Yು 1. ಮಾನವ ಹಕ್ಕುಗಳ ಘೋಷಣೆ Yaavaga maadalaayitu
Answers
Answer:
ಎಲ್ಲಾ ಮಾನವ ಜೀವಿಗಳು ಅವರು ಮಾನವ ವಗ೯ಕ್ಕೆ ಸೇರಿದ್ದವರಾಗಿದ್ದಾರೆಂಬ ಸರಳ ಕಾರಣಕ್ಕಾಗಿ ಹುಟ್ಟಿದ ದಿನದಿಂದ ಸಾಯುವ ವರೆಗೆ ಕೆಲವು ಹಕ್ಕುಗಳನ್ನು ಪಡೆದುಕೊಳ್ಳಲು ಅಹ೯ರಾಗಿರುತ್ತಾರೆ. ಈ ಹಕ್ಕುಗಳು ಜನ್ಮಸಿದ್ದ ಹಕ್ಕುಗಳಾಗಿರುವುದರಿಂದ ಸಹಜವಾದ ಹಕ್ಕುಗಳು ಎಂದು ಕರೆಯಲ್ಪಡುತ್ತದೆ. ಇವುಗಳು ಮಾನವ ಜೀವಿಯ ಮೂಲ ಅಹ೯ತೆಗಳಾಗಿದ್ದು, ಇವುಗಳು ಇಲ್ಲದ ಬದುಕು ಯೋಗ್ಯವಲ್ಲದ, ತೃಪ್ತಿದಾಯಕವಲ್ಲದ, ಆನಂದದಾಯಕವಲ್ಲದ ಅಥ೯ಪೂಣ೯ವಲ್ಲದ ಬದುಕಾಗುತ್ತದೆ. ಸಹಜ ಹಕ್ಕುಗಳು ಅಂದರೆ ಜನ್ಮಸಿದ್ದ ಹಕ್ಕುಗಳ ಪರಿಕಲ್ಪನೆಯು ಮನು ಕುಲದ ಮೂಲದಷ್ಟು ಹಳೆಯದಾಗಿದೆ. ಆದರೆ ಈ ಹಕ್ಕಿನಿಂದಲೂ ಕೂಡ ಪ್ರಾಚೀನ ನಾಗರೀಕರ ಎಲ್ಲಾ ಸ್ತರಗಳ ಮಾನವ ಜೀವಿಗಳು ಈ ಹಕ್ಕುಗಳನ್ನು ಅನುಭವಿಸಿರುವುದಿಲ್ಲ. ಆದೀ ಕಾಲದಲ್ಲಿ ಅಂದರೆ ನಾಗರೀಕತೆ ಎಂಬ ಸೂಯ೯ ಉದಯವಾಗುವುದಕ್ಕಿಂತ ಮುಂಚಿತವಾಗಿ “ಸಮಥ೯ರಾದವರೇ ಬದುಕುಳಿಯುವ ದಿನದ ಕ್ರಮವಾಗಿತ್ತು” ಆದ್ದರಿಂದ ಆ ಕರಾಳ ದಿನದಂದು ಮಾನವ ಹಕ್ಕುಗಳ ಪರಿಕಲ್ಪನೆಯು ಹುಟ್ಟಿದ್ಲಿಲ್ಲ ಎಂದು ಊಹಿಸಬಹುದು.
ಆದರೆ ಮಾನವರು ನಾಗರೀಕತೆಯ ಏಣಿಯನ್ನು ಹಂತ ಹಂತವಾಗಿ ಏರಲು ಪ್ರಾರಂಭಿಸಿದಾಗ ಅವರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಕಷ್ಟಪಟ್ಟು ಪ್ರಯತ್ನಿಸಿದರು ಎಂದು ಕಂಡು ಬರುತ್ತದೆ, ಆದರೆ ನಂತರವೂ ಅವರ ಹಕ್ಕುಗಳ ಈಡೇರಿಕೆಯ ಹೋರಾಟವು ಯಶ್ವಸಿಯಾಗಿರಲಿಲ್ಲ. ಮಧ್ಯಕಾಲಿನ ಯುಗದಲ್ಲಿ ಸಮಾಜವು ಎರಡು ವಗ೯ಗಳಲ್ಲಿ ಅಂದರೆ “ಹೊಂದಿದವರು” ಮತ್ತು “ಹೊಂದದೆಯಿರುವವರು” ಎಂದು ವಿಭಜನೆಯಾಗಿತ್ತು ಮತ್ತು ನಿರಂಕುಶ ಅಧಿಕಾರ ಸಕಾ೯ರ ಅಥವಾ ಸಂಪೂಣ೯ ರಾಜ ಪ್ರಭುತ್ವವು ಅನಿಯಮಿತ ಶಕ್ತಿಯೊಂದಿಗೆ ರಾಜ ಪ್ರಭುತ್ವವು “ನಾನೇ ರಾಜ” ಎಂದು ಹೇಳುವಂತಿತ್ತು. ಇದರಿಂದಾಗಿ ಮಾನವ ಹಕ್ಕುಗಳು ತುಳಿತಕ್ಕೆ ಓಳಗಾದವು ಮತ್ತು ಧೂಳಿಗಿಳಿಸಲ್ಪಟ್ಟವು ಅದು ಏನೇ ಇದ್ದರೂ ಇತಿಹಾಸದ ಸುಧೀಘ೯ ಮೊಗಸಾಲೆಯಲ್ಲಿ ಮಾನವ ಜೀವಿಗಳು ತಮ್ಮ ಹಕ್ಕುಗಳನ್ನು ಸಾಧಿಸಲು ಕಷ್ಟಪಟ್ಟು ಹೋರಾಡುತ್ತಿದ್ದಾರೆ ಮತ್ತು ಅವರ ಹೋರಾಟವು ಹೆಚ್ಚು ಕಡಿಮೆ ಯಶಸ್ಸು ಕಂಡಿದೆ. 1215ರಲ್ಲಿ ಇಂಗ್ಲೇಂಡಿನ ಕಿಂಗ್ ಜಾನ್ ಇವರ “ಮ್ಯಾಗ್ನಾ ಕಾಟ್ಸ್‌೯” ಕೊಡುಗೆ, 1628ರಲ್ಲಿ ಇಂಗ್ಲಂಡಿನ ಚಾಲ್ಸ್‌೯ -1ರ ಹಕ್ಕುಗಳ ಮನವಿಗಳಿಗೆ ಸಹಿ ಮಾಡಿರುವುದು. ವಿಲಿಯಮ್ 3 ರವರ “ಬಿಲ್‌ಆಪ್ ರೈಡ್ಸ್” ಮತ್ತು 1689ರಲ್ಲಿ ಇಂಗ್ಲೇಂಡಿನ ಕ್ವೀನ್ ಮೇರಿ, 1776ರಲ್ಲಿ ಅಮೇರಿಕ ಸ್ವಾತಂತ್ರ್ಯದ ಘೋಷಣೆ 1776ರಲ್ಲಿ ಮತ್ತು 1789ರಲ್ಲಿ ಮಾನವ ಹಕ್ಕುಗಳ ಘೋಷಣೆ ಮತ್ತು ಫ್ರಾನ್ಸಿನ ಜನರಲ್ ಅಸೆಂಬ್ಲಿಯಿಂದ ಘೋಷಣೆ ಸಮಥ೯ನೀಯ ಪ್ರಮುಖ ದಾಖಲೆಗಳು ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ನಮ್ಮ ಸಾಧನೆಯ ವಿವಿಧ ಹಂತಗಳ ಕೆಲವೊಂದು ಗಮನಾಹ೯ ಮೈಲಿಗಲ್ಲುಗಳು ಎಂದು ಪರಿಗಣಿಸಬಹುದು.
ಆದರೆ ಈ ಸಾಧನೆಗಳ ನಂತರ ಮಾನವ ಹಕ್ಕುಗಳ ಎರಡು ವಿಶ್ವ ಸಮರಗಳಿಂದ ಉಂಟಾದ ಗಂಡಾಂತರ ಮತ್ತು ವಿನಾಶದ ಸ್ಥಿತಿಯಲ್ಲಿವೆ. ಆದಾಗ್ಯೂ ಮಾನವ ಹಕ್ಕುಗಳ ಸಾಧನೆಗಾಗಿ ಆಕಾಂಕ್ಷಯು ಸಂಪೂಣವಾಗಿ ಸಾಯುವುದಿಲ್ಲ ಮತ್ತು ಸಮಯದ ನಾಯಕತ್ವದಲ್ಲಿನ “ಶಾನರ್”(sssSanar) ವಿಭಾಗದ ನಿರಂತರ ಪ್ರಯತ್ನಗಳ ಪರಿಣಾಮವಾಗಿ ಯುನೈಟೆಡ್ ನೇಷನ್ಸ್ ಆಗ೯ನೈಸೇಷನ್ (ಯುಎನಒ), ಅಂತಹ ವಿನಾಶಕಾರಿ ಯುದ್ದಗಳ ಪುನರಾವತ೯ನೆಯ ತಡೆಗಟ್ಟುವಿಕೆಗಾಗಿ ಮತ್ತು ಸಂಪೂಣ೯ ವಿನಾಶದಿಂದ ಮಾನವ ಹಕ್ಕುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿತು. ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆಗಾಗಿ ಅಂತರ್ರಾಷ್ಟ್ರೀಯ ಸಹಕಾರಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯು.ಎನ್.ನ ಚಾಟ೯ರ್ನ ಪ್ರಸ್ತಾವದಲ್ಲಿ “ಮಾನವ ಹಕ್ಕುಗಳ” ಎಂಬ ಪದವು ಪ್ರಥಮವಾಗಿ ತನ್ನ ಸ್ಥಾನವನ್ನು ಕಂಡು ಕೊಂಡಿದೆ. ಹೀಗಾಗಿ, “ಮಾನವ ಹಕ್ಕುಗಳ” ಕಲ್ಪನೆಯು ತೀರ ಇತ್ತೀಚಿಗೆ ಹುಟ್ಟಿದಂತಾಗಿದೆ. ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯು 1948ರ ಡಿಸೆಂಬರ್ 10ರಂದು ನಾಗರೀಕ, ರಾಜಕೀಯ, ಆಥಿ೯ಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆ 30 ಲೇಖನಗಳನ್ನು (ಅನುಛೇದನಗಳನ್ನು) ರಚಿಸುವ “ಮಾನವ ಹಕ್ಕುಗಳ ಯುನಿವಸ೯ಲ್ ಡಿಕ್ಲೇರೇಶನ್” ಎಂಬ ಐತಿಹಾಸಿಕ ದಾಖಲೆಯನ್ನು ಅಳವಡಿಸಿಕೊಂಡಿತು. ಎಲ್ಲಾ ಸನ್ನಿವೇಶಗಳಲ್ಲಿ ಮತ್ತು ಎಲ್ಲಾ ಸಂಬಧ೯ಗಳಲ್ಲಿ ಎಲ್ಲಾ ವ್ಯಕ್ತಿಗಳು ತಮ್ಮ ಮಾನವ ಹಕ್ಕುಗಳನ್ನು ಆನಂದಿಸಲು, ಅನುಭವಿಸಲು ಶಕ್ತರಾಗಬೇಕು ಎಂದು ಘೋಷಣೆ ಪುನಃ ದೃಢೀಕರಿಸುತ್ತದೆ. ಘೋಷಣೆ 1966ರಲ್ಲಿ ಅಳವಡಿಸಿಕೊಂಡಿರುವ 2 ಪ್ರಮುಖ ಅಂತರರಾಷ್ಟ್ರೀಯ ಲಿಖಿತ ಪತ್ರಗಳನ್ನು ಅನುಸರಿಸುತು, ಅವುಗಳೆಂದರೆ, 1. ನಾಗರೀಕ ಮತ್ತು ರಾಜಕೀಯ ಹಕ್ಕುಗಳ ಅಂತರ್ರಾಷ್ಟ್ರೀಯ ಒಪ್ಪಂದ ಮತ್ತು 2. ಆಥಿ೯ಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಮಾನವ ಹಕ್ಕುಗಳ ಸಾವ೯ತ್ರಿಕ ಘೋಷಣೆಯೊಂದಿಗೆ ಈ ಲಿಖಿತ ಪತ್ರಗಳು ಅಥವಾ ಸಾಧನೆಗಳು ಇಂಟರ್ ನ್ಯಾಷನಲ್ ಬಿಲ್ ಅನ್ನುವ ರೈಟ್ಸ್ ಅನ್ನು ರಚಿಸಿದವು.
ಭಾರತೀಯ ಸಂವಿಧಾನದ ರಚನೆಕಾರರು ಸಂವಿಧಾನವನ್ನು ರಚಿಸುವಾಗ ಅದರಲ್ಲಿ ಮಾನವ ಹಕ್ಕುಗಳ ಸಾವ೯ತ್ರಿಕ ಘೋಷಣೆಯಲ್ಲಿ ಹೇಳಲಾದ ಹಕ್ಕುಗಳನ್ನು 2 ಪ್ರತ್ಯೇಕ ಭಾಗಗಳಲ್ಲಿ ಸಂವಿಧಾನದ ಭಾಗ 3ರಲ್ಲಿ ಮತ್ತು ಭಾಗ 4ರಲ್ಲಿ ಸೇರಿಸಲಾಗಿತ್ತು. ನಾಗರೀಕ ಮತ್ತು ರಾಜಕೀಯ ಹಕ್ಕುಗಳನ್ನು ಭಾಗ 3ರಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಸೇರಿಸಲಾಗಿದ್ದು, ಸಂವಿಧಾನದ ಭಾಗ 4ರಲ್ಲಿ ಆಥಿ೯ಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು “ರಾಜ್ಯ ನೀತಿ ನಿದೇ೯ಶನ ತತ್ವಗಳು” ಎಂದು ಒಳಗೊಂಡಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ನ್ಯಾಯಾಲಯಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಸಂವಿಧಾನಕ್ಕಾಗಿ ಒದಗಿಸಲಾದ ಆದೇಶದಿಂದ ಭಾರತೀಯ ಸಕಾ೯ರಕ್ಕೆ ಸಂಭಂಧಿಸಿದಂತೆ ಅಥವಾ ಅದರೊಂದಿಗೆ ಸಂಪಕ೯ ಹೊಂದಿದ ವಿಷಯಗಳ ಉತ್ತಮ ರಕ್ಷಣೆಗಾಗಿ 28ನೇ ಸೆಪ್ಟೆಂಬರ್ 1993ರ ಆದೇಶದಲ್ಲಿ ಆಡಿ೯ಸನ್ ಆದ್ಯಾ ದೇಶವನ್ನು ಭಾರತ ಸಕಾ೯ರ ಜಾರಿಗೆ ತಂದಿದ್ದು, ಈ ಆದ್ಯಾದೇಶವನ್ನು ಬದಲಾಯಿಸಿದ ಭಾರತದ ಸಂಸತ್ತು 1994ರ ಆಧಿನಿಯಮ ನಂ. 10, 1994ರ ಜನವರಿ 8, 1994ರ ಮಾನವ ಹಕ್ಕುಗಳ ಸಂರಕ್ಷಣಾಯ ಅಧಿನಿಯಮ 1993 ರಿಂದ ಜಾರಿಗೆ ತಂದಿತು. ಇದು ಸೆಪ್ಟೆಂಬರ್ 28, 1993ರಂದು ಪೂವಾ೯ನ್ವಯವಾಗಿ ಜಾರಿಗೆ ಬಂದಿತು. ಅಂತೆಯೇ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 1993ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು ಅನಂತರ ರಾಜ್ಯ ಮಾನವ ಹಕ್ಕುಗಳ ಆಯೋಗವು ಹಲವಾರು ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟಿತು.
ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸಕಾ೯ರದ ಆದೇಶ ಸಂಖ್ಯೆ ಲಾ20ಎಲ್‌ಎಜಿ 05, ದಿನಾಂಕ 28 ಜೂನ್ 2005 ರನ್ವಯ ಸ್ಥಾಪಿಸಲ್ಪಟ್ಟಿತ್ತು ಆದಾಗ್ಯೂ, ಪ್ರಸ್ತುತ ಅಧ್ಯಕ್ಷರು ಮತ್ತು ಸದಸ್ಯರನ್ನು ಕನಾ೯ಟಕದ ಘನತೆವೆತ್ತ ರಾಜ್ಯಪಾಲರ ಅಧಿಸೂಚನೆ (1) ನಂ. ಲಾ 42 ಹೆಚ್.ಆರ್.ಸಿ 2007, ದಿನಾಂಕ 22.02.2018 ಮತ್ತು ಅಧಿಸೂಚನೆ (2) ಮತ್ತು (3) ಲಾ 42 ಹೆಚ್.ಆರ್.ಸಿ 2017, ದಿನಾಂಕ 15.02.2018ರಂದು ನೇಮಕ ಮಾಡಲ್ಪಟ್ಟಿದ್ದಾರೆ.
Explanation:
ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ