ಯಾವ ರೀತಿಯ ಪ್ರವಾಸ ನಿಮಗಿಷ್ಟ? ಶೈಕ್ಷಣಿಕ ಪ್ರವಾಸ? ಅಥವಾ ಕೌಟಂಬಿಕ ಪ್ರವಾಸವೋ? write 10 lines about this. Only those who knows kannada can answer this.
Answers
Answer:
Having difficulty in understanding some Basic Kannada Words?
Moving to a different city is always a challenge for everyone. Similarly, moving away from your comfort zone, leaving your family and friends behind, leaving your parents cozy home, this all comes as a challenge for anyone moving to a new strange city with a completely different dialect. In other words, with job opportunities and study options present all over India, a change of the city is almost inevitable.
Bangalore, the silicon valley of India gets a huge number of migrants coming in every year for studies and better job opportunities. For people coming from other parts of India other than South India, the Kannada language(Native language of Karnataka) can be a little difficult to understand. However, it is always advisable to learn a few basic words to initiate a conversation with locals.
Therefore without any further delay, let us take you through the list of 20 Basic Kannada words you must know if you live in Bangalore
Answer:
1.ಹತ್ತಿಪ್ಪತ್ತು ವರ್ಷಗಳ ಹಿಂದೆ ಚಳಿಗಾಲದಲ್ಲಿ ಪ್ರತಿ ಹಳ್ಳಿ-ಪಟ್ಟಣಗಳಿಂದ ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಶಿಕ್ಷಕರು ಕರೆದುಕೊಂಡು ಹೋಗುತ್ತಿದ್ದರು. ಪೋಷಕರು ಚಕ್ಕುಲಿ, ರವೆ ಉಂಡಿ, ಚೂಡಾ ಅವಲಕ್ಕಿ ಮಾಡಿ, ಮಕ್ಕಳ ಕೈಯಲ್ಲಿ ಒಂದಿಷ್ಟು ದುಡ್ಡು ಕೊಟ್ಟು ಸಂಭ್ರಮದಿಂದ ದೇಶವನ್ನು ನೋಡಲು ಕಳುಹಿಸುತ್ತಿದ್ದರು. ಶಿಕ್ಷಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪಾಲಕರ ಹಾಗೆ ತುಂಬ ಜವಾಬ್ದಾರಿಯಿಂದ ಕರೆದುಕೊಂಡು ಹೋಗುತ್ತಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನವೇ ಪಠ್ಯದಲ್ಲಿ ಇರುವ ವಿಷಯಕ್ಕೆ ಪೂರಕವಾದ ಐತಿಹಾಸಿಕ, ಭೌಗೋಳಿಕ, ಪೌರಾಣಿಕ ಸ್ಥಳಗಳನ್ನು ಹಾಗೂ ಕವಿಮನೆಗಳು, ನದಿಗಳು, ಪ್ರಯೋಗಾಲಯಗಳು, ತಾರಾಲಯಗಳು ಮುಂತಾದವುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದರು. ಪ್ರವಾಸದಲ್ಲಿ ಪಠ್ಯದಲ್ಲಿರುವ ಆ ಸ್ಥಳಗಳ ಕುರಿತ ಮಾಹಿತಿಯನ್ನು ಶಿಕ್ಷಕರು ಗೈಡ್‌ಡಗಳ ಹಾಗೆ ಸಾಕ್ಷಾತ್ ಆ ಸ್ಥಳಗಳಲ್ಲಿಯೇ ನಿಂತು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಮಕ್ಕಳ ಬುದ್ಧಿವಿಕಾಸವನ್ನು, ನಾಡಪ್ರೇಮವನ್ನು, ಅಭಿಮಾನವನ್ನು ಬೆಳೆಸುತ್ತಿದ್ದರು.
ಪ್ರವಾಸದಿಂದ ಮರಳಿ ಊರಿಗೆ ಬಂದಮೇಲೆ ‘ನನ್ನ ಪ್ರವಾಸದ ಅನುಭವ’ ಎಂಬ ಪ್ರಬಂಧಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು. ಅಂದರೆ ಮಕ್ಕಳು ಕೊಠಡಿಯಲ್ಲಿ ಕಲಿತ ಪಾಠ ಮತ್ತು ಪ್ರವಾಸದಲ್ಲಿ ಅರಿತ ವಿಷಯಗಳು ಹೇಗೆ ಅವರ ಮನಸ್ಸಿನಲ್ಲಿ ಉಳಿದಿವೆ, ಅವರು ಅದರಿಂದ ಏನನ್ನು ಕಲಿತರು, ಅವರ ವ್ಯಕ್ತಿತ್ವದ ಮೇಲೆ ಈ ಶೈಕ್ಷಣಿಕ ಪ್ರವಾಸ ಯಾವರೀತಿ ಪ್ರಭಾವ ಬೀರಿತು – ಎಂಬುದನ್ನು ಗಮನಿಸುತ್ತಿದ್ದರು. ಅಷ್ಟೇ ಅಲ್ಲ, ಮಕ್ಕಳು ತಮ್ಮ ಪ್ರವಾಸದಲ್ಲಿ ಕಂಡ ನಾಡಿನ ಐತಿಹಾಸಿ, ಭೌಗೋಳಿಕ ಮತ್ತು ಸಾಂಸ್ಕೃತಿಕ ಗರಿಮೆಯನ್ನು ಮನೆಯಲ್ಲಿ, ಓಣಿಯಲ್ಲಿ ಎಲ್ಲರಿಗೂ ಹೇಳಿ ಅಭಿಮಾನ ಉಕ್ಕಿಸುತ್ತಿದ್ದರು.
ನಾಡಿನ ಮಣ್ಣಿನ ಗುಣ ವಿಶೇಷತೆ, ಹವಾಗುಣ, ಬೆಳೆಗಳ ವೈವಿಧ್ಯತೆಯ ಬಗ್ಗೆ ಶೈಕ್ಷಣಿಕ ಪ್ರವಾಸದಲ್ಲಿ ಶಿಕ್ಷಕರು ಪ್ರಾತ್ಯಕ್ಷಿಕೆ ಮಾಡುತ್ತಿದ್ದರು: ಹಂಪೆ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ವಿಜಯಪುರದ ಗೋಲಗುಂಬಜ, ಬೇಲೂರು, ಹಳೆಬೀಡು, ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕೃಷ್ಣೆ, ಕಾವೇರಿ, ಅರಮನೆಗಳು, ಗುರುಮನೆಗಳು, ಕೋಟೆ ಕೊತ್ತಲುಗಳು, ತೋಟ, ಹೊಲಗದ್ದೆಗಳು, ಬೆಟ್ಟಗುಡ್ಡಗಳು, ಪ್ರಾಣಿ-ಪಕ್ಷಿ-ಸಸ್ಯ ಸಂಕುಲ, ಪ್ರಾಣಿಸಂಗ್ರಹಾಲಯಗಳನ್ನು ತೋರಿಸುತ್ತ ಅವುಗಳ ಚಾರಿತ್ರಿಕ ಹಿನ್ನೆಲೆ ಮತ್ತು ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗುತ್ತಿತ್ತು.