ನಿಮ್ಮ ಊರಿನ ಹಳ್ಳಕ್ಕೆ ಸೇತುವೆ ಅನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗೆ ಒಂದು ಪತ್ರ ಬರೆಯಿರಿ
who will answer 1st in kannada I will mark u as brainlist
Answers
Answer:
I don't know tamil
Explanation:
ಹಟ್ಟಿಚಿನ್ನದಗಣಿ: ಸಮೀಪದ ಗುರುಗುಂಟಾ ಬಳಿಯ ಸರ್‌ಕುಂಟೆ ಹಳ್ಳ ಹಾಗೂ ಹಿರೇಹಳ್ಳದ ಸೇತುವೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಳಾಗಿದ್ದು ದೊಡ್ಡಿ, ತಾಂಡಾಗಳ ಜನರ ಸಂಚಾರಕ್ಕೆ ತೊಂದರೆಯಾಗಿದೆ. 15 ದಿನದೋಳಗೆ ದುರಸ್ತಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಹೊರಾಟಕ್ಕಿಳಿಯಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವೆಂಕಟೇಶ ಗುತ್ತೇದಾರ ಎಚ್ಚರಿಸಿದ್ದಾರೆ.
ರಾಯದುರ್ಗ ಗ್ರಾಮದ ಬಳಿ ಬರುವ ಸರ್‌ಕುಂಟೆ ಹಳ್ಳಕ್ಕೆ ಸೇತುವೆ ಇಲ್ಲ. ಕಲ್ಲುಗಳನ್ನಿಟ್ಟು ಅದರ ಮೇಲೆ ಈ ಹಿಂದೆ ಹಟ್ಟಿಚಿನ್ನದಗಣಿ ಕಂಪನಿಯವರು ತಮ್ಮ ಅನುಕೂಲಕ್ಕಾಗಿ ಕಾಂಕ್ರಿಟ್ ಹಾಕಿದ್ದಾರೆ. ಹಳ್ಳ ತುಂಬಿ ಬಂದಾಗ ಅದರ ಮೇಲೆ ನೀರು ಹರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚು ಸುರಿದ್ದಿದ್ದರಿಂದ ಹಾಗೂ ಎನ್ನಾರ್ಬಿಸಿ ನಾಲೆಯ ಬಸಿ ನೀರು ಹಳ್ಳಕ್ಕೆ ಹರಿದು ಬರುತ್ತಿದ್ದು ಹೀಗಾಗಿ ಹಳ್ಳ ವರ್ಷಪೂರ್ತಿ ಹರಿದು ಕಾಂಕ್ರಿಟ್ ರಸ್ತೆ ಮೇಲೆ ಪಾಚಿ ಬಂದಿದೆ. ಇದರ ಮೇಲೆ ದನಗಳು ನಡೆದು ಹೋಗದಂತ ಸ್ಥಿತಿ ಉಂಟಾಗಿದ್ದು, ಪಾಚಿಯಿಂದಾಗಿ ದನಗಳು ಬಿದ್ದು, ಗಾಯಗೊಂಡಿವೆ. ಅಲ್ಲದೇ ದ್ವಿಚಕ್ರ ವಾಹನ ಸವಾರರು ಹಾಗೂ ಹಳ್ಳದ ರಸ್ತೆ ಮೇಲೆ ಸಂಚರಿಸಿದ ಹಲವು ಜಾರಿಬಿದ್ದು ಕೈಕಾಲು ಮುರಿದುಕೊಂಡು ಸಮಸ್ಯೆ ಎದುರಿಸಿದ್ದಾರೆ.ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಟಣಮಕಲ್ ಬಳಿ ಬರುವ ಹಿರೇಹಳ್ಳದ ಸೇತುವೆಯು ಅನೇಕ ದೊಡ್ಡಿಗಳಿಗೆ ಸಂಪರ್ಕ ಕಲ್ಪಿಸಿದೆ. ಜತೆಗೆ ಕೃಷ್ಣಾ ನದಿ ವೀಕ್ಷ ಣೆಗೆ ಹೋಗಲು, ಹಟ್ಟಿಕ್ಯಾಂಪ್ ಹಾಗೂ ಹಟ್ಟಿಗ್ರಾಮದ ವಾಟರ್ ಫಿಲ್ಟರ್ ಬೆಡ್‌ಗಳಿಗೆ ತೆರಳಲು ಆಧಾರವಾಗಿದೆ. ಅದು ಮಳೆಯಿಂದ ಹಳ್ಳ ತುಂಬಿ ಬಂದು ಸೇತುವೆ ಕೊಚ್ಚಿಹೋಗಿ ಸಂಪರ್ಕ ಸ್ಥಗಿತವಾಗಿದೆ.
ಈ ಸೇತುವೆಗಳ ದುರಸ್ತಿ ಕೈಗೊಳ್ಳುವಂತೆ ಪಿಡಬ್ಲ್ಯುಡಿ ಇಲಾಖೆಗೆ ಈ ಮುಂಚೆ ಹಲವು ಸಾರಿ ತಿಳಿಸುತ್ತ ಬಂದರೂ ನಿರ್ಲಕ್ಷ ್ಯವಹಿಸುತ್ತ ಬಂದಿದ್ದಾರೆ. ಸೇತುವೆಗಳು ಶಿಥಿಲಗೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೇ ರೈತರು ಕೃಷಿ ಉತ್ಪನ್ನಗಳನ್ನು ಬೇರೆಡೆ ಸಾಗಿಸಲು ಸಂಕಷ್ಟ ಎದುರಿಸುವಂತಾಗಿದೆ. 15 ದಿನದೊಳಗೆ ಪಿಡಬ್ಲ್ಯುಡಿ ಇಲಾಖೆ ಈ ಸೇತುವೆಗಳ ದುರಸ್ತಿಗೆ ಮುಂದಾಗಬೇಕು ಇಲ್ಲವಾದಲ್ಲಿ ಗುರುಗುಂಟಾ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಷಾತೀತವಾಗಿ ಎಲ್ಲ ದೊಡ್ಡಿ, ತಾಂಡಾಗಳ ಜನರು ಸೇರಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ವೆಂಕಟೇಶ ಗುತ್ತೇದಾರ, ತಿಮ್ಮಯ್ಯ ಸಾಹುಕಾರ, ನಂದನಗೌಡ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.