India Languages, asked by YogithaMP, 8 months ago

) ಶಾನುಭೋಗರು ಚಿಕ್ಕನಾಯಕನ ಹಳ್ಳಿಯಿಂದ ಹಿಂದಿರುವಾಗ ಏನೆಂದು ಯೋಚಿಸಿದರು?​

Answers

Answered by Anonymous
17

ಶಾನುಭೋಗರ ಮಗಳು, ತಾಯಿಯಿಲ್ಲದ ಹುಡುಗಿ,

ರತ್ನದಂತಹ ಹುಡುಗಿ ಊರಿಗೆಲ್ಲ!

ಬಲುಜಾಣೆ, ಗಂಭೀರೆ, ಹೆಸರು ಸೀತಾದೇವಿ;

ಹನ್ನೆರಡು ತುಂಬಿಹುದು, ಮದುವೆಯಿಲ್ಲ

ತಾಯಿಯಿಲ್ಲದ ಹೆಣ್ಣು, ಮಿಂಚ ಬೀರುವ ಕಣ್ಣು

ಒಮ್ಮೊಮ್ಮೆ ಕಣ್ಣೀರ ಸರಸಿಯಹುದು

ತಾಯಿಯಂದದಿ ಬಂದು ತಂಪನೆರೆಯುವುದೆಂದು

ಇಂಥ ಬಳಿಗೆ ಒಲವೆ, ನಿನ್ನ ಕನಸು?

ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ

ನೀರ ತರುವಾಗವಳ ನೋಡಬೇಕು!

ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ

ಅವಳ ಗಂಡನ ಹೆಸರ ಕೇಳಬೇಕು!

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು

ಹೆಣ್ಣು ನೋಡಲು ಬಂದನವರ ಮನೆಗೆ

'ವೈದಿಕರ ಮನೆಗಳಲಿ ಊಟ ಹೊತ್ತಾಗುವುದು; -

ಒಲ್ಲೆ'ನೆಂದಳು ಸೀತೆ ಕೋಣೆಯೊಳಗೆ!

ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ;

ಒಲಗೆ ನಂದಾ ದೀಪ ನಂದಿ ಹೋಗಿ,

ಫಲವ ನುಡಿದುದು ಹಲ್ಲಿ; ಹೇಳಲೇನಿದೆ ಮುಂದೆ!

ತೆರಳಿದರು ಜೋಯಿಸರು ತಣ್ಣಗಾಗಿ

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು

ಕನ್ನೆ ತೋರಿದಳಂತೆ ಕಾರಣವನು;

'ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು

ತನ್ನ ಕುದಲಿಗಿಂತ ಕಪ್ಪು' ಎಂದು

ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು

ನೋಡಬೇಕೇ ಇಂಥ ಕಪ್ಪು ಗಂಡು?

ಶಾನುಭೋಗರ ಮನೆಯ ತೋರಣವೆ ಹೇಳುವುದು

ಬಂದ ದಾರಿಗೆ ಸುಂಕವಿಲ್ಲವೆಂದು

ಶಾನುಭೋಗರ ಮಗಳು ರತ್ನದಂತಹ ಹುಡುಗಿ;

ಗಂಡು ಸಿಕ್ಕುವುದೊಂದು ಕಷ್ಟವಲ್ಲ;

ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ,

ತಡವಾದರೇನಂತೆ? - ನಷ್ಟವಿಲ್ಲ

Answered by Anonymous
7

Answer:

ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ಹಿಂದಿರುಗುವಾಗ “ಸ್ವಲ್ಪ ದೊಡ್ಡ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಮನೆ ಸೇರಿಕೊಳ್ಳಬಹುದು ” ಎಂದು ಯೋಚಿಸಿದರು.

<marquee>ಧನ್ಯವಾದಗಳು

Similar questions