Science, asked by rakshitharakshitha22, 4 months ago

write a short essay in kannada on ನೈಸಗ್ರಿಕ ನೈಪಲ್ಯ​

Answers

Answered by Abhinav78036
1

Im happy after answering a kannada question after sooo many days.

Yeah, Guys

Support more kannadigas here...

ದೊರೆಯುವ ಮೂಲದ ಆಧಾರದ ಮೇಲೆ, ಸಂಪನ್ಮೂಲಗಳನ್ನು ಹೀಗೆ ವಿಂಗಡಿಸಬಹುದು:

ಜೈವಿಕ{/0 - {1}ಜೀವಗೋಳದಿಂದ ಪಡೆದಿರುವಂತಹವುಗಳು ಜೈವಿಕ ಸಂಪನ್ಮೂಲಗಳು. ಅರಣ್ಯಗಳು ಮತ್ತು ಅರಣ್ಯೋತ್ಪನ್ನಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಅವುಗಳ ಉತ್ಪನ್ನಗಳು, ಮೀನು ಮತ್ತು ಇತರ ಸಮುದ್ರ ಜೀವಿಗಳು ಪ್ರಮುಖ ಉದಾಹರಣೆಗಳು. ಕೊಳೆತ ಜೈವಿಕ ವಸ್ತುಗಳಿಂದ ಮೈದಾಳುವ ಕಾರಣ ಕಲ್ಲಿದ್ದಲು ಮತ್ತು ಪೆಟ್ರೋಲಿಯಂನಂತಹ ಖನಿಜಗಳು ಸಹ ಈ ವಿಭಾಗಕ್ಕೆ ಸೇರುತ್ತವೆ.

ಅಜೈವಿಕ - ನಿರ್ಜೀವ ವಸ್ತುಗಳಿಂದ ನಿರ್ಮಾಣವಾದವು ಅಜೈವಿಕ ಸಂಪನ್ಮೂಲಗಳು.ಭೂಮಿ, ನೀರು, ಗಾಳಿ ಮತ್ತು ಚಿನ್ನ, ಕಬ್ಬಿಣ, ತಾಮ್ರ, ಬೆಳ್ಳಿ ಮುಂತಾದ ಖನಿಜಗಳು ಮೊದಲಾದವು ಇದಕ್ಕೆ ಉದಾಹರಣೆ.

ಅವುಗಳ ಅಭಿವೃದ್ಧಿಯ ಹಂತಗಳನ್ನು ಗಮನದಲ್ಲಿಟ್ಟುಕೊಂಡು, ನೈಸರ್ಗಿಕ ಸಂಪನ್ಮೂಲಗಳನ್ನು ಈ ಕೆಳಗಿನಂತೆ ಸೂಚಿಸಬಹುದು:

ಪ್ರಚ್ಛನ್ನ ಸಂಪನ್ಮೂಲಗಳು - ಪ್ರಚ್ಛನ್ನ ಸಂಪನ್ಮೂಲಗಳು ಭೂಮಿಯಲ್ಲಿ ಇರುವಂತಹವುಗಳು ಹಾಗೂ ಯಾವುದನ್ನು ಭವಿಷ್ಯದಲ್ಲಿ ಬಳಸಬಹುದೋ ಅವುಗಳನ್ನು ಪ್ರಚ್ಛನ್ನ ಸಂಪನ್ಮೂಲ ಎನ್ನಲಾಗಿದೆ. ಉದಾಹರಣೆಗಾಗಿ, ಖನಿಜ ತೈಲ ಭಾರತದ ಹಲವು ಭಾಗಗಳಲ್ಲಿರುವ ಸಂಚಿತ ಶಿಲೆಗಳಲ್ಲಿ ಇರಬಹುದು ಆದರೆ ಅದನ್ನು ನಿಜವಾಗಿ ಹೊರತೆಗೆದು, ಬಳಸುವವರೆಗೆ ಅದು ಪ್ರಚ್ಛನ್ನ ಸಂಪನ್ಮೂಲವಾಗಿಯೇ ಉಳಿದಿರುತ್ತದೆ.

ವಾಸ್ತವಿಕ ಸಂಪನ್ಮೂಲಗಳು ಯಾವುದನ್ನು ಈಗಾಗಲೇ ಪರಿಶೀಲಿಸಲಾಗಿದೆಯೋ,ಮತ್ತು ಅವುಗಳ ಪ್ರಮಾಣ ಹಾಗೂ ಗುಣಮಟ್ಟವನ್ನು ನಿರ್ಧರಿಸಿ, ಪ್ರಸ್ತುತ ದಿನಗಳಲ್ಲಿ ಬಳಸುತ್ತಿರುವೆವೋ ಅವು ಈ ಗುಂಪಿಗೆ ಸೇರುತ್ತವೆ. ಬಾಂಬೆ ಹೈ ಫೀಲ್ಡ್ಸ್‌ನಲ್ಲಿ ಸಿಗುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇದಕ್ಕೊಂದು ಉದಾಹರಣೆ. ಅರಣ್ಯ ಸಂಸ್ಕರಣೆಯಂತಹ ವಾಸ್ತವಿಕ ಸಂಪನ್ಮೂಲದ ಅಭಿವೃದ್ಧಿಯು ಲಭ್ಯವಿರುವ ತಂತ್ರಜ್ಞಾನ ಮತ್ತು ತಗಲುವ ದರವನ್ನು ಅವಲಂಬಿಸಿದೆ. ಲಭ್ಯವಿರುವ ತಂತ್ರಜ್ಞಾನದಿಂದ ಲಾಭದಾಯಕವಾಗಿ ಅಭಿವೃದ್ಧಿಗೊಳಿಸಬಹುದಾದ ವಾಸ್ತವಿಕ ಸಂಪನ್ಮೂಲದ ಭಾಗವನ್ನು ಮೀಸಲು ಎಂದು ಕರೆಯಲಾಗಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ಅವುಗಳಿಗಿರುವ ನವೀಕರಣ ಸಾಮರ್ಥ್ಯದ ಆಧಾರದ ಮೇಲೆ, ಈ ಕೆಳಗಿನಂತೆ ವಿಭಾಗಿಸಬಹುದು:

ಮರುಪೂರಣಗೊಳ್ಳುವ ಸಂಪನ್ಮೂಲಗಳು- ಸುಲಭವಾಗಿ ಪುನಃ ತುಂಬಬಹುದಾದ ಅಥವಾ ಪುನರುತ್ಪತ್ತಿ ಮಾಡಬಹುದಾದವುಗಳು ಯಾವುವೋ ಅವುಗಳೆಲ್ಲ ಮರುಪೂರಣಗೊಳ್ಳುವ ಸಂಪನ್ಮೂಲಗಳು. ಸೂರ್ಯನ ಬೆಳಕು, ಗಾಳಿ, ವಾಯು ಇತ್ಯಾದಿಗಳು ಸತತವಾಗಿ ಲಭ್ಯವಿರುತ್ತವೆ ಮತ್ತು ಅವುಗಳ ಪ್ರಮಾಣ ಮಾನವನ ಬಳಕೆಯಿಂದ ಧಕ್ಕೆಗೊಳಗಾಗುವುದಿಲ್ಲ. ಮಾನವನ ಬಳಕೆಯಿಂದ ಅನೇಕ ಸಂಪನ್ಮೂಲಗಳು ಖಾಲಿಯಾಗಬಹುದು, ಆದರೆ ಅದರ ಮರುಪೂರಣ ಸಾಧ್ಯ, ಹಾಗಾಗಿ ಇದರ ಹರಿವು ನಿರಂತರ ಇದ್ದೇ ಇರುತ್ತದೆ. ಕೆಲವೊಂದು, ಕೃಷಿ ಬೆಳೆಯಂತಹವುಗಳಿಗೆ ಮರಿಪೂರಣಗೊಳ್ಳಲು ಸ್ವಲ್ಪ ಸಮಯ ಸಾಕು, ನೀರು ಸ್ವಲ್ಪಮಟ್ಟಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅರಣ್ಯಕ್ಕೆ ಇನ್ನಷ್ಟು ಹೆಚ್ಚು ಸಮಯ ಬೇಕಾಗುತ್ತದೆ.

ಮರುಪೂರಣಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ.

Similar questions