ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ
Answers
Answered by
8
Explanation:
ರಾಷ್ಟ್ರೀಯ ಎಂದಾಕ್ಷಣ ರಾಷ್ಟ್ರದ ಚಿತ್ರ,ಸ್ಮರಣೆ ಕಣ್ಣೆದುರಲ್ಲಿ ಬರುತ್ತದೆ. ರಾಷ್ಟ್ರ ಎಂದರೆ ಒಂದು ತುಣುಕು ಭೂಮಿಯಲ್ಲ. ರಾಷ್ಟ್ರ ಎಂದರೆ ಒಂದು ನಿಶ್ಚಿತ, ಸೀಮಿತ ಸೀಮೆಯನ್ನು ಹೊಂದಿರುವಂತಹ ಭೂ ಪ್ರದೇಶ. ಹಾಗೂ ಅದರಲ್ಲಿ ವಾಸಿಸುವಂತಹ ಜನಸಮೂಹ, ಅಷ್ಟೇ ಅಲ್ಲದೆ, ಆ ಭೂ ಭಾಗದ ಸಂಸ್ಕೃತಿ. ಈ ಮೂರನ್ನೂ ಸೇರಿಸಿ ರಾಷ್ಟ್ರ ಎನ್ನುವೆವು. ಇವತ್ತಿನ ದಿವಸ ನಮಗೆಲ್ಲರಿಗೂ ಜಾತ್ಯಾತೀತತೆಯ ಹೆಸರನ್ನು ಕೇಳಿ, ನಮಗೆ ಒಂದು ಭೂಭಾಗವಿದೆ, ಇದನ್ನು ಭಾರತ ಎನ್ನುವೆವು, ಇಲ್ಲಿ ಒಂದು ಸಂಸ್ಕೃತಿ, ಸಂಪ್ರದಾಯವಿದೆ ಎನ್ನುವುದನ್ನೇ ಮರೆಯುತ್ತಿದ್ದೇವೆ.
ಭಾರತೀಯ ಸಂಸ್ಕೃತಿ ಎಂದರೆ ಹೊಂದಿಕೊಂಡು ಹೊಗುವುದು. ಇದರಲ್ಲಿ ಎಲ್ಲಾದರೂ ತೊಂದರೆ ಬಂದರೆ ಸರಿಪಡಿಸಿಕೊಂಡು ಒಟ್ಟಾಗಿ ಹೋಗಬೇಕು, ಆಗ ಭಾವೈಕ್ಯತೆ ಆಗುವುದು ಎಂದೆನಿಸುವುದು. ಆದರೆ ನಮ್ಮದು ಜಾತ್ಯಾತೀತ ಭಾರತೀಯ ಸಂಸ್ಕೃತಿ ಅಲ್ಲ. ನಮ್ಮ ಸಂಸ್ಕೃತಿಯನ್ನು ಯಾರೂ ಹುಟ್ಟುಹಾಕಲಿಲ್ಲ. ಇದು ತಾನಾಗಿಯೇ ಉದ್ಭವಿಸಿದ್ದು. ಹಾಗೂ ಜೀವನ ಪದ್ದತಿಯಾಗಿ ಮುಂದುವರೆದಿದ್ದು.
Similar questions
Math,
5 months ago
English,
5 months ago
English,
5 months ago
India Languages,
11 months ago
English,
11 months ago