World Languages, asked by srinivasa81, 11 months ago

write the essay on ಗ್ರಂಥಾಲಯ ಗಲಾ ಮಹತ್ವಾ​

Answers

Answered by Medhani272007
2

Answer:

ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳು. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.

ಇತಿವೃತ್ತ

ಪ್ರಾಚೀನ ಗ್ರಂಥಾಲಯಗಳು ಕೇವಲ ಹಸ್ತಪ್ರತಿ, ತಾಳೇಗರಿ, ಚರ್ಮಪಟ್ಟಿ ಮೊದಲಾದುವುಗಳ ಸಂಗ್ರಹಗಳಾಗಿದ್ದುವು. ಕಾಲಕ್ರಮೇಣ ಅವುಗಳೊಂದಿಗೆ ಮುದ್ರಿತ ಗ್ರಂಥಗಳು ಸೇರಿಕೊಂಡು ಅವುಗಳ ವ್ಯಾಪ್ತಿ ವಿಶಾಲವಾಯಿತು. ಭಾರತದಲ್ಲಿ ೧೯೧೧ರಲ್ಲಿ ಮೊಟ್ಟ ಮೊದಲು ಬರೋಡ ಪ್ರದೇಶದಲ್ಲಿ ಗ್ರಂಥಾಲಯವನ್ನು ಬರೋಡ ಮಹಾರಾಜರಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆರಂಭಿಸಿದರು.

ಜೊತೆಗೆ ಅವರು ಗ್ರಂಥಾಲಯ ಶಿಕ್ಷಣವನ್ನು ಆರಂಭಿಸಿ, ಇಲ್ಲಿನ ಗ್ರಂಥಾಲಯಕ್ಕೆ ಅಮೆರಿಕಾದ ಗ್ರಂಥಪಾಲಕರಾದ ಬೋರ್ಡೆನ್, ವಿಲಿಯಂ, ಅಲಾನ್ಸನ್ ಮತ್ತು ಡಿಕೆನ್ಸನ್ ಮೊಟ್ಟ ಮೊದಲು ಗ್ರಂಥಾಲಯ ವಿಜ್ಞಾನವನ್ನು ಬೋದಿಸುವ ಶಿಕ್ಷಕರಾಗಿ ಭಾರತಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ. ಏಕೆಂದರೆ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಪ್ರಮುಖವಾದುದು. ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳು.

ಓದಲು ಆಕರ ಗ್ರಂಥಗಳಾಗಿ ಬಳಸಲು ಪುಸ್ತಕಗಳನ್ನು ಎರವಲು ರೂಪದಲ್ಲಿ ಪಡೆದು ಓದಲು ಬೇಕಾದ ಪುಸ್ತಕಗಳನ್ನು ಹೊಂದಿರುವ ಸ್ಥಳ. ಮಧ್ಯಯುಗದಲ್ಲಿ ಮಠಗಳಲ್ಲಿ ಗ್ರಂಥಾಲಯಗಳು ಕಾಣಿಸಿಕೊಂಡವು. ಗ್ರಂಥಾಲಯದಲ್ಲಿ ಅನೇಕ ಭಾಷೆಯ ಪುಸ್ತಕಗಳು ಹಾಗೂ ಅದರ ವಿಷಯಗಳು ಸಿಗುತ್ತವೆ. ಈ ಗ್ರಂಥಾಲಯಗಳನ್ನು ನಗರದಲ್ಲಿ ಶಾಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.

Similar questions