India Languages, asked by Pandeyji3909, 1 year ago

Write some notes on dasara in kannada.

Answers

Answered by mehul1045
3
ದಸರೆ ಕನ್ನಡಿಗರ ನಾಡ ಹಬ್ಬ. ಕರ್ನಾಟಕದಲ್ಲಿ ಸಹಸ್ರಾರು ವರ್ಷಗಳಿಂದ ಅನೂಚಾನವಾಗಿ ದಸರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದಲ್ಲಿ ದಸರೆಗೆ ಭವ್ಯ ಇತಿಹಾಸವೂ ಉಂಟು. ಹತ್ತುದಿನಗಳ ದಸರೆಯಲ್ಲಿ ಮಾರ್ನೋಮಿ ಮತ್ತು ವಿಜಯದಶಮಿಗೆ ಮಹತ್ವ.

ದೇಶದ ನಾನಾ ಭಾಗಗಳಲ್ಲಿ ನಾನಾ ಪ್ರಕಾರವಾಗಿ ದಸರೆ, ನವರಾತ್ರಿಯ ಆಚರಣೆ ಇದೆಯಾದರೂ, ಮೈಸೂರು ದಸರೆಗೆ ವಿಶೇಷ ಮಹತ್ವ. ಮೈಸೂರು ದಸರೆಗೆ ವಿಶ್ವಖ್ಯಾತಿಯೇ ಇದೆ. ಈ ಖ್ಯಾತಿಗೆ ಮೂಲ ಪ್ರೇರಣೆ ಹಂಪೆಯ ಅರಸರು.

ವಾಸ್ತವವಾಗಿ ದಸರೆ ಉತ್ಸವವಾಗಿ ಆಚರಣೆಗೆ ಬಂದಿದ್ದೇ ವಿಜಯನಗರದರಸರಿಂದ. ಹಂಪಿಯ ಅರಸರು ದಸರೆಯನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು ಎಂಬುದಕ್ಕೆ ಹಲವು ದಾಖಲೆಗಳೂ ಇವೆ. ವಿದೇಶೀ ಪ್ರವಾಸಿಗರೂ ಕೂಡ ವಿಜಯನಗರದ ವಿಜಯದಶಮಿ ಉತ್ಸವದ ವೈಭವ ಕಂಡು ಬೆಕ್ಕಸ ಬೆರಗಾಗಿ, ತಮ್ಮ ಪ್ರವಾಸ ಕಥನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಅಬ್ದುಲ್ ರಜಾಕ್, ನ್ಯೂನಿಜ್, ಪೆಯಸ್ ಮೊದಲಾದ ವಿದೇಶೀ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ವಿಜಯನಗರ ದಸರಾ ಉತ್ಸವದ ವಿವರಗಳಿವೆ. ವರ್ಷಋತು ಅರ್ಥಾತ್ ಮಳೆಗಾಲ ಕಳೆದ ಬಳಿಕ ಬರುವ ಶರದೃತುವಿನಲ್ಲಿ ಮಳೆಯಲ್ಲಿ ಭೂಮಿ ಒಣಗಿ ಗಟ್ಟಿಯಾಗಿರುತ್ತದೆ. ಇದು ಸೈನ್ಯ ಜಮಾವಣೆಗೆ ಉತ್ತಮ ಸಮಯವಾಗಿತ್ತು.

ಹೀಗಾಗೇ ಅರಸರು ಆರಂಭಿಸಿದ ನವರಾತ್ರಿಯ ಉತ್ಸವಕ್ಕೆ ಎಲ್ಲ ಮಾಂಡಲಿಕರೂ, ಸಾಮಂತರು ತಮ್ಮ ಸೈನ್ಯದೊಂದಿಗೆ ರಾಜಧಾನಿಗೆ ಆಗಮಿಸಿ, ವಿವಿಧ ಶಕ್ತಿ ಪ್ರದರ್ಶನ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ತಮ್ಮ ದಳದ ಶಕ್ತಿ ಸಾಮರ್ಥ್ಯವನ್ನು ಜನರೆದುರು ಪ್ರದರ್ಶಿಸಿ, ತಮ್ಮ ಸೈನ್ಯದ ಬಲ ಪರಾಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದರು. ನವರಾತ್ರಿ ಪೂಜೆಯ ಬಳಿಕ ವಿಜಯನಗರದ ಅರಸರ ದಂಡಿನೊಂದಿಗೆ ಜೈತ್ರಯಾತ್ರೆ ಹೊರಡುತ್ತಿದ್ದರು.

ಈ ಶಕ್ತಿ ಪ್ರದರ್ಶನ, ಉತ್ಸವದ ವೀಕ್ಷಣೆಗಾಗಿಯೇ ಹಂಪಿಯಲ್ಲಿ ಮಹಾನವಮಿ ದಿಬ್ಬದ ನಿರ್ಮಾಣವಾಯಿತು. ಈ ದಿಬ್ಬದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗುತ್ತಿದ್ದ ರಾಯರು, ನೃತ್ಯ, ಸಂಗೀತ, ಆಟಪಾಠ,ಕತ್ತಿವರಸೆ, ಮಲ್ಲಯುದ್ಧ, ಕವಾಯತು ವೀಕ್ಷಿಸುತ್ತಿದ್ದರು. ಪ್ರತಿಭಾವಂತರನ್ನು ಸತ್ಕರಿಸುತ್ತಿದ್ದರು. ಪ್ರತಿನಿತ್ಯ 36 ಸುಂದರಿಯರು ಚಿನ್ನದ ಕಳಶ ಪೂಜೆ ಮಾಡುವ ಮೂಲಕ ದಿನದ ಕಲಾಪಕ್ಕೆ ಮಂಗಳ ಹಾಡುತ್ತಿದ್ದರು.

ನವಮಿಯ ದಿನ ಈ ದಿಬ್ಬದಲ್ಲಿ ನಿಂತು ರಾಯರು, ತಮ್ಮ ಎಲ್ಲ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ವಿಜಯನಗರದರಸರ ಈ ವಿಶಿಷ್ಟ ಸಂಪ್ರದಾಯವನ್ನು ಮೈಸೂರು ಒಡೆಯರೂ ಪಾಲಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಮೈಸೂರಿನಲ್ಲಿ ದಸರಾ ಉತ್ಸವ ಆಚರಣೆಗೆ ಬಂದಿತ್ತು ಎಂಬುದಕ್ಕೆ ಸಾಕ್ಷ್ಯಗಳಿವೆ.

ದಸರೆಯ ಕಾಲದಲ್ಲಿ ಮೈಸೂರಿನಲ್ಲಿ ಕೂಡ ಒಡೆಯರು ಮಯೂರ ಸಿಂಹಾಸನಾರೂಢರಾಗಿ ಸಂಗೀತ, ನೃತ್ಯ, ಕವಾಯಿತು ವೀಕ್ಷಿಸುತ್ತಿದ್ದರು. ಇಂದೂ ಸರಕಾರಿ ಪ್ರಾಯೋಜಕತ್ವದಲ್ಲಿ ದಸರಾ ಕ್ರೀಡಾಕೂಟ ಹಾಗೂ ಸಂಗೀತೋತ್ಸವ ಅರಣನೆಯಲ್ಲಿ ನಡೆಯುತ್ತದೆ.

ಮೈಸೂರು ದಸರೆಗೆ ಮೆರಗು ಬಂದಿದ್ದು ಜಂಬೂಸವಾರಿಯಿಂದ. ಆಕರ್ಷಕ ಪಥಸಂಚಲನ, ಅರಮನೆಯ ಅಷ್ಟವೈಭವವನ್ನೂ ಒಮ್ಮೆಲೆ ಕಣ್ಣಾರೆ ಕಾಣುವ ಸದವಕಾಶ ದೊರಕುತ್ತಿದ್ದುದೇ ಈ ಕಾಲದಲ್ಲಿ ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರು ಈ ಉತ್ಸವಕ್ಕೆ ಬರಲು ಆರಂಭಿಸಿದರು.

ಇಂದೂ ಮೈಸೂರಿನಲ್ಲಿ ಜಂಬೂ ಸವಾರಿ ಸಾಗುತ್ತದೆ. ಮೈಸೂರು ರಾಜರು ಬಳಸುತ್ತಿದ್ದ ಸಾರೋಟುಗಳು,ಎತ್ತಿನಗಾಡಿ, ಪಲ್ಲಕ್ಕಿಗಳು, ಕುದುರೆಗಾಡಿ, ಆನೆಗಾಡಿಗಳು ಜಂಬೂಸವಾರಿಯಲ್ಲಿ ಸಾಲಾಗಿ ಸಾಗುತ್ತವೆ. ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ದಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ.

ಈ ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ನಂದಿಧ್ವಜ, ತಾಳಮದ್ದಳೆ, ಕೀಲುಕುದುರೆ, ಹುಲಿವೇಷವೇ ಮೊದಲಾದ ಜಾನಪದ ತಂಡಗಳೂ ಪಾಲ್ಗೊಳ್ಳುತ್ತವೆ. ಸಂಜೆ ನಡೆಯುವ ಪಂಜಿನ ಮೆರವಣಿಗೆ ನಯನ ಮನೋಹರ.

ಮೈಸೂರು ನಗರದ ನರೇಂದ್ರಮಾರ್ಗಗಳಲ್ಲಿ (ರಾಜಬೀದಿ) ಸಂಚರಿಸುವ ಈ ಜಂಬೂಸವಾರಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಹಿಂದೆ ಅಂಬಾರಿಯಲ್ಲಿ ಬನ್ನಿ ಮಂಟಪಕ್ಕೆ ಬಂದ ಬಳಿಕ ಮಹಾರಾಜರು, ಆನೆಯಿಂದಿಳಿದು, ಕುದುರೆಯ ಮೇಲೆ ಕುಳಿತು ಸೈನ್ಯದ ಪರಿವೀಕ್ಷಣೆ ಮಾಡುತ್ತಿದ್ದರು. ಯುದ್ಧ ಕಾಲದಲ್ಲಿ ವೀರಾವೇಶದಿಂದ ಹೋರಾಡಿದ ಸೇನಾನಿಗಳಿಗೆ, ಶೂರ ಸೈನಿಕರಿಗೆ ಸ್ವತಃ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.

ಇಂದು ಮಹಾರಾಜರ ವಂಶಸ್ಥರು ಅಂಬಾರಿಯಲ್ಲಿ ಕೂರುವುದಿಲ್ಲ. ಬದಲಾಗಿ ಮೈಸೂರು ಒಡೆಯರ ಕುಲದೇವತೆ ಚಾಮುಂಡೇಶ್ವರಿಯ ಪುತ್ಥಳಿಯನ್ನು ಅಂಬಾರಿಯಲ್ಲಿ ಕೂರಿಸಲಾಗುತ್ತದೆ. ಸಂಪ್ರದಾಯಬದ್ಧವಾಗಿಯೇ ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಬನ್ನಿ ಮಂಟಪದಲ್ಲಿ ಬನ್ನಿ ವಿತರಣೆಯೊಂದಿಗೆ, ಪಟಾಕಿ ಪ್ರದರ್ಶನದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲದಲ್ಲೂ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಅಂಗಡಿ, ಮುಂಗಟ್ಟುಗಳು ವಿದ್ಯುತ್ ದೀಪದಿಂದ ಝಗಮಗಿಸುತ್ತವೆ. ದಸರೆ ಕಾಲದಲ್ಲಿ ಮೈಸೂರಿನ ಸೊಬಗು ಕಾಣುವುದೇ ಒಂದು ಸೊಗಸು. ಅದೊಂದು ಇಂದ್ರನ ಅಮರಾವತಿಯಂತಿರುತ್ತದೆ.


priyan22804: hi
priyan22804: do u want to chat with my sister
Answered by saivishal749
1
ಮೈಸೂರು, ಅಕ್ಟೋಬರ್ 10 : ಒಂದು ಕಾಲದಲ್ಲಿ ಆಳರಸರ ಮಹೋತ್ಸವವಾಗಿ ಮೆರೆದು ಇಂದು ಬದಲಾದ ಕಾಲಘಟ್ಟದಲ್ಲಿ ನಾಡಹಬ್ಬವೆಂದು ಕರೆಯಲ್ಪಡುತ್ತಿರುವ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ.
ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ.

ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಈ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯುಂಟು. ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು. [ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ]

ಅವರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು.

ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮಥ್ರ್ಯ, ಸಂಪತ್ತು-ಸಮೃದ್ಧಿ, ವೈಭವ-ವೈಭೋಗ, ವೀರತ್ವ-ಧೀರತ್ವ, ಕಲೆ-ಸಾಹಿತ್ಯ, ಸಂಗೀತ-ನೃತ್ಯ,ಸಂಸ್ಕೃತಿ-ಸಂಪನ್ನತೆ .... ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ-ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು.

ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ದಾಖಲೆಗಳುಂಟು. ಅಷ್ಟೇ ಅಲ್ಲ 11ನೇ ಶತಮಾನದಲ್ಲೇ ಇಲ್ಲಿಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ಈ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.

ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. ಇವರಲ್ಲಿನ 9ನೇ ಆಳ್ವಿಕೆಯ ರಾಜ ಒಡೆಯರು (1578-1617) ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿಯ ದಸರಾ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.

ಥೇಟ್ ವಿಜಯನಗರ ಅರಸರ ಸಂಪ್ರದಾಯದಂತೆಯೇ ದಸರಾಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ-ವಿಧಾನಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅಳವಡಿಸಿಕೊಂಡರು. ಈ ಪ್ರಕಾರ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆವಿಗೂ ಪ್ರತಿನಿತ್ಯ ಪೂಜೆ-ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಬೇಕೆಂದು ಪಕ್ಕಾ ವಿಧೇಯಕವನ್ನೇ ಮಾಡಿ ದಸರಾ ಹಬ್ಬವನ್ನು ಆಚರಣೆಗೆ ತಂದಿದ್ದು, 1799ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.

ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲಕ್ಕೆ (1799-1868) ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಾಯಿತು. ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ "ಮೈಸೂರು ದಸರಾ" ಎಂದು ವಿಶ್ವವಿಖ್ಯಾತಿಯಾಯಿತು.

ವಿಜಯದಶಮಿಯಂದು ಮಧ್ಯಾಹ್ನ ಮಹಾರಾಜರು ಅಲಂಕೃತ ಆನೆಯ ಮೇಲಿನ ಚಿನ್ನದ ಅಂಬಾರಿಯನ್ನೇರಿ ವೈಭವದ ಜಂಬೂಸವಾರಿಯಲ್ಲಿ ಅಂಬಾ ವಿಲಾಸ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ತೆರಳಿ ಬನ್ನಿಪೂಜೆ ಮಾಡಿ ಧ್ವಜ ಹಾರಿಸಿ ಸೈನಿಕರಿಂದ ವಂದನೆ ಸ್ವೀಕರಿಸಿ ನಂತರ ತಾವು ಬಂದ ರಾಜ ಮಾರ್ಗದಲ್ಲೇ ಅರಮನೆಗೆ ವಾಪಸ್ಸಾಗುವ ಈ ಜಂಬೂ ಸವಾರಿಯೇ ಮೈಸೂರು ದಸರೆಯ ಅಂದಿನ ಪ್ರಮುಖ ಆಕರ್ಷಣೆಯಾಗಿತ್ತು.




Similar questions