India Languages, asked by thejaswi88, 9 months ago

ಗಣರಾಜ್ಯೋತ್ಸವ ಆಚರಣೆಯ ಮಹತ್ವವನ್ನು ನಿಮ್ಮ ವಾಕ್ಯಗಳಲ್ಲಿ ವಿವರಿಸಿರಿ
who knows this answer please tell
I will mark as Brainliest ​

Answers

Answered by nanditamarali
16

Answer:

Explanation:

ರಾಷ್ಟ್ರಾದ್ಯಂತ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಆಯಾ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಪಾಲರು ಧ್ವಜಾರೋಹಣ ನಡೆಸುತ್ತಾರೆ.1997 ಆಗಸ್ಟ್‌ 15 ರಂದು ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಡಾ. ಬಿಆರ್‌ ಅಂಬೇಡ್ಕರ್‌ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿ ರಚನೆ ಮಾಡಲಾಯಿತು. ಸಮಿತಿಯು ಅದೇ ವರ್ಷ ನ.4 ರಂದು ಶಾಸನ ಸಭೆಯಲ್ಲಿ ಸಂವಿಧಾನದ ಕರಡು ಪ್ರತಿಯನ್ನು ಮಂಡಿಸಿತು. 1949, ನ.26ರಂದು ಶಾಸನ ಸಭೆ ಕರಡು ಪ್ರತಿಯಲ್ಲಿ ಅನೇಕ ತಿದ್ದುಪಡಿಗಳ ಬಳಿಕ ಅಂಗೀಕಾರ ಮಾಡಿತು. ಇದಕ್ಕೂ ಮುನ್ನ ಅಂದರೆ, 1929ರ ಜ.26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪೂರ್ಣ ಸ್ವರಾಜ್ಯದ ಘೋಷಣೆ ಮಾಡಿತ್ತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಈ ದಿನವನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ 1950ರ ಜ.26 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು.

ಗಣರಾಜ್ಯೋತ್ಸವ ದಿನ ಯಾವಾಗ ಆಚರಿಸಲಾಗುತ್ತದೆ?

ದೇಶಾದ್ಯಂತ ಪ್ರತಿ ವರ್ಷ ಜ.26ರಂದು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ದೇಶ 71ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.

ಗಣರಾಜ್ಯೋತ್ಸವ ದಿನ ಎಂದರೇನು?

ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿ, ಸ್ವತಂತ್ರ ಗಣರಾಜ್ಯವಾದದ ದಿನವನ್ನು ಗಣರಾಜ್ಯೋತ್ಸವ ದಿನ ಎನ್ನಲಾಗುತ್ತದೆ. 1950ರ ಜನವರಿ 26 ರಂದು ಭಾರತ ಸಂವಿಧಾನವನ್ನು ಜಾರಿಗೊಳಿಸಿತು. ಈ ಪ್ರಯುಕ್ತ ಹೊಸದಿಲ್ಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಆಕರ್ಷಕ ಪರೇಡ್‌ ನಡೆಯುತ್ತದೆ.

ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಚಾರಣೆಗೆ ವ್ಯತ್ಯಾಸಗಳೇನು?

ಬ್ರಿಟೀಷ್‌ ಆಡಳಿತದಿಂದ 1947 ಆಗಸ್ಟ್‌ 15ರಂದು ಭಾರತ ಸ್ವಾತಂತ್ರ್ಯ ಪಡೆದುಕೊಂಡಿತು. ಆ ಬಳಿಕ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ನೇತೃತ್ವದಲ್ಲಿ ರಾಷ್ಟ್ರದಲ್ಲಿ ಸಂವಿಧಾನ ರಚನೆಯಾಗಿ, ಜ.26, 1950ರಂದು ಜಾರಿಗೊಳಿಸಲಾಯಿತು. ಭಾರತ ಸ್ವತಂತ್ರ ಗಣರಾಜ್ಯ ಎಂದೆನಿಸಿಕೊಂಡಿತು.

ಗಣರಾಜ್ಯೋತ್ಸವದಂದು ಧ್ವಜಾರೋಹಣ ಯಾರು ಮಾಡುತ್ತಾರೆ?

ದೇಶಾದ್ಯಂತ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ಮೂಲಕ ಆಚರಿಸಲಾಗುತ್ತದೆ. ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ಧ್ವಜಾರೋಹಣ ನಡೆಸಿದರೆ, ರಾಜ್ಯದಗಳಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಧ್ವಜಾರೋಹಣ ನಡೆಸುತ್ತಾರೆ.

ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳೇನು?

ರಾಷ್ಟ್ರಪತಿ ಹೊಸದಿಲ್ಲಿಯ ಇಂಡಿಯಾ ಗೇಟ್‌ ಬಳಿಯ ಅಮರ್‌ ಜವಾನ್‌ ಸ್ಮಾರಕಕ್ಕೆ ಗೌರವ ಸಲ್ಲಿಸಿ, ಜನ್‌ಪಥದಲ್ಲಿ ಧ್ವಜಾರೋಹಣ ನಡೆಸುತ್ತಾರೆ. ಆ ಬಳಿಕ ಭಾರತೀಯ ಸೇನಾಪಡೆಗಳಿಂದ ಆಕರ್ಷಕ ಪಥ ಸಂಚಲನ ನಡೆಯುತ್ತದೆ. ದೇಶದ ಎಲ್ಲ ರಾಜ್ಯಗಳ ಸ್ತಬ್ಧ ಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ

pls follow and mark as brainliest

Similar questions