History, asked by KothaTeja1209, 11 months ago

ರೈತ ವಾರಿ ಪದ್ಧತಿ ಎಂದರೇನು? ಮಹಳ್ವರಿ ಪದ್ಧತಿ ಎಂದರೇನು,?

Answers

Answered by 230bhavana
5

Answer:

ಬ್ರಿಟಿಷ್ ಆಳ್ವಿಕೆಯ ಸಮಯದ ಸಾಗುವಳಿ ಭೂಮಿಯ ತೆರಿಗೆ ಪಾವತಿಯ ವಿಭಿನ್ನ ಪದ್ದತಿಗಳಲ್ಲಿ ಪ್ರಮುಖವಾದದ್ದು ರೈತವಾರಿ ಪದ್ಧತಿ. ಬಾರಾಮಹಲ್ ಜಿಲ್ಲೆಯಲ್ಲಿ ಆಗಿನ ಆಡಳಿತಾಧಿಕಾರಿಯಾಗಿದ್ದ ಕ್ಯಾಪ್ಟನ್ ಅಲೆಕ್ಸಾಂಡರ್ ಜಾರಿ ಮಾಡಿದ್ದ ಹಲವಾರು ಭೂ ಸುಧಾರಣಾ ನಿಯಮಾವಳಿಗಳನ್ನು ಅನುಸರಿಸಿ ಆಗಿನ ಮದ್ರಾಸ್ ನ ಗವರ್ನರ್ ಸರ್. ಥಾಮಸ್ ಮುನ್ರೋ ಚಾಲ್ತಿಗೆ ತಂದ ಪದ್ಧತಿ ಇದಾಗಿದೆ[೧]. ಅದಕ್ಕೂ ಹಿಂದೆ ಅಂದರೆ ಮುಘಲ್ ಆಳ್ವಿಕೆಯಿದ್ದ ಕಾಲದಲ್ಲಿ ದೆಹಲಿಯ ಚಕ್ರವರ್ತಿಗಳು ಆಡಳಿತದ ಕೇಂದ್ರ ಬಿಂದುಗಳಾಗಿದ್ದು ಸಾಗುವಳಿ ಭೂಮಿ ಸಂಬಂಧಿತ ತೆರಿಗೆಗಳ ವಸೂಲಾತಿಗೆ ವಿಶೇಷ ವ್ಯವಸ್ಥೆಯೊಂದನ್ನು ಪರಿಚಯಿಸಿದ್ದರು. ಚಕ್ರವರ್ತಿಗಳು ಆಡಳಿತಾತ್ಮಕ ದೃಷ್ಟಿಯಲ್ಲಿ ಪ್ರಮುಖವಾಗಿದ್ದ ಕಾರಣ ಅವರಾಳುತ್ತಿದ್ದ ಪ್ರಾಂತದ ಅನೇಖ ಕಾರ್ಯ ಕಟ್ಟಳೆಗಳು ಅವರ ದಿನ ನಿತ್ಯದ ಕಾರ್ಯಸೂಚಿಗಳಲ್ಲಿರುತ್ತಿದ್ದವು. ಪ್ರತೀ ಉಪ ಪ್ರಾಂತಕ್ಕೂ ಒಬ್ಬ ಅಧಿಕಾರಿಯನ್ನು ನೇಮಿಸುತ್ತಿದ್ದರು ಹಾಗು ಆತನನ್ನು 'ಸುಬೇದಾರ್' ಎಂದು ಕರೆಯಲಾಗುತ್ತಿತ್ತು. ಸುಬೇದಾರನಿಗೆ ಒಂದು ಪ್ರಾಂತದ ಸಂಪೂರ್ಣ ಸಾಗುವಳಿ ಭೂಮಿಯನ್ನು ಕೊಡ ಮಾಡಲಾಗುತ್ತಿತ್ತು. ಆ ಭೂಮಿಯನ್ನು ಸುಬೇದಾರನು ಹಲವಾರು ಜಮೀನುದಾರರಿಗೆ ಹಂಚುತ್ತಿದ್ದನು. ಜಮೀನುದಾರರು ಅದೇ ಭೂಮಿಯನ್ನು ರೈತರಿಗೆ ಹಂಚಿ ಅದರಲ್ಲಿ ಬರುವ ತೆರಿಗೆಯ ಸ್ವಲ್ಪ ಭಾಗವನ್ನು ತಾವು ಇಟ್ಟುಕೊಂಡು ಉಳಿದಿದ್ದನ್ನು ಜಾಗೀರುದಾರರಿಗೆ ಕೊಡುತ್ತಿದ್ದರು. ಅಲ್ಲಿಂದ ಮುಂದೆ ಅದೇ ಧನ ಪ್ರಾಂತದ ಬೊಕ್ಕಸಕ್ಕೆ ಸೇರುತ್ತಿತ್ತು. ಈ ವ್ಯವಸ್ಥೆಯಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ ರೈತರಿಗೂ ಹಾಗು ಅವರ ಪ್ರಾಂತದ ಸರ್ಕಾರಕ್ಕೂ ಯಾವುದೇ ನೇರ ಸಂಬಂಧಗಳಿರಲಿಲ್ಲ.

ಆದರೆ ಸರ್ ಥಾಮಸ್ ಮುನ್ರೋ ಪರಿಚಯಿಸಿದ ರೈತವಾರಿ ಪದ್ದತಿಯಲ್ಲಿ ರೈತರೇ ನೇರವಾಗಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ತೆರಿಗೆಯ ವಸೂಲಾತಿಗೆಂದೇ ಸರ್ಕಾರದ ಪರವಾಗಿ ಕಲೆಕ್ಟರ್ ಗಳನ್ನೂ ನೇಮಕ ಮಾಡಲಾಯಿತು. ಜೊತೆಗೆ ಹೊಸ ಭೂಮಿಯನ್ನು ಸಾಗುವಳಿಗೆ ಅನುವು ಮಾಡಿಕೊಳ್ಳುವ ಅಥವಾ ಈಗಾಗಲೇ ಸಾಗುವಳಿಯಲ್ಲಿ ಚಾಲ್ತಿಯಲ್ಲಿರುವ ಭೂಮಿಯನ್ನು ಬಿಟ್ಟುಬಿಡುವ ಅವಕಾಶವನ್ನು ರೈತರ ವಿವೇಚನೆಗೇ ಬಿಟ್ಟು ಬಿಡಲಾಯಿತು

Similar questions