೫ ಪ್ರಬಂಧಗಳು with full explaination
pls answer it....
Answers
Answer:
hello friend your asking which language i dont know...
but your kannadati that's why..
i am sending in you kannada
1 ) ಸ್ವಚ್ಚ ಭಾರತ್ ಅಭಿಯಾನ
ಪೀಠಿಕೆ : ಸ್ವಚ್ಚ ಎಂದರೆ ನಿರ್ಮಲವಾದದ್ದು , ಪರಿಶುದ್ಧವಾದದ್ದು ಎಂದರ್ಥ . ಸ್ವಚ್ಚಭಾರತ ಎಂದರೆ ಭಾರತ ದೇಶದ ಕಲುಷಿತ ಸ್ಥಳಗಳನ್ನು ನಿರ್ಮಲಗೊಳಿಸುವುದು ಎಂದರ್ಥ ಸ್ವಚ್ಚ ಭಾರತ್ ಅಭಿಯಾನವು ಭಾರತ ದೇಶದ ಒಂದು ಅತ್ಯುತ್ತಮ ನೈರ್ಮಲ್ಯ ಯೋಜನೆಯಾಗಿದೆ . ಪ್ರಸ್ತುತ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು . ಭಾರತ ದೇಶವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣ ಅಭಿಯಾನವಾಗಲಿದೆ . ವಿಷಯ ನಿರೂಪಣೆ : ' ಆರೋಗ್ಯವೇ ಮಹಾಭಾಗ್ಯ ' ' ಎಲ್ಲಿದೆಯೋ ಸ್ವಚ್ಚತೆ ಅಲ್ಲಿದೆ ಆರೋಗ್ಯ ' ಎಂಬ ಹಿತ ನುಡಿಗಳಂತೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಚವಾಗಿದ್ದರೆ ಅದು ನಮಗೆ ಆರೋಗ್ಯ ಭಾಗ್ಯವನ್ನು ತಂದು ಕೊಡುತ್ತದೆ . ಇಲ್ಲವಾದರೆ ಅನಾರೋಗ್ಯ ಉಂಟಾಗಿ ಕಾಯಿಲೆಗಳು ಉಲ್ಬಣಿಸಬಹುದು ಆದ್ದರಿಂದ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನೈರ್ಮಲ್ಯದಿಂದ ಇರುವಂತೆ ನೋಡಿಕೊಳ್ಳಬೇಕು . ಭಾರತ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ದಿನಾಂಕ : 02 . 10 . 2014 ರಂದು ನಮ್ಮ ದೇಶದ ಪ್ರಧಾನ ಮಂತ್ರಿಯಾದ ಶ್ರೀನರೇಂದ್ರಮೋದಿಯವರು ಸ್ವತಃ ತಾವೇ ಭಾಗವಹಿಸುವುದರ ಮೂಲಕ ಸ್ವಚ್ಚ ಭಾರತ ಆಭಿಯಾನಕ್ಕೆ ಚಾಲನೆ ನೀಡಿದರು . ಮಹಾತ್ಮಗಾಂಧೀಜಿಯವರ ಹುಟ್ಟಿದ ದಿನ ( ಅಕ್ಟೋಬರ್ - 2 ) ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಾಂಧೀಜಿಯವರ ನಿರ್ಮಲ ಭಾರತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅತ್ಯುತ್ತಮ ಅಭಿಯಾನವಾಗಿದೆ . ಕೇಂದ್ರ ರಾಜ್ಯ ಸರ್ಕಾರಿ ನೌಕರರು , ಶಾಲಾ - ಕಾಲೇಜು ವಿದ್ಯಾರ್ಥಿಗಳು , ರಾಜಕೀಯ ಮುಖಂಡರು , ಇತ್ಯಾದಿ ಭಾರತದ ನಾಗರಿಕರು ಪ್ರತಿಜ್ಞೆ ಕೈಗೊಳ್ಳುವ ಮೂಲಕ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ . “ ಸ್ವಚ್ಚತೆ ಉತ್ತಮ ಆರೋಗ್ಯದ ತಳಹದಿ ' ಆದ್ದರಿಂದ ಸ್ವಚ್ಚತೆಯಿಂದ ಕೂಡಿದ ಸ್ಥಳ ನೋಡಲು ಸುಂದರವಾಗಿರುವಂತೆ ರೋಗಮುಕ್ತವು ಆಗಿರುತ್ತದೆ . ಆದ್ದರಿಂದ ನಾವು ಮೊದಲು ನಮ್ಮ ಮನೆ , ಬೀದಿ , ಗ್ರಾಮ , ಶಾಲಾ - ಕಾಲೇಜುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಈ ಅಭಿಯಾನಕ್ಕೆ ಪ್ರೋತ್ಸಹ ನೀಡಿದಂತೆ ಆಗುತ್ತದೆ . ನಾವುಗಳು ಪ್ರತಿನಿತ್ಯ ಸ್ವಲ್ಪ ಸಮಯವನ್ನಾದರೂ ಸ್ವಚ್ಛತೆಗೆ ಮೀಸಲಿಟ್ಟು , ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರೋಗ್ಯದಿಂದ ಇರೋಣ .
ಉಪಸಂಹಾರ : * ಏಕ್ ಕದಂ ಸ್ವಚ್ಚತಾ ಕಿ ಔರ್ ” ಎಂಬ ಧೈಯ ವಾಕ್ಯವನ್ನಿಟ್ಟುಕೊಂಡು ನಾವೆಲ್ಲರೂ ನಿರ್ಮಲ ಮನಸ್ಸಿನಿಂದ ನಮ್ಮ ದೇಶವನ್ನು ನೈರ್ಮಲ್ಯಗೊಳಿಸಿಕೊಳ್ಳಬೇಕು . ಈ ಅಭಿಯಾನದಲ್ಲಿ ಭಾಗವಹಿಸಿ , ಪ್ರೋತ್ಸಾಹಿಸಿ ಸ್ವಚ್ಛ ಸುಂದರ ಪರಿಸರದಿಂದ ಕೂಡಿದ ಭಾರತವನ್ನು ನಿರ್ಮಿಸಿ ಗಾಂಧೀಜಿಯವರ ಕನಸನ್ನು ನನಸು ಮಾಡೋಣ ಎಂಬ ಆಶಯ ನಮ್ಮದಾಗಿರಲಿ .
2 ) ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು
ಪೀಠಿಕೆ : ವಿವಾಹದ ಸಂದರ್ಭದಲ್ಲಿ ಅಥವಾ ಮುಂಚಿತವಾಗಿ ವಧುವಿನ ಕಡೆಯವರು ವರನಿಗೆ ನೀಡುವ ಹಣ . ಬಂಗಾರವಸ್ತ್ರಗಳು , ನಿವೇಶನ , ವಾಹನ , ಉದ್ಯೋಗ ಕೊಡಿಸುವ ಭರವಸೆ ಮುಂತಾದ ಉಡುಗೊರೆಗಳನ್ನು ವರದಕ್ಷಿಣೆ ಎನ್ನುವರು . ಈಗಿನ ಸಮಾಜದಲ್ಲಿ ಇದೊಂದು ಪ್ಯಾಶನ್ ಪಿಡುಗು ಎಂದೇ ಹೇಳಬಹುದು . ಇದೊಂದು ಸಾಮಾಜಿಕ ಪಿಡುಗಾಗಿದ್ದು , ಸಮಾಜದಲ್ಲಿ ಹೆಣ್ಣು ಹೆತ್ತ ಬಡವರು ತಮ್ಮ ಮಗಳ ಮದುವೆ ಮಾಡಲು ಕಣ್ಣೀರು ಸುರಿಸುವುದರೊಂದಿಗೆ ಯಮಪಾಶವಾಗಿದೆ . ವಿಷಯ ವಿವರಣೆ : ಮಾನವನ ಬೋಗ ಲಾಲಸೆಗೆ ಎಷ್ಟಿದ್ದರೂ ಸಾಲದು . ಅದು ಮದುವೆಯಾಗುವಾಗ ವಧುವಿನ ಕಡೆಯವರನ್ನು ವರದಕ್ಷಿಣೆಗಾಗಿ ಪೀಡಿಸುವುದು ಸಾಮಾನ್ಯವಾಗಿ ಬಿಟ್ಟಿದೆ . ಪೋಷಕರು ಮಗಳ ಸುಖವಾಗಿರಲೆಂದು ವರದಕ್ಷಿಣೆ ನೀಡುವುದು ಅಷ್ಟೆ ಸಾಮಾನ್ಯವಾಗಿದೆ . ಇದರಿಂದ ಹೆಣ್ಣು ಮಕ್ಕಳು ಹುಟ್ಟುವುದೇ ಬೇಡವೆಂಬ ಮನೋಭಾವ ಬಡವರಲ್ಲಿ ಹುಟ್ಟುವಂತೆ ಮಾಡಿದೆ . ಕಾನೂನಿನ ಪ್ರಕಾರ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳವುದು ಅಪರಾದ . 1961ರಲ್ಲಿಯೇ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದರೂ ಅದನ್ನು ಸರಿಯಾಗಿ ಬಳಸಲು ಕನ್ಯಾಪಿತೃಗಳು ಮುಂದೆ ಬರುತ್ತಿಲ್ಲ . ಏಕೆಂದರೆ ತಮ್ಮ ಮಗಳ ಮುಂದಿನ ಜೀವನ ನಡೆಯುವುದು ಕಷ್ಟವಾಗುತ್ತದೆ ಎಂದು ಹೆದರುತ್ತಾರೆ . ದಿನನಿತ್ಯ ಸಮೂಹ ಮಾಧ್ಯಮಗಳಲ್ಲಿ ವರದಕ್ಷಿಣೆಯ ಕಿರುಕುಳದ ಆರೋಪಗಳು ಬರುತ್ತಿರುತ್ತವೆ . ಕೆಲವರಿಗೆ ಶಿಕ್ಷೆಯಾದ ಬಗ್ಗೆ ಪ್ರಕರಣಗಳು ಇವೆ . ಆದರೂ ಈ ಪಿಡುಗನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ಸಾಧ್ಯವಾಗುತ್ತಿಲ್ಲ . ಇದನ್ನು ನಿವಾರಿಸಬೇಕಾದರೆ ಇಂದಿನ ಹೆಣ್ಣು ಮಕ್ಕಳು ಸ್ವಾವಲಂಬನೆ ಹಾದಿಯನ್ನು ತುಳಿಯಲು ಸಿದ್ದರಾಗಬೇಕು , ಸಮಾನತೆಗಾಗಿ ಹೋರಾಡುವ ಸ್ತ್ರೀಸಂಘಗಳು ವರದಕ್ಷಿಣೆ ಕೊಡುವ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಿ ಹೋಗಲಾಡಿಸಬೇಕು . ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಧೈರ್ಯ ಹೆಣ್ಣು ಮಕ್ಕಳಲ್ಲಿ ಮೂಡುವುದು ಅನಿವಾರವಾಗಿದೆ . ಒಟ್ಟಿನಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ , ತಾವು ದುಡಿಮೆ ಮಾಡಲು ಕಲಿತರೆ ಯಾವುದೇ ಸ್ವಾಯತ್ತ ಜೀವನ ನಡೆಸಬಹುದಾಗಿದೆ . ಹೆಣ್ಣು ಮಕ್ಕಳು ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಆರ್ಥಿಕ ಸ್ವಾವಲಂಬನೆ ಪಡೆದರೆ ವರದಕ್ಷಿಣೆ ಪಿಡುಗು ತನ್ನಿಂತಾನೇ ನಿರ್ಮೂಲನೆ ಹೊಂದುತ್ತದೆ . ಅದಕ್ಕಿಂತ ಹೆಚ್ಚಿನದಾಗಿ ವಿದ್ಯಾವಂತ ಯುವಕರು ವರದಕ್ಷಿಣೆ ಪಡೆಯುವುದನ್ನು ತೆಜಿಸಿ ಸಮಾಜಕ್ಕೆ ಮಾದರಿಯಾಗಬೇಕು . ಮತ್ತುಸರ್ಕಾರಗಳು ಪ್ರಬಲ ಕಾನೂನು ಜಾರಿಗೊಳಿಸಬೇಕು ಉಪಸಂಹಾರ : ಒಟ್ಟಿನಲ್ಲಿ ಸಮಾಜಕ್ಕೆ ಅಂಟಿಕೊಂಡಿರುವ ವರದಕ್ಷಿಣೆ ಪಿಡುಗನ್ನು ಸಮಾಜದಿಂದ ಕಿತ್ತು ಹಾಕಬೇಕು . ಪರಿವರ್ತನೆಯೇ ಜಗದ ನಿಯಮ ಎನ್ನುವಂತೆ ಸುಸಂಸ್ಕೃತ ಭಾರತದ ನಾಗರಿಕರಾದ ನಾವು ನಮ್ಮ ಮನಸ್ಸನ್ನು ಬದಲಾಯಿಸಿಕೊಂಡು ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದನ್ನು ತಿರಸ್ಕರಿಸಿ ಪ್ರಜ್ಞಾವಂತರಾಗಿ ಬಾಳಬೇಕು . ಕಾನೂನಿನ ಅರಿವು ಮೂಡಿಸಿ ಸಮಾಜದ ಜನರನ್ನು ಎಚ್ಚರಗೊಳಿಸಿ , ಸೀ ಪುರುಷರಲ್ಲಿ ಅಭೇಧತೆಯನ್ನು ಮೂಡಿಸಿ ಸತಿಪತಿಗಳೊಂದಾಗಿ ಬಾಳುವಂತೆ . ಸಂಸಾರಗಳು ಗಟ್ಟಿಗೊಳ್ಳುವಂತೆ ಮಾಡಬೇಕು ಎನ್ನುವುದು ಎಲ್ಲರ ಆಶಯವಾಗಬೇಕು .
Explanation:
hope its help you..
plz.. mark my answer as a brainliest answer...
and follow me..
if you wants to connect to me you can WhatsApp me...