India Languages, asked by LianaLobo, 3 months ago

Write a friendship story in Kannada​

Answers

Answered by armygurrl
1

Answer:

ಏಳು ಕಾಗೆಗಳು ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಆತನಿಗೆ 7 ಜನ ಗಂಡು ಮಕ್ಕಳು ಇದ್ದರು . ಆದರೆ ಹೆತ್ತವರು ತಮಗೆ ಒಂದು ಹೆಣ್ಣು ಮಗಳು ಇಲ್ಲ ಎಂದು ಬಹಳ ಕೊರಗುತ್ತಿದ್ದರು . ಅಂತಿಮವಾಗಿ ಅವರಿಗೆ ಒಂದು ಹೆಣ್ಣು ಮಗು ಹುಟ್ಟಿತು . ಆದರೆ ಆ ಹೆಣ್ಣು ಮಗು ಬಹಳ ದುರ್ಬಲ ಹಾಗು ಸಣ್ಣಗಾತ್ರದ್ದಾಗಿದ್ದುದು ಹೆತ್ತವರನ್ನು Vishnu ಚಿಂತಾಕ್ರಾಂತರನ್ನಾಗಿ ಮಾಡಿಸಿತು ನಂತರ ಹೆತ್ತವರು ಅವಳಿಗೆ ಪವಿತ್ರ ಸ್ನಾನ ಮಾಡಿಸಲು ನಿರ್ಧರಿಸಿದರು . ತರಾತುರಿಯಲ್ಲಿ ತಂದೆ ಒಬ್ಬ ಮಗನನ್ನು ಪವಿತ್ರ ನದಿಯಿಂದ ಸ್ವಲ್ಪ ನೀರು ತರಲು ಕಳುಹಿಸಿದನು . ಆದರೆ ಇವನ ಜತೆಗೆ ಉಳಿದ 6 ಗಂಡು ಮಕ್ಕಳು ಆ ನದಿಯ ಕಡ ಹೋದರು . ಪ್ರತಿಯೊಬ್ಬರೂ ಕೊಡಕ್ಕೆ ನೀರು ತಂಬಿಸುವ ಭರದಲ್ಲಿ ಆ ಕೊಡ ನದಿಯಲ್ಲಿ ಬಿದ್ದಿತು . ಇದರಿಂದ ಮಕ್ಕಳಿಗೆ ಹೆದರಿಕೆಯಾಯಿತು . ಮನೆಗೆ ಹೋಗಿ ತಂದೆಯನ್ನು ಹೇಗೆ ಎದುರಿಸವುದು ಎಂದು ಯೋಚಿಸಿ ಭಯಬೀತರಾದರು . ಈ ಕಡೆ ಮಕ್ಕಳು ಬರದಿದ್ದುದನ್ನು ಕಂಡ ತಂದೆ ಸಹನೆ ಕಳೆದು ಕೊಳ್ಳಲಾರಂಭಿಸಿದನು . ತನ್ನ ಮುದ್ದಿನ ಹೆಣ್ಣು ಮಗು ಪವಿತ್ರಸ್ಥಾನವಿಲ್ಲದೆ ಸಾಯುತ್ತದೆ ಎಂಬ ಆತಂಕದಿಂದ ಭಯಗೊಂಡ ತಂದೆ ಕೋಪದಿಂದ ನನ್ನ ಗಂಡು ಮಕ್ಕಳು ಕಾಗೆಗಳಾಗಿ ಪರಿವರ್ತನೆ ಯಾಗಲಿ ಎಂದು ಶಾಪ ಇಟ್ಟನು . ಇದಾದ ಕೂಡಲೇ ಅವನ ಮನೆಯ ಮೇಲಿಂದ 7 ಕಾಗೆಗಳು ಕೂಗಾಡುತ್ತಾ ಹಾರುತ್ತಾ ಇರುದನ್ನು ಕಂಡನು . ತಮ್ಮ ಶಾಪವನ್ನು ಹಿಂತೆಗೆದು ಕೊಳ್ಳಲು ಸಾದ್ಯವಾಗದ ಹೆತ್ತವರು , ಕಳೆದು ಹೋದ ಮಕ್ಕಳಿಗಾಗಿ ಮರುಕ ಪಟ್ಟರು . ಆದರೆ ತಮ್ಮ ಮಗಳು ಬಲಾಡ್ಯವಾಗಿ , ಸುಂದರವಾಗಿ ಬೆಳೆಯುತ್ತಿದ್ದುದನ್ನು ಕಂಡು ಆ ದುಃಖವನ್ನು ಮರೆತರು . ಬಹಳ ದಿನದ ವರೆಗೆ ತನಗೆ ಸಹೋದರರು ಇದ್ದಾರೆ ಎಂಬ ಅರಿವಿಲ್ಲದ ಹೆಣ್ಣು ಮಗಳು . ಒಂದು ದಿನ ಜನರು ಅವಳ ಅಣ್ಣಂದಿರ ಕುರಿತು ಮಾತನಾಡುತ್ತಿದ್ದುದು ಕಿವಿಗೆ ಬಿದ್ದಿತು ಇದರಿಂದ ಬಹಳ ಬೇಸರಗೊಂಡ ಆಕೆ ತನ್ನ ತಂದೆಯಲ್ಲಿ ಅಣ್ಣಂದಿರ ಬಗ್ಗೆ ಕೇಳಿದಳು . ತಂದೆ ಬೇರೆ ದಾರಿ ಕಾಣದೆ ಆ ದುಃಖತಪ್ತ ಕಥೆಯನ್ನು ಹೇಳಿದನು . ನಂತರ ಆ ಕುಮಾರಿ ತನ್ನ ಅಣ್ಣಂದಿರನ್ನು ಹುಡುಕಿ ತರಲು ನಿರ್ಧರಿಸಿದಳು ಮತ್ತು ಒಂದು ದಿನ ತನ್ನ ಹೆತ್ತವರ ಸ್ಮರಣಾರ್ತವಾಗಿ ಉಂಗುರವನ್ನು ತೆಗೆದು ಕೊಂಡು ತನ್ನ ಅಣ್ಣಂದಿರನ್ನು ಮುಕ್ತವಾಗಿಸಲು ರಹಸ್ಯವಾಗಿ ಮನೆಯಿಂದ ಹೊರ ಬಿದ್ದಳು . ಹೀಗೆ ಹುಡುಕುತ್ತಾ ಹುಡುಕುತ್ತಾ ಕುಮಾರಿ ಸೂರ್ಯನ ಎದುರಿಗೆ ಬಂದಳು . ಆದರೆ ಅದು ಬಹಳ ಬಿಸಿ ಮತ್ತು ಭಯಾನಕವಾಗಿತ್ತು . ಕೂಡಲೇ ಅವಳು ಅಲ್ಲಿಂದ ಓಡಿ ಚಂದ್ರನ ಎದುರಿಗೆ ಬಂದಳು . ಆದರೆ ಅದು ಬಹಳ ತಂಪು ಮತ್ತು ಕೆಟ್ಟದೃಷ್ಟಿಯಿಂದ ನೋಡುತ್ತಿತ್ತು . ಇದನ್ನು ಕಂಡು ಕೂಡಲೇ ಅಲ್ಲಿಂದ ಕಾಲು ಕಿತ್ತು , ನಕ್ಷತ್ರಗಳ ಹತ್ತಿರ ಹೋದಳು , ನಕ್ಷತ್ರಗಳು ಬಹಳ ಸ್ನೇಹಪೂರ್ವಕಾವಗಿದ್ದವು . ಬೆಳಗಿನ ನಕ್ಷತ್ರ ಇವಳಿಗೆ ಒಂದು ವಕ್ರ ಮಳೆಯನ್ನು ಕೊಡುತ್ತಾ , ಈ ಮಳ ನಿನ್ನ ಅಣ್ಣಂದಿರು ಇರುವ ಗಾಜಿನ ಕೋಟೆಯ ಬೀಗವನ್ನು ತೆರೆಯಲು ಸಹಕರಿಸುತ್ತದೆ ಎಂದು ಹೇಳಿತು .

Similar questions