CBSE BOARD X, asked by kishanbopaiah, 11 months ago

ಆ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ಕಟ್ಟುವುದು ಕಠಿಣ; ಕೆಡಹುವುದು ಸುಲಭ.
೨. ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು.​

Answers

Answered by banupriyabanu3234
13

Explanation:

೧. ಕಟ್ಟುವುದು ಕಠಿಣ ಕೆಡಹುವುದು ಸುಲಭ.

ವೇದ ಸುಳ್ಳಾದರು ಗಾದೆ ಸುಳ್ಳಾಗದು ವೇದ 10 ವಾಕ್ಯದಲ್ಲಿ ಹೇಳುವುದನ್ನು ಗಾದೆ ಒಂದೇ ವಾಕ್ಯದಲ್ಲಿ ಹೇಳುತ್ತದೆ ಗಾದೆ ಹಿರಿಯರಿಂದ ಬಂದಂತಹ ನುಡಿಮುತ್ತುಗಳು.

ಕುಂಬಾರ ಒಂದು ಮಡಿಕೆಯನ್ನು ಮಾಡಲು ಸುಮಾರು ವರ್ಷಗಳ ಕಾಲ ತೆಗೆದುಕೊಳ್ಳುತ್ತಾನೆ. ಕುಂಬಾರನು ಮಡಿಕೆಯನ್ನು ಮಾಡಲು ಮಣ್ಣನ್ನು ಹದಮಾಡಿ ನೀರಿನಲ್ಲಿ ಬೆರೆಸಿ ಅದಕ್ಕೆ ಒಂದು ಸುಂದರವಾದ ಆಕಾರ ಕೊಟ್ಟು ತಿರುವಿಯಲ್ಲಿ ತಿರುಗಿಸಿ ಅದನ್ನು ಒಣಗಲು ಬಿಡುತ್ತಾನೆ. ಕುಂಬಾರನು ಈ ಮಡಿಕೆಯನ್ನು ಮಾಡಲು ಎಷ್ಟು ಶ್ರಮ ಪಟ್ಟಿದ್ದಾನೆ ಆದರೆ ಒಂದೇ ಒಂದು ನಿಮಿಷದಲ್ಲಿ ನಾವು ದೊಣ್ಣೆಯಿಂದ ಹೊಡೆದು ಚೂರು ಮಾಡಬಹುದು. ಇದರಿಂದ ಕುಂಬಾರನು ಪಟ್ಟ ಶ್ರಮವೆಲ್ಲ ಹಾಳಾಗಿ ಹಾಳಾಗಿ ಬಿಡುತ್ತದೆ. ಆದ್ದರಿಂದ ನಾವು ಮಡಿಕೆಗೆ ದೊಣ್ಣೆ ಅಥವಾ ಕಾಲು ತಗುಲದಂತೆ ಎಚ್ಚರ ವಹಿಸಬೇಕು.

Answered by nprao12
13

Answer:

೨)ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.

Explanation:

ಜೀವನದಲ್ಲಿ ನಮಗೆ ಹಲವಾರು ಸೌಲಭ್ಯಗಳು ದೊರೆತು ನಾವು ಅತ್ಯುನ್ನತ ದರ್ಜೆಗೆ ಏರಲು ಸಾಧ್ಯವಾಗಬಹುದು. ಅದರಿಂದ ನಮಗೆ ಹಲವಾರು ವಿಧದ ಸುಖ ಹುಡುಕಿಕೊಂಡು ಬರಬಹುದು. ಆದರೆ ಹೆತ್ತ ತಾಯಿ ಮಡಿಲಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖ ಯಾವುದರಿಂದಲೂ ಸಿಗುವುದಿಲ್ಲ. ಅದೇರೀತಿ ನಾವು ಜನ್ಮ ಪಡೆದ ನಾಡು ನಮಗೆ ಇಂದ್ರನ ನಂದನವಕ್ಕಿಂತಲೂ ಮಿಗಿಲಾದುದು. ಅದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ಹುದುಗಿರುವ ಮಾತೃಭೂಮಿ ಕುರಿತಾದ ಗೌರವದ ಭಾವನೆಗಳ.

ಸಂಸ್ಕೃತದಲ್ಲಿ‚'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ'ಎನ್ನುವ ನೋಡಿಯೂ ಇದೇ ಅರ್ಥವನ್ನು ನೀಡುತ್ತದೆ.

ನಿಮಗೆ ಉಪಯೋಗ ಆಗುತ್ತೆದೆ ಅಂದು ಬಾವಿಸುತ್ತೇನೆ ....

Similar questions