Science, asked by umeshsapalya34, 7 months ago

ಜಲಸಂರಕ್ಷಣೆಯ ಅಗತ್ಯತೆ​

Answers

Answered by rakshithan702
1

Explanation:

ಬಿಸಿಲ ಝಳ ಏರುತ್ತಿದ್ದಂತೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಮನುಷ್ಯರಿಗಷ್ಟೇ ಅಲ್ಲ; ಪ್ರಾಣಿಗಳೂ ಕೂಡ ಪರಿತಪಿಸುವಂತಾಗಿದೆ. ನಾಲ್ಕು ದಶಕಗಳಲ್ಲಿಯೇ ಭೀಕರ ಕ್ಷಾಮ ಕಳೆದ ವರ್ಷ ಕಾಣಿಸಿಕೊಂಡು ಅದರ ಪರಿಣಾಮ ಈಗಲೂ ಮುಂದುವರಿದಿದೆ.

ಭಾರತೀಯ ಕುಟುಂಬ ಅಭಿವೃದ್ಧಿ ಸಮೀಕ್ಷೆ (ಐಎಚ್‌ಡಿಎಸ್‌) ಪ್ರಕಾರ ಗ್ರಾಮಾಂತರ ಪ್ರದೇಶದ ಪ್ರತಿ ನಾಲ್ಕು ಕುಟುಂಬಗಳ ಪೈಕಿ ಒಂದು ಕುಟುಂಬ ಕುಡಿಯುವ ನೀರನ್ನು ಹುಡುಕಿಕೊಂಡು ಅರ್ಧಗಂಟೆ ಸಾಗಬೇಕು. ಉದ್ದನೆ ಸರತಿ ಸಾಲಿನಲ್ಲಿ ನಿಲ್ಲಬೇಕು. ನಗರ-ಪಟ್ಟಣ ಪ್ರದೇಶಗಳಲ್ಲಿ ಶೇ 20 ಕುಟುಂಬಗಳು ಕೂಡ ಕುಡಿಯುವ ನೀರು ಸಂಗ್ರಹಕ್ಕಾಗಿ ಗಂಟೆಗಟ್ಟಲೆ ಸಮಯ ವಿನಿಯೋಗಿಸಬೇಕಾಗಿದೆ. ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲೂಬಿ) ಪ್ರಕಾರ ಶೇ 64ರಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿನ ಸೆಲೆ ಬತ್ತಿ ಹೋಗಿದೆ. ಇದರಿಂದ ಯಾವುದೇ ಊರಿಗೆ ಹೋದರೂ ಹೆಚ್ಚು ಹೆಚ್ಚು ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸುವ ಪರಿಪಾಠ ಚಾಲ್ತಿಯಲ್ಲಿದೆ.

ನೀರಿನ ಬೇಡಿಕೆಯನ್ನು ನೀಗಲು ಸ್ಥಳೀಯ ಆಡಳಿತ ಸಂಸ್ಥೆಗಳು ಕೂಡ ಇದೇ ಪದ್ಧತಿಗೆ ಶರಣಾಗಿದೆ. ಆದರೆ ಹೆಚ್ಚು ಆಳದಿಂದ ನೀರು ತೆಗೆದಷ್ಟೂ ಅದರಲ್ಲಿ ಅಪಾಯಕಾರಿ ಅಂಶಗಳು ಹೆಚ್ಚಿರುತ್ತದೆ. ಆದ್ದರಿಂದಲೇ ದೇಶದಲ್ಲಿ ಕೋಟ್ಯಂತರ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಕಲುಷಿತ ನೀರು ಕುಡಿದು ಅನಾರೋಗ್ಯಪೀಡಿತರಾಗಿ ತಮ್ಮ ಗಳಿಕೆಯ ದುಡ್ಡನ್ನು ಆಸ್ಪತ್ರೆಗಳಿಗೆ ಖರ್ಚು ಮಾಡುತ್ತಿದ್ದಾರೆ.

'ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡು' ಎನ್ನುವಂತೆ ಬಿರು ಬೇಸಿಗೆಯಲ್ಲಿ ಮಾತ್ರ ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ಮಳೆ ಕೊಯ್ಲುವಿನಂಥ ಯೋಜನೆಗಳ ಬಗ್ಗೆ ದೊಡ್ಡ ಗಂಟಲಿನಲ್ಲಿ ಮಾತನಾಡಿ ನಾಲ್ಕು ಹನಿ ಮಳೆ ಬಿದ್ದ ಕೂಡಲೇ ಎಲ್ಲವನ್ನೂ ತಣ್ಣಗೆ ಮರೆತು ಬಿಡುವ ಪ್ರವೃತ್ತಿ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಈ ಬಾರಿ ನಿಧಾನಕ್ಕೆ ಜಲ ಜಾಗೃತಿ ಮೂಡುತ್ತಿದೆ. ಇದಕ್ಕೆ ರಾಜ್ಯವಷ್ಟೇ ಅಲ್ಲ; ದೇಶದ 11 ರಾಜ್ಯಗಳಲ್ಲೇ ಕಾಣಿಸಿಕೊಂಡ ಬರಗಾಲ ಕಾರಣವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ವಾರ್ಷಿಕವಾಗಿ ಒಂದು ಸಾವಿರ ಮಿಲಿಮೀಟರ್‌ ಮಳೆ ಬೀಳುತ್ತದೆ. ಅಂದಾಜು ಇಲ್ಲಿ 4 ಲಕ್ಷ ಕೊಳವೆ ಬಾವಿಗಳಿವೆ. ಇವುಗಳಿಂದ ಪ್ರತಿದಿನ 40 ಕೋಟಿ ಲೀಟರ್‌ ನೀರು ಪಡೆಯಲಾಗುತ್ತಿದೆ. ಬಿಬಿಎಂಪಿ ಪ್ರಕಾರ ಸದ್ಯಕ್ಕೆ ಶೇ. 5ರಷ್ಟು ನೀರನ್ನು ಮಾತ್ರ ಇಂಗಿಸಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಬೇಕು.ಇದಕ್ಕಾಗಿ ಪ್ರತಿವಾರ್ಡ್‌ನಲ್ಲೂ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು. ನಗರದ ತುಂಬ ಇರುವ ಉದ್ಯಾನಗಳನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಬೇಕು.

ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಕೆಲ ಜನಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳು ದನಿ ಎತ್ತಿವೆ. ಇದು ರಾಜ್ಯಾದ್ಯಂತ ಆಗಲೇಬೇಕಾದ ಕೆಲಸ. ಚಾವಣಿ ನೀರಿನ ಸಂಗ್ರಹ ಕಡ್ಡಾಯ ಎಂಬ ಕಾನೂನಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ. ಇದನ್ನು ರಾಜ್ಯವ್ಯಾಪಿಯಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

ಸ್ಥಳೀಯ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸಬೇಕು. ನೀರಿನ ಕ್ಷಾಮ ತೀವ್ರವಾಗುತ್ತಿರುವ ಮತ್ತು ಲಭ್ಯವಿರುವ ನೀರು ಕಲುಷಿತವಾಗಿರುವುದರಿಂದ ಪರ್ಯಾಯ ಮಾರ್ಗಗಳತ್ತ ಗಮನ ಹರಿಸುವುದು ಅತ್ಯಂತ ತುರ್ತಿನ ಕಾರ್ಯವಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಸರಕಾರ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟು, ಚೆಕ್‌ ಡ್ಯಾಂ ಕಟ್ಟಲು 50 ಕೋಟಿ ರೂ ಮೀಸಲಿರಿಸಿದೆ. ನೀರಾವರಿ ಕೈಗೊಳ್ಳುವ ರೈತರು ಕಡ್ಡಾಯವಾಗಿ ಜಲ ಮರುಪೂರಣ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

hope this is helpful please mark me as brain list and thank me rate me

Similar questions