ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಪ್ರಬಂಧ
Answers
Answer:
ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, "ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware."
ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ. ಯಾವುದೇ ಒಂದು ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ತುಣುಕು ಇದ್ದೇ ಇರುತ್ತದೆ. ಇದರಿಂದ ದೂರ ಎನ್ನುವ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದೆಲ್ಲಾ ಸಾಧ್ಯವಾಗುತ್ತಿರುವದು ಅಂತರ್ಜಾಲ, ದೂರಸಂಪರ್ಕ ಮುಂತಾದವುಗಳ ಬಳಕೆಯಿಂದಾಗಿ. ಇದರಿಂದ ನಾವು ದೇಶದ ಯಾವುದೇ ಮೂಲೆಗಳಿಗೆ ಮಾಹಿತಿಯನ್ನು ಸಂಸ್ಕರಿಸಬಹುದು. ಅದಲ್ಲದೆ ಇತರರೊಂದಿಗೆ ಸಂಪರ್ಕವನ್ನು ಕೂಡ ಮಾಡಬಹುದು.
ಈ ಅಂತರ್ಜಾಲದಿಂದಾಗಿ ಮಾನವನ ಬದುಕು ನಾಶವಾಗುತ್ತಿದೆ. ಅಂತರ್ಜಾಲವನ್ನು ಮಾನವ ದಿನದಿಂದ ದಿನಕ್ಕೆ ಹೇಗೆ ಅಳವಡಿಸಿಕೊಳ್ಳುತ್ತಿದ್ದಾನೆಂದರೆ ಅದು ಒಂದು ಅವಿಭಾಜ್ಯ ಅಂಗವಾಗಿ ಮಾನವನ ಬದುಕಿನಲ್ಲಿ ಉಳಿದಿದೆ.
ನಮ್ಮ ಭಾರತದ ಅಂತರಾಷ್ಟ್ರೀಯ ಸಂಸ್ಥೆಗಳಾದ ವಿಪ್ರೋ, ಟಿಸಿಎಸ್, ಮುಂತಾದವುಗಳು, ಹಾಗೂ ನಮ್ಮ ದೇಶದವರೇ ಆದ ನಾರಾಯಣಮೂರ್ತಿರವರ ಕನಸು ಉಳಿಸಬೇಕಾದರೆ ಅಂತರ್ಜಾಲವನ್ನು ಕಡಿಮೆ ಪ್ರಮಾಣದಲ್ಲಿ ಬಳಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಂತರ್ಜಾಲದ ಮೂಲಕ ಮುಂದುವರಿಸುತಿದ್ದಾರೆ. ಇತರ ದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ.
ತಂತ್ರಜ್ಞಾನವು ಆಧುನಿಕ ಮಾನವನಿಗೆ ವರದಾನ. ಇದರ ಬಳಕೆಯಿಂದಾಗಿ ವಿಶ್ವಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ.