World Languages, asked by lochan7995, 1 year ago

೧. ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ?​

Answers

Answered by jenal
10

Answer

ವಚನಗಳು

ಪದ್ಯಭಾಗ 2 - ವಚನಗಳು

ಅಲ್ಲಮ ಪ್ರಭುದೇವರ ವಚನಗಳು:

ಅಲ್ಲಮಪ್ರಭು ( ೧೧೬೦) ಶಿವಮೊಗ್ಗ ಜಿಲ್ಲೆ ಬಳ್ಳಿಗಾವೆ ಇವನ ಜನ್ಮಸ್ಥಳ. ನಿರಹಂಕಾರ ಮತ್ತು ಸುಜ್ಞಾನಿ ಎಂಬ ದಂಪತಿಗಳ ಮಗನಾಗಿ ಹುಟ್ಟಿದ. ಮಾಯೆ ಎಂಬಾಕೆಯನ್ನು ವಿವಾಹವಾಗಿ, ಬಸವಾಸಿ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆಬಾರಿಸುವ ಸೇವೆ ಮಾಡುತ್ತಾ ಇದ್ದ. ಪತ್ನಿಯ ಮರಣದಿಂದಾಗಿ ವೈರಾಗಿಯಾಗಿ ಸತ್ಯಾನ್ವೇಷಣೆಯಲ್ಲಿ ತೊಡಗಿದವನು ಪ್ರಭುದೇವ ಎಂದೇ ಹೆಸರಾದ. ಅಲ್ಲದೆ ಬಸವಣ್ಣನವರ ಮಹಾಮನೆಯ ಶೂನ್ಯಪೀಠಾಧಿಪತಿಯಾಗಿ ಮಾರ್ಗದರ್ಶನಮಾಡಿದ. ಇವನನ್ನು ಕುರಿತು ಹರಿಹರ ಪ್ರಭುದೇವರ ರಗಳೆ ಎಂಬ ರಗಳೆಯನ್ನು ಬರೆದರೆ, ಚಾಮರಸ ಪ್ರಭುಲಿಂಗಲೀಲೆ ಎಂಬ ಷಟ್ಪದಿಕೃತಿಯನ್ನು ರಚಿಸುತ್ತಾನೆ. ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ, ವಿಚಾರಾತ್ಮಕ, ಹಾಗೂ ವಿಮರ್ಶಾತ್ಮಕ ಅಂಶಗಳನ್ನು ಒಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕರೆದೊಯ್ಯುತ್ತವೆ. ತಾನು ಪಡೆದ ಲೋಕಾನುಭವಗಳನ್ನು ಇತರರಿಗೆ ಹಂಚುವ ಪ್ರಯತ್ನಮಾಡಿದ್ದಾನೆ.

ಸಾರಾಂಶ : ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾನೆ.ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ, ಪಂಚೇಂದ್ರಿಯಗಳಾದ ಕಣ್ಣು(ಸುಂದರವಾದುದನ್ನುಕಾಣುವುದು), ಕಿವಿ (ನಮಗೆ ಹಿತವಾದುದನ್ನು ಕೇಳಲು ತವಕಿಸುವುದು), ಮೂಗು (ಸುಗಂಧವನ್ನು ಆಘ್ರಾಣಿಸುವುದು), ನಾಲಿಗೆ (ರುಚಿಯಾದುದನ್ನು ಸವಿ ನೋಡುವುದು) ಮತ್ತು ಚರ್ಮ ( ಹಿತವಾದುದನ್ನು ಸ್ಪರ್ಷಿಸುವುದು) ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.

ಹೊಟ್ಟೆಯಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯಮೇಲೆ ಇಟ್ಟ ಕಲ್ಲು ಲಿಂಗವಾಗಬಲ್ಲದೆ?, ಪೊದೆ ಭಕ್ತನಾಗಬಲ್ಲುದೇ. ಪೊದೆಯ ಮೇಲೆ ಕಲ್ಲುಇಟ್ಟಾತ ಗುರುವಾಗಬಲ್ಲನೆ?, ಈ ರೀತಿ ವೇಷಧಾರಿಗಳ ಕಂಡು ನಾಚುವೆ ಎಂದು ಹೇಳುತ್ತಾನೆ. ಹಸಿವಾದಾಗ ಅನ್ನತಿನ್ನಬೇಕೇ ಹೊರೆತು ಅನ್ನದಗಂಟನ್ನು ಹೊಟ್ಟೆಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈರೀತಿ ಲಿಂಗಧರಿಸಿ ಮೆರೆಯುವವನಿಗೆ ನೀನು ಭಕ್ತನೇ? ಎಂದೂ, ಲಿಂಗದೀಕ್ಷೆಕೊಡುವ ಗುರುವಿಗೂ ನೀನು ಗುರುವೇ? ಎಂದು , ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.

ಯಾರು ಹಸಿದಾಗ ಅನ್ನವನ್ನು ಕೊಟ್ಟು , ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.

ಸಂದರ್ಭ ಸೂಚಿಸಿ ವಿವರಿಸಿ.

೧.ಬಂಡಿಯ ಹೊಡೆವರೈವರು ಮಾನಿಸರು

ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ. ಅಲ್ಲಮನು ಪಂಚೇಂದ್ರಿಯಗಳನ್ನೇ ದೇಹವೆಂಬ ಬಂಡಿಯ ಚಾಲಕರು ಎಂದು ಕರೆದಿದ್ದಾನೆ. ಪಂಚೇಂದ್ರಿಯಗಳು ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.

PLEASE MARK AS BRAINLIST!!!

Answered by prakashpujari1133
6

Answer:

ಕಾಲನ್ನು ಗಾಲಿ ಗೆ

ದೇಹವನ್ನು ಬಂಡಿಗೆ ಹೋಲಿಸಲಾಗಿದೆ

Similar questions