write down your impression of the corona regulations in kannada plz give me the correct answer
Answers
Answer:
ಇಡೀ ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ ಈ ರೋಗದ ಭೀಕರತೆ ಅಷ್ಟೊಂದಿದೆಯಾ ಅನ್ನುವ ಪ್ರಶ್ನೆಗೆ ಉತ್ತರ ಹೀಗಿದೆ.
ಈ ರೋಗ ಮೊದಲು ಚೀನಾದಲ್ಲಿ ಆರಂಭವಾದಾಗ ಮೊದ ಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ. ಆದರೆ ಕೊನೆ ಕೊನೆಗೆ ಚಿಂತಿಸುತ್ತಲೇ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಿತು. ಪ್ರಯಾಣ, ಸಂಪರ್ಕ, ಸಹವಾಸದಿಂದ ಇದು ಸಾಂಕ್ರಾಮಿಕವಾಗಿ ಹಬ್ಬಿತು, ಲಂಕಾದಹನದಂತೆ.
ಹೀಗಾಗಿ ಅಸಡ್ಡೆ ಅಥವಾ ನಿಧಾನ ಗತಿಯಲ್ಲಿ ಈ ಕೋವಿಡ್ 19 ಬಗ್ಗೆ ಕ್ರಮ ಕೈಗೊಳ್ಳೋಣ. ಅವಸರ ಬೇಡ ಎಂಬ ನಿರ್ಣಯ ತಪ್ಪು. ಇದು ಅತಿ ಬೇಗನೆ ಹರಡುವ ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿರುವ ಕಾರಣ ಕ್ಷಿಪ್ರ ಚಿಕಿತ್ಸೆ ಅತ್ಯಗತ್ಯ.
ಕೆನಡಾ ಪ್ರಧಾನಿ ಪತ್ನಿಯನ್ನೂ ಬಿಡದ ಕೊರೋನಾ ವೈರಸ್ ಸೋಂಕು!
ಇದರ ಲಕ್ಷಣಗಳೇನು?
- ಕೆಲವರಿಗೆ ಕೆಮ್ಮು, ನೆಗಡಿ.
- ಹಲವರಿಗೆ ಜ್ವರ, ಮೈ ಕೈ ನೋವು.
- ಗಂಟಲು ಕೆರೆತ.
- ವಾಂತಿ, ವಾಕರಿಕೆ.
- ಕೊನೆಗೆ ಉಸಿರಾಡಲು ಕಷ್ಟವಾಗೋದು.
ಇಷ್ಟಾದರೂ ಈ ಎಲ್ಲ ಲಕ್ಷಣಗಳು ಮಾತ್ರ ಕೊರೋನಾ ಸೂಚಕವೇ ಅಂದರೆ ಅಲ್ಲ.
ಲಕ್ಷಣಗಳು ಕಂಡರೆ ಏನು ಮಾಡಬೇಕು?
ನೀವುಗಳು ನಿಮ್ಮ ಕುಟುಂಬ ವೈದ್ಯರನ್ನು ಕೂಡಲೇ ಸಂಪರ್ಕಿಸಿ. ಅವರು ಖಾಯಿಲೆ ಲಕ್ಷಣ, ಪರೀಕ್ಷೆ ಇತ್ಯಾದಿಗಳ ಆಧಾರದಿಂದ ನಿಭಾಯಿಸುತ್ತಾರೆ.