುಗಳನ್ನು ನೋಡಿರುತ್ತೀರಿ. ಆದರೆ ಅವು ಯಾವ ರೀತಿ ಸಾಮಾನ್ಯ ಶಿಕ್ಷಣಕ್ಕಿಂತ ಹೆಚ್ಚು ಜನಪ್ರಿಯವಾಗಿವೆ ಎಂಬ ಬಗ್ಗೆ ಅಧಿಕೃತ ದತ್ತಾಂಶ ಇದುವರೆಗೆ ಸಿಕ್ಕಿರಲಿಲ್ಲ. ಆದರೆ ಈಗ ‘ಲರ್ನಿಂಗ್ ಔಟ್‌ಕಮ್ಸ್’ಎಂಬ ಸಮೀಕ್ಷೆಯಲ್ಲಿ ‘ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್(ಎಂಒಒಸಿ)ಗಳು’ ಕಳೆದ ನಾಲ್ಕು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಯಾವ ರೀತಿ ಈ ಕೋರ್ಸ್‌ಗಳು ಆಕರ್ಷಿಸುತ್ತಿವೆ ಎಂಬುದನ್ನು ಮುಂದಿಟ್ಟಿದೆ.

ಈ ಹಿಂದೆ ಎಂಒಒಸಿ ಪ್ರಮಾಣ ಪತ್ರಗಳು ಮತ್ತು ಮೌಲ್ಯಮಾಪನದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ ವಾಷಿಂಗ್ಟನ್ ಮತ್ತು ಯುನಿವರ್ಸಿಟಿ ಆಫ್ ಪೆನ್ಸಲ್ವೇನಿಯಾದ ಸಂಶೋಧಕರು ಈ ಅನುಮಾನಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಆನ್‌ಲೈನ್ ಶಿಕ್ಷಣದಲ್ಲಿ ಭಾರತದ ವಿದ್ಯಾರ್ಥಿಗಳು ಮುಂದಿದ್ದಾರೆ. ಒಟ್ಟು 51,954 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಉಳಿದವರಿಗೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮೀಕ್ಷೆಯ ವೇಳೆ ಆನ್‌ಲೈನ್ ಕೋರ್ಸ್ ಪೂರ್ಣಗೊಳಿಸಲು ಮೂರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ಇರುವ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಇಲ್ಲಿ ಅವರು ಕೋರ್ಸ್ ಸೇರುವುದಕ್ಕೆ ಮುಖ್ಯ ಕಾರಣ ಮತ್ತು ವೃತ್ತಿ ಜೀವನ ನಿರ್ಮಾಣ ಎಂಬ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಯಿತು. ಅಂದರೆ ವೃತ್ತಿ ಜೀವನದಲ್ಲಿ ಇನ್ನಷ್ಟು ಮುಂದಕ್ಕೆ ಹೋಗಬೇಕು ಎನ್ನುವವರು ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಪಡೆಯಬೇಕು ಎನ್ನುವವರು ಎಂದು ಅವರು ಗುರುತಿಸಲಾಯಿತು.

ಈ ಸಮೀಕ್ಷೆಯಲ್ಲಿ ಭಾರತೀಯರು ಅಗ್ರ ಸ್ಥಾನಕ್ಕೇರಿದ್ದಾರೆ. ಒಟ್ಟು ಅಭ್ಯರ್ಥಿಗಳಲ್ಲಿ ಶೇ. 82ರಷ್ಟು ಜನರು ಉದ್ಯೋಗದಲ್ಲಿ ಉನ್ನತ ಹಂತಕ್ಕೇರುವ ಮತ್ತು ಶೇ. 76ರಷ್ಟು ಜನರು ಶಿಕ್ಷಣದಲ್ಲಿ ಇನ್ನಷ್ಟು ಜ್ಞಾನ ಸಂಪಾದನೆ ಉದ್ದೇಶ ಹೊಂದಿದ್ದರು. ಜಾಗತಿಕ ಸರಾಸರಿಯಾದ ಶೇ. 88ಕ್ಕೆ ಹೋಲಿಸಿದರೆ ಶೇ. 91ರಷ್ಟು ಭಾರತೀಯ ಅಭ್ಯರ್ಥಿಗಳು ಆನ್‌ಲೈನ್ ಕೋರ್ಸ್‌ನಿಂದ ನಾನಾ ವಿಧದ ಲಾಭ ಪಡೆದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಆನ್‌ಲೈನ್ ಶಿಕ್ಷಣದಲ್ಲಿ ಉದ್ಯೋಗಾವಕಾಶ ಮತ್ತು ಸವಾಲುಗಳ ಕುರಿತು ಡಬ್ಲ್ಯೂಐಝಡ್‌ಐಕ್ಯೂ ಚರ್ಚಾ ಕೂಟ ನಡೆಸಿತು. ಇದರಲ್ಲಿ ಭಾರತದಲ್ಲಿ ಶಿಕ್ಷಣ ಸಂಸ್ಕೃತಿ ನಿಧಾನಗತಿಯಲ್ಲಿ ಬದಲಾಗುವುದುತ್ತಿದೆ ಎಂದು ಚರ್ಚೆಯಲ್ಲಿ ಕಂಡುಕೊಳ್ಳಲಾಯಿತು. ಜೊತೆಗೆ ಆನ್‌ಲೈನ್ ಶಿಕ್ಷಣಕ್ಕೆ ಇಲ್ಲಿ ಭದ್ರವಾದ ತಳಪಾಯ ನಿರ್ಮಾಣವಾಗಿದ್ದು, ಅತಿ ವೇಗದ ಪ್ರಗತಿಯತ್ತ ಅದು ಮುನ್ನಡೆಯುತ್ತಿದೆ. ಏನು ಮತ್ತು ಎಲ್ಲಿ ಕಲಿತಿದ್ದೀರಿ ಎನ್ನುವುದನ್ನು ಬಿಟ್ಟು, ಒಟ್ಟಾರೆ ಆನ್‌ಲೈನ್ ಶಿಕ್ಷಣ ಹೊಸ ಆವಿಷ್ಕಾರಗಳು ಮತ್ತು ಅನನ್ಯತೆಗೆ ಸಾಕ್ಷಿಯಾಗುತ್ತಿದೆ ಎಂದು ಚರ್ಚೆಯಲ್ಲಿ ತಿಳಿದು ಬಂದಿದೆ.

ಒಟ್ಟಿನಲ್ಲಿ ಸಾಂಪ್ರದಾಯಿಕ ತರಗತಿಗಳಿಗಿಂತ ಹೆಚ್ಚಾಗಿ ಆನ್‌ಲೈನ್ ಶಿಕ್ಷಣ ಭಾರತದಲ್ಲಿ ಜನಪ್ರಿಯವಾಗುತ್ತಿದೆ ಎಂಬುದು ಕಂಡು ಬಂದಿದೆ. ಉದ್ಯೋಗ ಮಾಡುತ್ತಿರುವಾಗಲೇ ಇನ್ನಷ್ಟು ಉನ್ನತ ಹಂತಕ್ಕೆ ಏರುವುದಾಗಲಿ, ಮಾಮೂಲಿ ಶಿಕ್ಷಣದಿಂದ ಪಡೆದ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಆನ್‌ಲೈನ್ ಶಿಕ್ಷಣ ನೆರವಾಗುತ್ತಿದೆ.

hope it helps you.....★

Similar questions