CBSE BOARD X, asked by nagarathnah, 1 year ago

ನಿಮ್ಮ ಶಾಲೆಯಲ್ಲಿ ಆಚರಿಸಿದ ವಾರ್ಷಿಕೋತ್ಸವ ವನ್ನು ಕುಂತು ತಾಯಿಗೆ ಪತ್ರ ಬರೆಯಿರಿ

Answers

Answered by sadiqueanwar
14

Explanation:

ಪತ್ರ ಲೇಖನ :

ಆತ್ಮೀಯರು, ಬಂಧುಗಳು, ಸಂಬಂಧಿಕರು, ಗೆಳೆಯರು,ಸಂಘ ಸಂಸ್ಥೆಗಳು ,ಸರ್ಕಾರಿ ಕಛೇರಿಗಳು ಸಂಪರ್ಕವನ್ನು ಇಟ್ಟುಕೊಳ್ಳಲು ಬಳಸುವ ಒಂದು ಮಾದ್ಯಮ ಪತ್ರ ಲೇಖನ. ಮಕ್ಕಳಲ್ಲಿ ಸ್ವಯಂ ಅಭಿವ್ಯಕ್ತಿ ಸಾಧನವೂ ಇದಾಗಿದೆ.

ಮೊಬೈಲ್ ಯುಗದಲ್ಲಿ ಪತ್ರ ವ್ಯವಹಾರವು ಕಡಿಮೆಯಾದರೂ ನಿಂತಿಲ್ಲ .

ಪತ್ರ ಲೇಖನದಲ್ಲಿ ಗಮನಿಸಬೇಕಾದ ಅಂಶಗಳು :

· ಪತ್ರವು ಸುಸ್ಪಷ್ಟ ಹಾಗೂ ಅಚ್ಚುಕಟ್ಟಾಗಿರಬೇಕು .

· ಪತ್ರದ ಬಲಭಾಗದಲ್ಲಿ ಪತ್ರ ಬರೆಯುವವರ ಹೆಸರು, ಸ್ಥಳ, ದಿನಾಂಕ ಇರಬೇಕು.

· ಕಛೇರಿ ಪತ್ರದಲ್ಲಿ ಯಾರಿಗೆ ಪತ್ರ ಬರೆಯಲಾಗಿದೆಯೋ ಅವರ ವಿಳಾಸ ವನ್ನು ಪತ್ರದ ಎಡಭಾಗದಲ್ಲಿ ಬರೆಯಬೇಕು

· ಪತ್ರದಲ್ಲಿ ಸಂಭೋಧನೆಯು ಬಹಳ ಮುಖ್ಯವಾಗಿದ್ದು ಇಡೀ ಪತ್ರದ ಮುಖ್ಯ ಅಂಶವಾಗಿದೆ. ತಂದೆಗೆ ತೀರ್ಥರೂಪರಿಗೆ ಎಂತಲೂ, ತಾಯಿಗೆ ಪತ್ರ ಬರೆಯುವಾಗ ಮಾತೃಶ್ರೀ ಯವರಿಗೆ ಎಂತಲೂ, ಗೆಳೆಯರಿಗೆ ಪತ್ರ ಬರೆಯುವಾಗ ಪ್ರೀತಿಯ ಗೆಳೆಯನಿಗೆ ಎಂತಲೂ , ಕಛೇರಿಗೆ ಬರೆಯುವಾಗ ಮಾನ್ಯರೇ ಎಂತಲೂ ಪ್ರಯೋಗಿಸಬೇಕು.

· ಪತ್ರದಲ್ಲಿ ವಿಷಯವು ಮುಖ್ಯವಾಗಿದ್ದು , ಪತ್ರವು ಏನನ್ನು ಹೇಳಬಯಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಬೇಕು. ಈಗಾಗಲೇ ಪತ್ರ ವ್ಯವಹಾರ ನಡೆದಿದ್ದಲ್ಲಿ ಹಿಂದಿನ ಪತ್ರದ ಉಲ್ಲೇಖವನ್ನು ನಮೂದಿಸಬೇಕು.

· ವಿಷಯ ವಿವರಣೆಯಲ್ಲಿ ವಿಷಯವನ್ನು ಪೂರ್ಣವಾಗಿ ತಿಳಿಸಬೇಕು. ಹೇಳಬೇಕೆಂದಿರುವ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಬೇಕು.

· ತದನಂತರ ಪತ್ರದ ಬಲಭಾಗದಲ್ಲಿ ಪತ್ರವನ್ನು ಯಾರಿಗೆ ಬರೆಯುತ್ತಿದ್ದೇವೋ ಅದರ ಾಧಾರದ ಮೇಲೆ ಇತಿ ತಮ್ಮ ವಿಶ್ವಾಸಿ, ಇತಿ ತಮ್ಮ ನಂಬುಗೆಯ ಎಂದೂ, ಕೌಟುಂಬಿಕ ಪತ್ರಗಳಲ್ಲಿ ಇತಿ ತಮ್ಮ ಪ್ರೀತಿಯ ಮಗ/ಮಗಳು ಎಂತಲೂ ಗೆಳೆಯರಿಗೆ ಬರೆಯುವಾಗ ಇತಿ ನಿನ್ನ ಪ್ರೀತಿಯ ಗೆಳೆಯ ಎಂದು ಬಳಸಬೇಕು.ಮತ್ತು ಸಹಿ ಮಾಡಬೇಕು.

· ಪತ್ರವು ಪೂರ್ಣಗೊಂಡ ಮೇಲೆ ಪತ್ರದ ಹೊರಭಾಗದಲ್ಲಿ ಪತ್ರದ ಹೊರವಿಲಸವನ್ನು ಅಗತ್ಯವಾಗಿ ಬರೆಯಬೇಕು ಪಿನ್ ಕೋಡ್ ಸಮೇತ ವಿಳಾಸ ಬರೆಯುವುದು ಉತ್ತಮ.

Answered by himayashavanth
1

Answer:

ಶಾಲಾ ವಾರ್ಷಿಕೋತ್ಸವಕ್ಕೆ ಬರುವಂತೆ ನಿಮ್ಮ ನಿಮ್ಮ ತಾಯಿಗೆ ಪತ್ರ ಬರೆಯಿರಿ

Similar questions