History, asked by srikantaprasada5, 11 months ago

ಚೋಳ ದೇಶದ ಮೂರು ಗ್ರಾಮಗಳು ಯಾವುವು?? ​

Answers

Answered by ashwinigpoojari
0

Answer:

ಕ್ಷಿಣ ಭಾರತದ ಕೆಲವು ಭಾಗಗಳನ್ನು ಧೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳರ ವಂಶವು ಒಂದು ಪ್ರಮುಖ ತಮಿಳು ನಾಯಕ ರಾಜವಂಶವಾಗಿದೆ‌. ಕಿಸ್ತ ಪೂರ್ವ 3ರನೇ ಶತಮಾನದಲ್ಲಿ ಉತ್ತರಭಾರತದ ದೊರೆಯಾಗಿದ್ದ. ಅಶೋಕನ, ಕಾಲದ ಶಾಸನಗಳು, ಈ ವಂಶವು ಕ್ರಿಸ್ತಶಕ 13ನೇ ಶತಮಾನದವರೆಗೆ ತಮ್ಮ ಆಳ್ವಿಕೆಯನ್ನು ಮುಂದುವರೆಸಿಕೊಂಡು ಹೋದುದಕ್ಕೆ ಪುರಾವೆಗಳನ್ನು ಕೊಡುತ್ತವೆ.ಚೋಳರನ್ನು ಕರ್ನಾಟಕದ ಇತಿಹಾಸಕಾರ ಪ್ರಕಾರ,ಸಾಮಂತ ಕ್ಷತ್ರಿಯರು(ಪಲ್ಲವ ರಾಜ್ಯದ ಸೈನಿಕರು) ಎಂದು ಬಣ್ಣಿಸಲಾಗಿದೆ ...

ಚೋಳರ ಹೃದಯ ಭಾಗವು ಕಾವೇರಿ ನದಿಯ, ಫಲವತ್ತಾದ ಕಣಿವೆಯಾಗಿತ್ತು. ಆದರೆ ತಮ್ಮ ಅಧಿಕಾರದ ಬಹುಪಾಲು ಭಾಗವನ್ನು ಪ್ರಮುಖವಾಗಿ 9ನೇ ಶತಮಾನದ ಅರ್ಧದಿಂದ 13ನೆ ಶತಮಾನದ ಪ್ರಾರಂಭದವರೆಗೂ ಆಳಿದರು.[೧]

ತುಂಗಭದ್ರಾದ ಇಡೀ ದಕ್ಷಿಣಭಾಗವನ್ನು ಒಂದಾಗಿಸಿ ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದರು.[೨]

ರಾಜರಾಜ ಚೋಳ I ಮತ್ತು ಅವನ ಮಗನಾದ ರಾಜೇಂದ್ರಚೋಳ Iನ ಕಾಲದಲ್ಲಿ ಈ ವಂಶವು ದಕ್ಷಿಣ ಏಷ್ಯಾದ ಮತ್ತು ಆಗ್ನೇಯ ಏಷ್ಯಿಯಾದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿತು.[೩][೪] ಪೂರ್ವಭಾಗದಲ್ಲಿ ಆಗ ತಾನೆ ಉದಯವಾಗುತ್ತಿದ್ದ ಗಂಗರ ಸಾಮ್ರಾಜ್ಯದ ಅಧಿಕಾರವನ್ನು ರಾಜೇಂದ್ರ ಚೋಳI ಕಸಿದುಕೊಂಡನು ಮತ್ತು ಚೀನಾದ ಪುನರಾವರ್ತಿತ ದಾಳಿ ಹಾಗೂ ಶ್ರೀವಿಜಯನ, ಸಮುದ್ರ ಕದನವು ಆ ಸಮ್ರಾಜ್ಯದ ಮೇಲೆ ಪ್ರಭಾವ ಬೀರಿದವು.[೫] 1010–1200ರ ಅವಧಿಯಲ್ಲಿ, ಚೋಳರ ಪ್ರಾಂತಗಳು ದಕ್ಷಿಣದ ಮಾಲ್ಡೀವ್ಸ್ ದ್ವೀಪಗಳಿಂದ ಉತ್ತರದ ಆಂದ್ರಪ್ರದೇಶದ ಗೋದಾವರಿ ನದಿಯ ದಂಡೆಯವರೆಗೂ ಹರಡಿಕೊಂಡಿತು.[೬] ರಾಜರಾಜಚೋಳನು ದಕ್ಷಿಣ ಭಾರತದ, ಈಗಿನ ಶ್ರೀಲಂಕಾದ ಭಾಗಗಳನ್ನು ಮತ್ತು ಮಾಲ್ಡೀವ್ಸ್ ದ್ವೀಪಗಳನ್ನು ಆಕ್ರಮಿಸಿಕೊಂಡನು.[೪] ರಾಜೇಂದ್ರ ಚೋಳನು ತನ್ನ ವಿಜಯಯಾತ್ರೆಯನ್ನು ಉತ್ತರದ ಗಂಗಾ ನದಿಯವರೆಗೂ ಮುಟ್ಟಿಸಿ, ಪಾಟಲಿಪುತ್ರದ ರಾಜನಾದ ಪಾಲ ಮತ್ತು ಮಹಿಪಾಲರನ್ನು ಸೋಲಿಸಿದನು. ಈತನು ಯಶಸ್ವಿಯಾಗಿ ಮಲೆ ಆರ್ಕಿಪೆಲಗೋದ ಸಾಮ್ರಾಜ್ಯಗಳನ್ನು ಆಕ್ರಮಿಸಿದನು.[೭][೮] 13ನೇ ಶತಮಾನದ ಆರಂಭದಲ್ಲಿ ಪಾಂಡ್ಯರ, ಉದಯದಿಂದ ಚೋಳರ ಅವನತಿ ಪ್ರಾರಂಭವಾಯಿತು. ಕಡೆಗೆ ಇವರೇ ಚೋಳರ ಸಂಪೂರ್ಣ ಪತನಕ್ಕೆ ಕಾರಣರಾದರು.[೯][೧೦][೧೧]

ಚೋಳರು ಶಾಶ್ವತವಾದ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ತಮಿಳು ಸಾಹಿತ್ಯದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ದೇವಾಲಯಗಳನ್ನು ಕಟ್ಟುವುದರಲ್ಲಿ ಅವರಲ್ಲಿದ್ದ ಕೌತುಕ ತಮಿಳು ಸಾಹಿತ್ಯ ಮತ್ತು ಶಿಲ್ಪಕಲೆಗೆ ಅವರು ಕೊಟ್ಟ ಅಪಾರ ಕೊಡುಗೆಗಳಿಗೆ ಕಾರಣವಾದವು.[೪] ಚೋಳ ಅರಸರು ಕಟ್ಟಡಗಳನ್ನು ಕಟ್ಟುವುದರಲ್ಲಿ ಅತ್ಯಾಸಕ್ತಿಯನ್ನು ಹೊಂದಿದ್ದರು ಮತ್ತು ತಮ್ಮ ದೇವಸ್ಥಾನಗಳನ್ನು ಪೂಜಾ ಕೇಂದ್ರಗಳನ್ನಾಗಿ ಅಷ್ಟೇ ಅಲ್ಲದೆ ಆರ್ಥಿಕ ಚಟುವಟಿಕೆಯ ಕೇಂದ್ರಗಳನ್ನಾಗಿ ಮಾಡಿದ್ದರು.[೧೨][೧೩] ಅವರು ಕೇಂದ್ರಾಡಳಿತಮಾದರಿಯ ಸರ್ಕಾರ ಅಧಿಕಾರಶಾಹಿಯನ್ನು ಸ್ಥಾಪಿಸಿದ ಮೊದಲಿಗರು

Answered by mannepallilohitaksha
4

ಉತ್ತರ : ಚೋಳದೇಶದಲ್ಲಿದ್ದ ಮೂರು ಗ್ರಾಮಗಳು ಮಣಮಂದ ಪುತ್ತೂರು , ತಿರುವಾರೂರು , ಮತ್ತು ತಿರುವತ್ತಿಯೂರು

Similar questions