India Languages, asked by kpspwdd, 7 months ago

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ,
೧. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ.
೨. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
೩. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
೪. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು?
೫. ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?​

Answers

Answered by Mrnobaday
4

Answer:

ಕನ್ನಡ ಕಾಳಿದಾಸ ಮಹಾಸಂಪುಟ.

ಕನ್ನಡ ಬುದ್ಧ ಚರಿತೆ.

ಕನ್ನಡ ಅಮರು ಶತಕ.

ಕನ್ನಡ ಕವಿ ಕೌಮುದಿ.

ಕನ್ನಡ ಭಾಸ ಮಹಾಸಂಪುಟ.

ಕನ್ನಡ ಗಾಥಾಸಪ್ತಶತಿ.

ಕನ್ನಡ ಭರ್ತೃಹರಿಯ ಶತಕತ್ರಯ.

ಕನ್ನಡ ಗೀತ ಗೋವಿಂದ.

ಕನ್ನಡ ಹರ್ಷ ಮಹಾಸಂಪುಟ

Answered by Anonymous
10

Answer:

ಪ್ರಶ್ನೆ ಮತ್ತು ಉತ್ತರ

ಪ್ರಶ್ನೆ 1.ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ.

ಉತ್ತರ:ಹುಸೇನ್ ಸಾಹೇಬರು ಅಬ್ದುಲ್ ರಹೀಮ್ ಸಾಹೇಬರ

ಪೂರ್ವಜರಾಗಿದ್ದು ಜನಪ್ರಿಯರು ಹಾಗೂ ಧನವಂತ ವ್ಯಕ್ತಿಯಾಗಿದ್ದರು. ಅವರು ಮಸೀದಿ ಮಾತ್ರವಲ್ಲ. ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕನ್ನು ಪಡೆದಿದ್ದಾರೆ.

ಪ್ರಶ್ನೆ 2.ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?

ಉತ್ತರ:ಲೇಖಕರ ಹುಟ್ಟೂರಿನಲ್ಲಿ ಒಂದು ಪವಿತ್ರ ಸ್ಥಾನವಿದೆ. ಅಲ್ಲಿ'ಉರುಸ್‌' ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿಲೇಖಕರ ಮನೆತನ . ಒಟ್ಟು ಪ್ರತಿನಿಧಿ ಇದ್ದೆ ಇರಬೇಕು, ಎಂಬ ಸಂಪ್ರದಾಯವಿತ್ತು,

ಪ್ರಶ್ನೆ 3.ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕೆ ಆಕ್ಷೇಪವೇನು?

ಉತ್ತರ:ಲೇಖಕರ ತಾಯಿಗೆ ಒಮ್ಮೆ ಅನಾರೋಗ್ಯದ ಕಾರಣ ಏನನ್ನು ಮಾಡಲಾಗಲಿಲ್ಲ. ಆದ್ದರಿಂದ ಅಂಗಡಿಯಿಂದ ಮಿಠಾಯಿಗಳನ್ನು ತಂದು ಹಂಚಿದರು, ಆಗ ಅತಿಥಿಗಳು - "ತಮ್ಮ ಮನೆಯಿಂದ ಒಂದು ಚೂರು ಅಥವಾ ಕಲ್ಲು ಸಕ್ಕರೆಯ ಹರಳೊ ಕೊಟ್ಟರೂ ಸಾಕಾಗಿತ್ತು. ಅದನೇ ಪ್ರಸಾದವೆಂದು ಸ್ವೀಕರಿಸುತ್ತಿದ್ದವು. ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ ಬಿಟ್ಟು ಅಂಗಡಿಯಿಂದ ತಂದ ಮಿಠಾಯಿ ಕೊಡುವುದು ಸರಿಯೇ?” ಎಂದು ಅತಿಥಿಗಳು ಆಕ್ಷೇಪಿಸಿದರು.

ಪ್ರಶ್ನೆ 4:ಕರೀಮನಿಗೆ ಶಾಲೆಯಲ್ಲಿ ಮಗ ಕಲಿತುದರಿಂದ ಬಂದ ಫಲವೇನು?

ಉತ್ತರ:ಕರೀಮನಿಗೆ ಶಾಲೆಯಲ್ಲಿ ಮಗ ಕಲಿತುದರಿಂದ ಒಂದು ಬೆಳ್ಳಿ ಪದಕ ಹಾಗೂ ಒಂದು ನೂರು ರೂಪಾಯಿ ಬಹುಮಾನವಾಗಿ ಬಂದಿತ್ತು. ಅಲ್ಲದೆ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದನು.

ಪ್ರಶ್ನೆ 5.ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?

ಉತ್ತರಶಾಲಾ ವಾರ್ಷಿಕೋತ್ಸವದಂದು ಕರೀಮ್ ಒಂದು ನಾಟಕದಲ್ಲಿಸ್ತ್ರೀ ಪಾತ್ರವನ್ನು ಅಭಿನಯಿಸಿದ್ದನು. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೇಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡ, ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ, ಎಲ್ಲೋ ಮಾಯವಾಗಿ ಹೋದ.

ಧನ್ಯವಾದಗಳು.

Similar questions