World Languages, asked by gowthamin148, 1 month ago

ನಿಮ್ಮ ಶಾಲೆಯಲ್ಲಿ ಆಚರಿಸಿದ ಯೋಗ ದಿನಾಚರಣೆ ಕುರಿತು ವರದಿ ತಯಾರಿಸಿ.

who will answer correctly and quickly they will be marked as brainliest

Answers

Answered by drdipaksarma1
17

Answer:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ, 'ಯೋಗವು ಪ್ರಾಚೀನ ಭಾರತ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ವರ್ತನೆ ಹಾಗೂ ಸಂಯಮ ಮತ್ತು ಸಾಧನೆಗಳ ಏಕೀಕರಣವನ್ನು ಸಾಕಾರಗೊಳಿಸುತ್ತದೆ.

ಮಾನವ ಮತ್ತು ನಿಸರ್ಗದ ನಡುವೆ ಸೌಹಾರ್ದ, ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಪವಿತ್ರ ವಿಧಾನವನ್ನು ಹೇಳಿಕೊಡುತ್ತದೆ. ಇದು ಬರೇ ವ್ಯಾಯಾಮವಲ್ಲ, ನಿಮ್ಮನ್ನು ನೀವು ಜಗತ್ತು ಮತ್ತು ಪ್ರಕೃತಿಯ ಜತೆಗೆ ಒಂದಾಗಿಸಿಕೊಳ್ಳುವ ಪ್ರಕ್ರಿಯೆ. ನಮ್ಮ ಜೀವನಶೈಲಿ ಬದಲಾವಣೆ ಹಾಗೂ ಪ್ರಜ್ಞಾಸ್ಥಿತಿಯನ್ನು ಸೃಷ್ಟಿಸಿಕೊಳ್ಳುವ ಮೂಲಕ ಇದು ಯೋಗಕ್ಷೇಮಕ್ಕೆ ದಾರಿಯಾಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನವಾಗಿ ಈ ದಿನವನ್ನು ಅಂಗೀಕರಿಸುವ ಮೂಲಕ ನಾವೆಲ್ಲರೂ ಒಂದಾಗೋಣ' ಎಂದು ಮೋದಿ ಹೇಳಿದ್ದರು.

Explanation:

hope this will help you and please give me a like and mark as brainliest answer ☺️☺️

Answered by ruchibs1810
6

Answer:

ಯೋಗ ದಿನಾಚರಣೆ : ಶ್ರೀ ನವೀನ ವಿದ್ಯಾಲಯ

Explanation:

ಬೆಂಗಳೂರಿನ ಪ್ರತಿಷ್ಠಿತ ಶಾಲೆಯಾದ ಶ್ರೀ ನವೀನ ವಿದ್ಯಾಲಯ ದಲ್ಲಿ ಯೋಗ ದಿನಾಚರಣೆ ಅದ್ದೂರಿ ಆಗಿ ನಡೆಯಿತು . ಕುಮಾರಿ ನಂದಿನಿ ಪ್ರಾರ್ಥನೆ ಹಾಡಿದರು. ಯೋಗ ಗುರುಗಳು ಮತ್ತು ಶಾಲಾ ಅಧ್ಯಾಪಕರು ಆದ ಶ್ರೀ ರವಿಕುಮಾರ್ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಸಣ್ಣ ವಯಸ್ಸಿನಲ್ಲಿಯೇ ಯೋಗ ಕಲಿಕೆ ಮತ್ತು ಅಭ್ಯಾಸ ಅರೋಗ್ಯ ಮತ್ತು ಮನಸ್ಸಿಗೆ ತುಂಬಾ ಹಿತ ಎಂದು ಹೇಳಿದರು . ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿದ ಅವರು ಅದರ ಉಪಯೋಗವನ್ನೂ ಹೇಳಿದರು. ಶಾಲಾ ಮುಖ್ಯಸ್ಥರಾದ ಶ್ರೀ ವಿ ಎಸ ರಾವ್ , ಖಜಾಂಜಿ ಅರುಣಾ ಅಧ್ಯಾಪಕರು ಮುಂತಾದವರು ಮಾತಾಡಿದರು. ವಿವಿಧ ತರಗತಿಯ ಮಕ್ಕಳು ಯೋಗವನ್ನು ಮಾಡಿದರು . ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು ನೀಡಲಾಯಿತು . ಮೈಸೂರಿನ ಯೋಗ ತರಬೇತು ಕೇಂದ್ರದ ಅಧ್ಯಾಪಕರು ಯೋಗದ ಕುರಿತು ತಿಳಿ ಹೇಳಿದರು. ಹಲವಾರು ಜೀವನ ಶೈಲಿ ರೋಗಗಳ ನಿವಾರಣೆ ಯೋಗಾಸನಗಳ ಕೈ ಅಲ್ಲಿದೆ ಎಂದು ಹೇಳುತ್ತಾ , ರಾಷ್ಟ್ರೀಯ ಯೋಗ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಕುಮಾರಿ ಸ್ವಾತಿ ಶರ್ಮ ಅವರಿಗೆ ಸನ್ಮಾನ ಮಾಡಲಾಯಿತು. ಯೋಗ ದಿನದ ಲೈವ್ ವೀಕ್ಷಣೆ ಯಾ ಜೊತೆಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು .

For more answers about Yoga day in English please refer,

https://brainly.in/question/806753

https://brainly.in/question/442638

Similar questions